Yea ಎಂದು ಹೇಳ್ಬೇಡಿ, ಇದು ಕಾಫಿ ಶಾಪ್ ಅಲ್ಲ: ವಿಚಾರಣೆಯ ಸಮಯದಲ್ಲಿ ವಕೀಲರಿಗೆ ಸಿಜೆಐ ಚಂದ್ರಚೂಡ್ ತರಾಟೆ

ವಕೀಲರು ತಮ್ಮ ವಾದವನ್ನು ಪ್ರಾರಂಭಿಸಿದಾಗ ಮಧ್ಯಪ್ರವೇಶಿಸಿದ ಸಿಜೆಐ ಚಂದ್ರಚೂಡ್ ಅವರು, "yea yea ಎಂದು ಹೇಳಬೇಡಿ. Yes ಎಂದು ಹೇಳಿ. ಇದು ಕಾಫಿ ಶಾಪ್ ಅಲ್ಲ. ಇದು ನ್ಯಾಯಾಲಯ. ಜನರು yea ಎಂದು ಹೇಳುವುದು ನನಗೆ ಸ್ವಲ್ಪ ಅಲರ್ಜಿಯಾಗಿದೆ. ನ್ಯಾಯಮೂರ್ತಿ ಗೊಗೋಯ್ ಅವರು ಈ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾಗಿದ್ದರು. ನೀವು ನ್ಯಾಯಾಧೀಶರ ವಿರುದ್ಧ ಈ ರೀತಿಯ ಮನವಿಯನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.

Yea ಎಂದು ಹೇಳ್ಬೇಡಿ, ಇದು ಕಾಫಿ ಶಾಪ್ ಅಲ್ಲ: ವಿಚಾರಣೆಯ ಸಮಯದಲ್ಲಿ ವಕೀಲರಿಗೆ ಸಿಜೆಐ ಚಂದ್ರಚೂಡ್ ತರಾಟೆ
ಡಿ.ವೈ. ಚಂದ್ರಚೂಡ್
Follow us
|

Updated on: Sep 30, 2024 | 2:45 PM

ದೆಹಲಿ ಸೆಪ್ಟೆಂಬರ್ 30: ವಿಚಾರಣೆ ವೇಳೆ ಪದಗಳ ಆಯ್ಕೆಯ ಕುರಿತು ಸುಪ್ರೀಂಕೋರ್ಟ್‌ನಲ್ಲಿ (Supreme court) ಹಾಜರಿದ್ದ ವಕೀಲರನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ಸೋಮವಾರ ತರಾಟೆಗೆ ತೆಗೆದುಕೊಂಡರು. ಸಿಜೆಐ ಚಂದ್ರಚೂಡ್ ವಕೀಲರಲ್ಲಿ ನೀವು ಎಲ್ಲದಕ್ಕೂ ‘yea’ ಎಂದು ಹೇಳುವ ಬದಲು ‘yes’ ಎಂದು ಬಳಸಿ. ನಾವು ಕೋರ್ಟ್ ರೂಮಿನಲ್ಲಿದ್ದೇನೆಯೇ ಹೊರತು ಕಾಫಿ ಶಾಪ್ ಅಲ್ಲ ಎಂದು ಹೇಳಿದ್ದಾರೆ ಮಾಜಿ ಸಿಜೆಐ ರಂಜನ್ ಗೊಗೊಯ್ ವಿರುದ್ಧ ಆಂತರಿಕ ತನಿಖೆಯನ್ನು ಕೋರಿ ವಕೀಲರು ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶರನ್ನು ಪ್ರತಿವಾದಿಯನ್ನಾಗಿ ಮಾಡಿ PIL ಅನ್ನು ಹೇಗೆ ಸಲ್ಲಿಸಬಹುದು ಎಂದು ಚಂದ್ರಚೂಡ್ ಕೇಳಿದಾಗ, ವಕೀಲರು, “yea, yea, yea, ಆಗಿನ CJI ರಂಜನ್ ಗೊಗೊಯ್ … ನನ್ನನ್ನು ಕ್ಯುರೇಟಿವ್ ಸಲ್ಲಿಸಲು ಕೇಳಲಾಯಿತು ಎಂದು ಹೇಳಿದ್ದಾರೆ.

ವಕೀಲರು ತಮ್ಮ ವಾದವನ್ನು ಪ್ರಾರಂಭಿಸಿದಾಗ ಮಧ್ಯಪ್ರವೇಶಿಸಿದ ಸಿಜೆಐ ಚಂದ್ರಚೂಡ್ ಅವರು, “yea yea ಎಂದು ಹೇಳಬೇಡಿ. Yes ಎಂದು ಹೇಳಿ. ಇದು ಕಾಫಿ ಶಾಪ್ ಅಲ್ಲ. ಇದು ನ್ಯಾಯಾಲಯ. ಜನರು yea ಎಂದು ಹೇಳುವುದು ನನಗೆ ಸ್ವಲ್ಪ ಅಲರ್ಜಿಯಾಗಿದೆ. ನ್ಯಾಯಮೂರ್ತಿ ಗೊಗೋಯ್ ಅವರು ಈ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾಗಿದ್ದರು. ನೀವು ನ್ಯಾಯಾಧೀಶರ ವಿರುದ್ಧ ಈ ರೀತಿಯ ಮನವಿಯನ್ನು ಸಲ್ಲಿಸಲು ಸಾಧ್ಯವಿಲ್ಲ. ನೀವು ಪೀಠದ ಮುಂದೆ ಯಶಸ್ವಿಯಾಗದ ಕಾರಣ ಆಂತರಿಕ ವಿಚಾರಣೆಯನ್ನು ಕೋರಲು ಸಾಧ್ಯವಿಲ್ಲ” ಎಂದು ಸಿಜೆಐ ಚಂದ್ರಚೂಡ್ ಹೇಳಿದ್ದಾರೆ.

ಇಂದು ಸುಪ್ರೀಂಕೋರ್ಟ್ ಮುಂದೆ ಬಹು ಪ್ರಮುಖ ವಿಚಾರಣೆಗಳನ್ನು ನಿಗದಿಪಡಿಸಲಾಗಿದೆ. ಪ್ರಸಿದ್ಧ ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸೋಮವಾರ ಹಲವು ಅರ್ಜಿಗಳ ವಿಚಾರಣೆ ನಡೆಸಲಿದೆ.

ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಸಾದವಾಗಿ ವಿತರಿಸಲಾದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಹೇಳಿಕೆ ನೀಡಿದ ನಂತರ ಈ ವಿವಾದ ಭುಗಿಲೆದ್ದಿದೆ.

ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದ ವೈವಿ ಸುಬ್ಬಾ ರೆಡ್ಡಿ ಮತ್ತು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಮಾಜಿ ಅಧ್ಯಕ್ಷರು ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆಗೆ ಒತ್ತಾಯಿಸಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇದಲ್ಲದೆ, ಕಳೆದ ತಿಂಗಳು ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತ ಪ್ರಕರಣವನ್ನು ಸಹ ವಿಚಾರಣೆ ನಡೆಸಲಿದೆ.

ಇದನ್ನೂ ಓದಿ: ರಾಜಕೀಯದಿಂದ ದೇವರನ್ನು ದೂರವಿಡಿ: ಸುಪ್ರೀಂಕೋರ್ಟ್​

ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠವು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರು ಮಧ್ಯಾಹ್ನ 2 ರಿಂದ ಪ್ರಾರಂಭವಾಗುವ ದ್ವಿತೀಯಾರ್ಧದಲ್ಲಿ ವಿಚಾರಣೆ ನಡೆಸಲಿದ್ದಾರೆ. ವಿಚಾರಣೆಯನ್ನು ಸೆಪ್ಟೆಂಬರ್ 27 ಕ್ಕೆ ನಿಗದಿಪಡಿಸಲಾಗಿತ್ತು ಆದರೆ ನಂತರ ಸೋಮವಾರಕ್ಕೆ ಮುಂದೂಡಲಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ