ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ (Kupwara) ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಭಾರತೀಯ ಸೇನೆ ಗುರುವಾರ ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದ ನಂತರ ಇಬ್ಬರು ಭಯೋತ್ಪಾದಕರನ್ನು ಎನ್ಕೌಂಟರ್ನಲ್ಲಿ (Encounter) ಹತ್ಯೆ ಮಾಡಲಾಗಿದೆ. ತಂಗ್‌ಧರ್ ಸೆಕ್ಟರ್‌ನ ಬೇಲಿಯ ಇನ್ನೊಂದು ಬದಿಯಲ್ಲಿ ಶವಗಳು ಬಿದ್ದಿರುವುದು ಕಂಡುಬಂದಿದೆ.
ಬಾರಾಮುಲ್ಲಾ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳಿರುವಾಗ ಉತ್ತರ ಕಾಶ್ಮೀರದ ಕುಪ್ವಾರದ ತಂಗ್‌ಧರ್ ಪ್ರದೇಶದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಭದ್ರತಾ ಪಡೆಗಳು ಪ್ರಮುಖ ಭಯೋತ್ಪಾದಕರ ಒಳನುಸುಳುವಿಕೆಯ ಪ್ರಯತ್ನವನ್ನು ವಿಫಲಗೊಳಿಸಿವೆ. ಒಳನುಸುಳುವಿಕೆ ಯತ್ನವನ್ನು ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ತಂಡ ವಿಫಲಗೊಳಿಸಿತು.
ಇದನ್ನೂ ಓದಿ: Terrorists Encounter: ಕುಲ್ಗಾಮ್ನಲ್ಲಿ ಮತ್ತೋರ್ವ ಉಗ್ರನ ಎನ್ಕೌಂಟರ್; ಮುಂದುವರಿದ ಕಾರ್ಯಾಚರಣೆ
ಮೇ 20ರಂದು ಚುನಾವಣೆ ನಡೆಯಲಿರುವ ಕುಪ್ವಾರದ ಈ ಪ್ರದೇಶವು ಬಾರಾಮುಲ್ಲಾ ಸಂಸದೀಯ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಶ್ರೀನಗರದಲ್ಲಿ ದಾಖಲೆ ಮಟ್ಟದ ಮತದಾನದ ನಂತರ, ಬಾರಾಮುಲ್ಲಾ ಮತ್ತು ಉತ್ತರ ಕಾಶ್ಮೀರದಲ್ಲಿ ಹೆಚ್ಚಿನ ಮತದಾನದ ಪ್ರಮಾಣವು ಕಂಡುಬರಬಹುದು ಎಂದು ನಿರೀಕ್ಷಿಸಲಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಇನ್ನೊಂದು ಬದಿಯಲ್ಲಿ ಒಳನುಸುಳುತ್ತಿರುವ ಉಗ್ರರ 4 ಮೃತದೇಹಗಳು ಪತ್ತೆಯಾಗಿದ್ದು, ಇನ್ನೂ ಹೆಚ್ಚಿನ ಭಯೋತ್ಪಾದಕರ ಪತ್ತೆಗಾಗಿ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ: Naxals Encounter: ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಇಬ್ಬರು ಮಹಿಳೆ ಸೇರಿ 3 ನಕ್ಸಲೀಯರ ಎನ್ಕೌಂಟರ್
ಕಳೆದ ತಿಂಗಳು ಇದೇ ರೀತಿಯ ಘಟನೆಯಲ್ಲಿ, ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿ ಎಲ್ಒಸಿ ಉದ್ದಕ್ಕೂ ಒಳನುಸುಳುವಿಕೆ ಪ್ರಯತ್ನವನ್ನು ಸೇನೆ ವಿಫಲಗೊಳಿಸಿದ ನಂತರ ಒಬ್ಬ ಉಗ್ರನನ್ನು ಹತ್ಯೆ ಮಾಡಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ