ಮುಂಬೈ ರೈಲುಗಳಲ್ಲಿ ಪ್ರಯಾಣಿಸಲು ಎರಡೂ ಡೋಸ್ ಕೊವಿಡ್ ಲಸಿಕೆ ಪಡೆಯುವುದು ಕಡ್ಡಾಯ

| Updated By: ಸುಷ್ಮಾ ಚಕ್ರೆ

Updated on: Oct 26, 2021 | 5:16 PM

ಮಹಾರಾಷ್ಟ್ರ ಸರ್ಕಾರ ಮುಂಬೈನ ಲೋಕಲ್ ರೈಲು ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರ ಅನುಸಾರ ಮುಂಬೈನ ಲೋಕಲ್ ರೈಲಿನಲ್ಲಿ ಪ್ರಯಾಣಿಸುವವರು ಎರಡೂ ಡೋಸ್ ಕೊವಿಡ್ ಲಸಿಕೆಗಳನ್ನು ಪಡೆದಿರಬೇಕಾದುದು ಕಡ್ಡಾಯವಾಗಿದೆ.

ಮುಂಬೈ ರೈಲುಗಳಲ್ಲಿ ಪ್ರಯಾಣಿಸಲು ಎರಡೂ ಡೋಸ್ ಕೊವಿಡ್ ಲಸಿಕೆ ಪಡೆಯುವುದು ಕಡ್ಡಾಯ
ಮುಂಬೈ ಲೋಕಲ್ ರೈಲು
Follow us on

ಮುಂಬೈ: ಕೊವಿಡ್ ಸಾಂಕ್ರಾಮಿಕ ರೋಗದ ಸಂಭಾವ್ಯ ಮೂರನೇ ಅಲೆ ಸದ್ಯದಲ್ಲೇ ಭಾರತಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ. ಇದೀಗ ಹಲವು ದೇಶಗಳಲ್ಲಿ ಭಾರತದ ಪ್ರಯಾಣಿಕರಿಗೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ. ಆದರೆ, ಮಹಾರಾಷ್ಟ್ರ ಸರ್ಕಾರವು ಮುಂಬೈನ ಲೋಕಲ್ ರೈಲು ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರ ಅನುಸಾರ ಮುಂಬೈನ ಲೋಕಲ್ ರೈಲಿನಲ್ಲಿ ಪ್ರಯಾಣಿಸುವವರು ಎರಡೂ ಡೋಸ್ ಕೊವಿಡ್ ಲಸಿಕೆಗಳನ್ನು ಪಡೆದಿರಬೇಕಾದುದು ಕಡ್ಡಾಯವಾಗಿದೆ.

ಮಹಾರಾಷ್ಟ್ರದಲ್ಲಿ ಸರ್ಕಾರಿ ಕಚೇರಿಗಳು ಹಾಗೂ ಹಲವಾರು ಕಂಪನಿಗಳಲ್ಲಿ ಈಗಾಗಲೇ ಉದ್ಯೋಗಿಗಳನ್ನು ಕಚೇರಿಗೆ ಕರೆಯಲಾಗಿದೆ. ಕಚೇರಿಯಿಂದ ಕೆಲಸ ನಿರ್ವಹಿಸುವವರು, ಕಾರ್ಮಿಕರು ಮತ್ತು ಸರ್ಕಾರಿ ನೌಕರರಿಗೆ ಮುಂಬೈ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸಲು ಸಂಪೂರ್ಣ ವ್ಯಾಕ್ಸಿನೇಷನ್ ಕಡ್ಡಾಯವಾಗಿದೆ ಎಂದು ರಾಜ್ಯ ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.

ಕೋವಿಡ್ -19 ಲಸಿಕೆಯ ಎರಡೂ ಡೋಸ್‌ಗಳನ್ನು ಹಾಕಿಸಿಕೊಂಡ ಹಾಗೂ ಎರಡನೇ ಡೋಸ್ ಹಾಕಿಸಿಕೊಂಡು 14 ದಿನಗಳು ಕಳೆದುಹೋದ ಜನರನ್ನು ಸಂಪೂರ್ಣ ಲಸಿಕೆ ಹಾಕಿಸಿಕೊಂಡ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ ಎಂದು ಮಾರ್ಗಸೂಚಿಯ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಪ್ರಸ್ತುತ, ಕೇಂದ್ರ ರೈಲ್ವೇ ಮತ್ತು ಪಶ್ಚಿಮ ರೈಲ್ವೇ ಜನಸಂದಣಿಯನ್ನು ಕಡಿಮೆ ಮಾಡುವ ಸಲುವಾಗಿ ದೈನಂದಿನ ಟಿಕೆಟ್‌ಗಳ ಬದಲಿಗೆ ಲಸಿಕೆ ಹಾಕಿದ ಪ್ರಯಾಣಿಕರಿಗೆ ಮಾತ್ರ ಮಾಸಿಕ ಪಾಸ್‌ಗಳನ್ನು ನೀಡಲಾಗುತ್ತಿದೆ.

ಕೇಂದ್ರ ಮತ್ತು ಪಶ್ಚಿಮ ರೈಲ್ವೇಗಳು ಕ್ರಮವಾಗಿ 1,774 ಮತ್ತು 1,367 ರೈಲುಗಳ ಸಂಚಾರವನ್ನು ಅಕ್ಟೋಬರ್ 28ರಿಂದ ಪ್ರಾರಂಭಿಸುತ್ತಿವೆ. ಪ್ರಸ್ತುತ, ವಲಯ ರೈಲ್ವೆಗಳು ಕ್ರಮವಾಗಿ 1,702 ಮತ್ತು 1,304 ಸಬರ್ಬನ್ ಸೇವೆಗಳನ್ನು ನಡೆಸುತ್ತಿವೆ. ಇಲ್ಲಿಯವರೆಗೆ, ಎರಡನೇ ಡೋಸ್ ನಂತರ 14 ದಿನಗಳ ಕಾಯುವ ಅವಧಿಯನ್ನು ಪೂರ್ಣಗೊಳಿಸಿದ ಸಂಪೂರ್ಣ ಲಸಿಕೆ ಪಡೆದ ನಾಗರಿಕರನ್ನು ಹೊರತುಪಡಿಸಿ, ಸರ್ಕಾರಿ ನೌಕರರು ಮತ್ತು ಅಗತ್ಯ ಸೇವೆಗಳ ಸಿಬ್ಬಂದಿಗೆ ಮಾತ್ರ ಉಪನಗರ ವಲಯದ ರೈಲುಗಳಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗಿತ್ತು.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಆಚರಣೆಗೆ ಕೊವಿಡ್ ತಾಂತ್ರಿಕ ಸಲಹಾ ಸಮಿತಿಯಿಂದ ನಿಯಮ ಶಿಫಾರಸು; ಏನೇನಿದೆ ನಿಯಮಗಳು?

ಮಂಡ್ಯ ಮಿಮ್ಸ್​ನಲ್ಲಿ ಅವ್ಯವಸ್ಥೆಯ ಆಗರ; ಕೊವಿಡ್-19 ಮಾರ್ಗಸೂಚಿ ಉಲ್ಲಂಘಿಸಿ ಎರಡು ಬೆಡ್ ಜೋಡಿಸಿ ಮೂವರು ಬಾಣಂತಿಯರಿಗೆ ಚಿಕಿತ್ಸೆ