ದೆಹಲಿ, ಮೇ16: ಸುಪ್ರೀಂ ಕೋರ್ಟ್ವೊಂದು ( Supreme court,) ಮಹತ್ವದ ನಿರ್ಧಾರವನ್ನು ತಿಳಿಸಿದೆ. ತಾಯಿಯ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಕೂಡ ಕೆಲವೊಂದು ಹಕ್ಕುಗಳು ಇದೆ. ಅದರಲ್ಲೂ ಬದುಕುವ ಹಕ್ಕು ಖಂಡಿತ ಇದೆ ಎಂದು ಹೇಳಿದೆ. ಗರ್ಭಪಾತಕ್ಕೆ ಅನುಮತಿ ಕೋರಿ 20 ವರ್ಷದ ಯುವತಿಯ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಈ ಆದೇಶವನ್ನು ನೀಡಿದೆ. ಗರ್ಭದಲ್ಲಿರುವ ಮಗುವಿಗೆ (ಭ್ರೂಣ) ಬದುಕುವ ಮೂಲಭೂತ ಹಕ್ಕು ಕೂಡ ಇದೆ ಎಂದು ಸುಪ್ರೀಂ ಒತ್ತಿ ಹೇಳಿದೆ. ಬದುಕುವ ಹಕ್ಕು ಮಾತ್ರವಲ್ಲ, ಗರ್ಭದಲ್ಲಿರುವ ಮಗುವಿಗೆ ಈಗಾಗಲೇ ಹುಟ್ಟಿದ ಮಗುವಿನಂತೆ ಸಮಾನ ಹಕ್ಕುಗಳಿವೆ ಎಂದು ಹೇಳಿದೆ. ಈ ಬಗ್ಗೆ 2023ರಲ್ಲೇ ಸುಪ್ರೀಂ ಕೋರ್ಟ್ ಈ ಕುರಿತು ಮಹತ್ವದ ತೀರ್ಪು ನೀಡಿತ್ತು.
ಇತ್ತೀಚೆಗೆ ಅವಿವಾಹಿತ ಬಾಲಕಿ ಗರ್ಭಪಾತಕ್ಕೆ ಅವಕಾಶ ನೀಡುವಂತೆ ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಏಪ್ರಿಲ್ 16 ರಂದು ಹುಡುಗಿಗೆ ಹೊಟ್ಟೆಯ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ತಿಳಿಸಲಾಯಿತು. ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಆಕೆಯ ಹೊಟ್ಟೆಯಲ್ಲಿ 27 ವಾರಗಳ ಮಗು ಇರುವುದು ಪತ್ತೆಯಾಗಿದೆ. ಸಾಮಾನ್ಯವಾಗಿ ಗರ್ಭಪಾತವನ್ನು 24 ವಾರಗಳವರೆಗೆ ಮಾತ್ರ ಮಾಡಬಹುದು. ಹೀಗಾಗಿ ಇದಕ್ಕೆ ನ್ಯಾಯಾಲಯದ ಅನುಮತಿ ಕೋರಿದ್ದರು. ಮೇ 3 ರಂದು ನೀಡಿದ ಆದೇಶದಲ್ಲಿ, ಈ ಅರ್ಜಿಗೆ ಹೈಕೋರ್ಟ್ ಅನುಮತಿ ನಿರಾಕರಿಸಿತ್ತು.
ಗರ್ಭದಲ್ಲಿರುವ ಮಗುವಿಗೆ ಜೀವಿಸುವ ಹಕ್ಕಿದೆ ಹಾಗೆಯೇ ಪೂರ್ವಜರ ಆಸ್ತಿಯಲ್ಲಿ ಸಮಾನ ಹಕ್ಕುಗಳಿವೆ ಎಂದು ತಜ್ಞರು ಹೇಳುತ್ತಾರೆ. ಹಿಂದೂ ಉತ್ತರಾಧಿಕಾರ ಕಾಯಿದೆ (5) ಸೆಕ್ಷನ್ 20 ರ ಅಡಿಯಲ್ಲಿ ಜನಿಸಿದ ಮಗು ಮತ್ತು ಗರ್ಭದಲ್ಲಿರುವ ಮಗುವಿನ ಹಕ್ಕುಗಳು ಸಮಾನವಾಗಿವೆ ಎಂದು ಹೇಳುತ್ತದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪು ನೀಡಿದೆ ಎಂದು ಸುಪ್ರೀಂ ಕೋರ್ಟ್ ವಕೀಲ ಅಶ್ವಿನಿ ಕುಮಾರ್ ದುಬೆ ಹೇಳುತ್ತಾರೆ. 2023 ರಲ್ಲಿ ನೀಡಿದ ಮಹತ್ವದ ತೀರ್ಪಿನಲ್ಲಿ, ಕಾನೂನುಬದ್ಧವಾಗಿ ಮತ್ತು ಕಾನೂನುಬಾಹಿರವಾಗಿ ಜನಿಸಿದ ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಈ ಹಕ್ಕು ತಂದೆಯ ಸ್ವಂತ ಆಸ್ತಿಯ ಮೇಲೆ ಮತ್ತು ಅವರ ಪೂರ್ವಜರ ಆಸ್ತಿಯ ಮೇಲೆ ಇರುತ್ತದೆ.
ಇದನ್ನೂ ಓದಿ: ಈ ವ್ಯಕ್ತಿ ಕಾರು ಓಡಿಸುವಾಗಲೂ ಹೆಲ್ಮೆಟ್ ಧರಿಸುತ್ತಾರೆ; ಇಲ್ಲಿದೆ ಕಾರಣ
ಏಪ್ರಿಲ್ 25 ರಂದು, ಬಾಲಕಿಯ ಅರ್ಜಿಯ ಮೇರೆಗೆ, ಭ್ರೂಣದ ಸ್ಥಿತಿ ಮತ್ತು ಅರ್ಜಿದಾರರ ಸ್ಥಿತಿಯನ್ನು ಕಂಡುಕೊಳ್ಳಲು ನ್ಯಾಯಾಲಯವು ಏಪ್ರಿಲ್ 25 ರಂದು ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ದೆಹಲಿಯ ಏಮ್ಸ್‌ಗೆ ಆದೇಶ ನೀಡುತ್ತದೆ. ನಂತರ ಏಮ್ಸ್ ಆಸ್ಪತ್ರೆ ನೀಡಿದ ವರದಿಗಳ ಪ್ರಕಾರ ಭ್ರೂಣದಲ್ಲಿ ಯಾವುದೇ ಅಸಹಜತೆ ಇಲ್ಲ ಎಂದು ಹೇಳಿದೆ. ಗರ್ಭಾವಸ್ಥೆಯಲ್ಲಿ ತಾಯಿಗೆ ಯಾವುದೇ ಅಪಾಯವಿಲ್ಲ. ಆದ್ದರಿಂದ ಭ್ರೂಣವನ್ನು ಕೊಲ್ಲುವುದು ನೈತಿಕವಾಗಿ ಮತ್ತು ಕಾನೂನುಬದ್ಧವಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:15 pm, Thu, 16 May 24