Indian Navy: ಗೌಪ್ಯ ಮಾಹಿತಿ ಸೋರಿಕೆ ಆರೋಪದಲ್ಲಿ ಸಿಬಿಐನಿಂದ ನೌಕಾಪಡೆ ಅಧಿಕಾರಿಯ ಬಂಧನ
ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದಲ್ಲಿ ನೌಕಾ ಪಡೆಯ ಕರ್ತವ್ಯನಿರತ ಹಿರಿಯ ಅಧಿಕಾರಿ ಮತ್ತು ಇಬ್ಬರು ನಿವೃತ್ತ ಅಧಿಕಾರಿಗಳನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ನವದೆಹಲಿ: ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ನೌಕೆಗಳ ನವೀಕರಣದ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದಲ್ಲಿ ನೌಕಾ ಪಡೆಯ ಕರ್ತವ್ಯನಿರತ ಹಿರಿಯ ಅಧಿಕಾರಿ ಮತ್ತು ಇಬ್ಬರು ನಿವೃತ್ತ ಅಧಿಕಾರಿಗಳನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ, ಭಾರತೀಯ ನೌಕಾಪಡೆ ಕೂಡ ಈ ವಿಚಾರವಾಗಿ ಆಂತರಿಕ ತನಿಖೆ ಆರಂಭಿಸಿದೆ. ರಷ್ಯಾ ಮೂಲದ ಜಲಾಂತರ್ಗಾಮಿ ನೌಕೆಗಳು ಭಾರತ ಮತ್ತು ವಿದೇಶಗಳಲ್ಲಿ ಮರು ಹೊಂದಿಸಲ್ಪಟ್ಟಿವೆ ಮತ್ತು ಭಾರತೀಯ ನೌಕಾಪಡೆಯ ಮುಖ್ಯ ಆಧಾರವಾಗಿದೆ. ಇತ್ತೀಚಿನ ದಿನಗಳಲ್ಲಿ ರಕ್ಷಣಾ ಸಿಬ್ಬಂದಿಯನ್ನು ಒಳಗೊಂಡಂತೆ ಹಲವು ಸೂಕ್ಷ್ಮ ಮಾಹಿತಿ ಸೋರಿಕೆ ಪ್ರಕರಣಗಳು ನಡೆಯುತ್ತಿವೆ.
ಈ ಪ್ರಕರಣದಲ್ಲಿ ನೌಕಾಪಡೆಯ ಮತ್ತಷ್ಟು ಅಧಿಕಾರಿಗಳನ್ನು ಬಂಧಿಸುವ ಸಾಧ್ಯತೆ ಇದೆ. ಗೌಪ್ಯ ಮಾಹಿತಿಗಳ ಸೋರಿಕೆಯಲ್ಲಿ ವಿದೇಶಿ ಗುಪ್ತಚರ ಸಂಸ್ಥೆಗಳು ಭಾಗಿಯಾಗಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನೌಕಾಪಡೆಯಲ್ಲಿ ಕಮಾಂಡರ್ ಹುದ್ದೆಯಲ್ಲಿರುವ ಓರ್ವ ಅಧಿಕಾರಿ ವಿರುದ್ಧ ಗೌಪ್ಯ ಮಾಹಿತಿ ಹಂಚಿಕೊಂಡ ಆರೋಪ ಹೊರಿಸಲಾಗಿದೆ. ಅಲ್ಲದೆ, ಈ ಪ್ರಕರಣದಲ್ಲಿ ಇಬ್ಬರು ನಿವೃತ್ತ ಅಧಿಕಾರಿಗಳೂ ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದ್ದು, ಅವರಿಬ್ಬರನ್ನೂ ಬಂಧಿಸಿರುವ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
CBI arrests Navy officers in information leak case, Navy orders high-level investigation
Read @ANI Story | https://t.co/d2OiAuh1lS#IndianNavy #CBI pic.twitter.com/q3p5uSErpS
— ANI Digital (@ani_digital) October 26, 2021
ಸೋವಿಯತ್ ಒಕ್ಕೂಟದಲ್ಲಿ ವಿನ್ಯಾಸಗೊಳಿಸಿರುವ ಕಿಲೋ ವರ್ಗದ ಜಲಾಂತರ್ಗಾಮಿ ನೌಕೆಗಳನ್ನು ಹಲವಾರು ದೇಶಗಳ ನೌಕಾಪಡೆಯಲ್ಲಿ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಈ ಜಲಾಂತರ್ಗಾಮಿ ನೌಕೆಗಳನ್ನು ಸಿಂಧುಘೋಷ್ ವರ್ಗದ ಅಡಿಯಲ್ಲಿ ವರ್ಗೀಕರಿಸಲಾಗಿದೆ. ಇಲ್ಲಿಯವರೆಗೆ ಸರ್ಕಾರವು ಇಂತಹ 10 ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಿದೆ. ಈ ನೌಕೆಗಳನ್ನು ಇದೀಗ ನವೀಕರಿಸಲಾಗುತ್ತಿದ್ದು, ನವೀಕರಣದ ಮಾಹಿತಿಯನ್ನು ಈ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ನೌಕಾಪಡೆಯ ಒಬ್ಬರು ಹಾಲಿ ಅಧಿಕಾರಿ ಹಾಗೂ ಇಬ್ಬರು ನಿವೃತ್ತ ಅಧಿಕಾರಿಗಳನ್ನು ಸಿಬಿಐ ಬಂಧಿಸಿ, ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ: ತಂಬಾಕು ಪ್ರಿಯರಿಗೆ ಶಾಕ್; ಪಶ್ಚಿಮ ಬಂಗಾಳದಲ್ಲಿ 1 ವರ್ಷ ಗುಟ್ಕಾ, ಪಾನ್ ಮಸಾಲ ಮಾರಾಟ ನಿಷೇಧ
ಕನ್ನಡ ಕಲಿಕೆ ಕಡ್ಡಾಯ ನೀತಿಯನ್ನು ಮರುಪರಿಶೀಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸಲಹೆ ನೀಡಿದ ಹೈಕೋರ್ಟ್