AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನ ಮರಿ ಎಂದು ಭಾವಿಸಿ 3 ತಿಂಗಳ ಮಗುವನ್ನು ಒತ್ತೆಯಾಳಾಗಿರಿಸಿಕೊಂಡ ಮಂಗ

ಮಂಗ(Monkey)ವೊಂದು ಮೂರು ತಿಂಗಳ ಮಗುವನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಘಟನೆ ಮುಜಫರ್​ನಗರದ ಚರ್ತವಾಲ್ ಪಟ್ಟಣದಲ್ಲಿ ನಡೆದಿದೆ. ಆ ದೃಶ್ಯ ಇಡೀ ಊರನ್ನೇ ಬೆಚ್ಚಿಬೀಳಿಸಿತ್ತು. ಮೂರು ತಿಂಗಳ ಹಸುಗೂಸನ್ನು ತನ್ನ ಕೈಯಲ್ಲಿ ಹಿಡಿದುಕೊಂಡು, ಎರಡು ಗಂಟೆಗಳ ಕಾಲ ಇಡೀ ಊರನ್ನೇ ಆತಂಕದ ತುದಿಯಲ್ಲಿ ನಿಲ್ಲಿಸಿದ್ದ ಮಂಗನ ಕಥೆ ಈಗ ವೀಡಿಯೊ ಸಮೇತ ವೈರಲ್ ಆಗಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ, ಗುಲಿಸ್ತಾ ಅವರ ಮನೆಯಲ್ಲಿ ಮೂರು ತಿಂಗಳ ಮಗು ಹಾಸಿಗೆಯ ಮೇಲೆ ನೆಮ್ಮದಿಯಾಗಿ ನಿದ್ದೆ ಮಾಡುತ್ತಿತ್ತು. ಮನೆಯವರೆಲ್ಲಾ ಕೆಲಸದಲ್ಲಿ ನಿರತರಾಗಿದ್ದಾಗ, ಹೆಣ್ಣು ಮಂಗವೊಂದು ಛಾವಣಿಯ ಮೂಲಕ ಸದ್ದಿಲ್ಲದೆ ಮನೆಯೊಳಗೆ ನುಸುಳಿತ್ತು.

ತನ್ನ ಮರಿ ಎಂದು ಭಾವಿಸಿ 3 ತಿಂಗಳ ಮಗುವನ್ನು ಒತ್ತೆಯಾಳಾಗಿರಿಸಿಕೊಂಡ ಮಂಗ
ಕೋತಿImage Credit source: Free Press Journal
ನಯನಾ ರಾಜೀವ್
|

Updated on:Apr 22, 2026 | 3:08 PM

Share

ಮುಜಫರ್ ನಗರ, ಏಪ್ರಿಲ್ 22: ಮಂಗ(Monkey)ವೊಂದು ಮೂರು ತಿಂಗಳ ಮಗುವನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಘಟನೆ ಮುಜಫರ್​ನಗರದ ಚರ್ತವಾಲ್ ಪಟ್ಟಣದಲ್ಲಿ ನಡೆದಿದೆ. ಆ ದೃಶ್ಯ ಇಡೀ ಊರನ್ನೇ ಬೆಚ್ಚಿಬೀಳಿಸಿತ್ತು. ಮೂರು ತಿಂಗಳ ಹಸುಗೂಸನ್ನು ತನ್ನ ಕೈಯಲ್ಲಿ ಹಿಡಿದುಕೊಂಡು, ಎರಡು ಗಂಟೆಗಳ ಕಾಲ ಇಡೀ ಊರನ್ನೇ ಆತಂಕದ ತುದಿಯಲ್ಲಿ ನಿಲ್ಲಿಸಿದ್ದ ಮಂಗನ ಕಥೆ ಈಗ ವೀಡಿಯೊ ಸಮೇತ ವೈರಲ್ ಆಗಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ, ಗುಲಿಸ್ತಾ ಅವರ ಮನೆಯಲ್ಲಿ ಮೂರು ತಿಂಗಳ ಮಗು ಹಾಸಿಗೆಯ ಮೇಲೆ ನೆಮ್ಮದಿಯಾಗಿ ನಿದ್ದೆ ಮಾಡುತ್ತಿತ್ತು. ಮನೆಯವರೆಲ್ಲಾ ಕೆಲಸದಲ್ಲಿ ನಿರತರಾಗಿದ್ದಾಗ, ಹೆಣ್ಣು ಮಂಗವೊಂದು ಛಾವಣಿಯ ಮೂಲಕ ಸದ್ದಿಲ್ಲದೆ ಮನೆಯೊಳಗೆ ನುಸುಳಿತ್ತು.

ತಾಯಿ ಗುಲಿಸ್ತಾ ಕೋಣೆಯೊಳಗೆ ಬಂದಾಗ ಕಂಡ ದೃಶ್ಯ ಅವರ ಎದೆ ನಡುಗುವಂತೆ ಮಾಡಿತ್ತು. ಮಗುವಿನ ಪಕ್ಕದಲ್ಲೇ ಕುಳಿತಿದ್ದ ಮಂಗವು ಕಂದಮ್ಮನನ್ನು ಮುಟ್ಟುತ್ತಾ, ಪ್ರೀತಿಯಿಂದ ಸವರುತ್ತಿತ್ತು. ತಾಯಿಯ ಕಿರುಚಾಟ ಕೇಳಿ ನೆರೆಹೊರೆಯವರು ಓಡಿಬಂದರು. ಜನರನ್ನು ನೋಡಿ ಕೆರಳಿದ ಮಂಗವು ಮಗುವನ್ನು ಬಿಡಲು ನಿರಾಕರಿಸಿದ್ದಲ್ಲದೆ, ಯಾರಾದರೂ ಹತ್ತಿರ ಬಂದರೆ ಆಕ್ರಮಣ ಮಾಡಲು ಶುರು ಮಾಡಿತು.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಪ್ರಾಣಿ ರಕ್ಷಕ ಸನ್ನಿ ಚೋಪ್ರಾ ಅವರನ್ನು ಕರೆಸಲಾಯಿತು. ಆಹಾರ ನೀಡಿದರೂ ಮಂಗ ಮಗುವನ್ನು ಬಿಡಲಿಲ್ಲ. ಆಗ ಚೋಪ್ರಾ ಒಂದು ಉಪಾಯ ಮಾಡಿದರು. ಮೊಬೈಲ್ ಫೋನ್‌ನಲ್ಲಿ ಮಂಗಗಳ ವೀಡಿಯೊಗಳನ್ನು ಪ್ಲೇ ಮಾಡಿ ಮಂಗನ ಮುಂದೆ ಹಿಡಿದರು. ಮಂಗವು ವೀಡಿಯೊ ವೀಕ್ಷಣೆಯಲ್ಲಿ ಮಗ್ನನಾಗುತ್ತಿದ್ದಂತೆಯೇ, ರಕ್ಷಣಾ ಸಿಬ್ಬಂದಿ ಅತ್ಯಂತ ನಾಜೂಕಿನಿಂದ ಮಗುವನ್ನು ಅಲ್ಲಿಂದ ಎಳೆದು ಸುರಕ್ಷಿತವಾಗಿ ರಕ್ಷಿಸಿದರು.

ಮತ್ತಷ್ಟು ಓದಿ: ಕೋತಿ ಕಿತಾಪತಿಗೆ ಹೆಜ್ಜೇನು ದಾಳಿ: ಜೀವ ಬಿಟ್ಟ ಕಾರು ಶೋರೂಂ ಮೇಲ್ವಿಚಾರಕ!

ಮಗು ಸುರಕ್ಷಿತವಾಗಿ ಸಿಕ್ಕ ನಂತರ ರಕ್ಷಕ ಸನ್ನಿ ಚೋಪ್ರಾ ಒಂದು ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ, ಆ ಹೆಣ್ಣು ಮಂಗ ತನ್ನ ಸ್ವಂತ ಮರಿಯನ್ನು ಆರು ದಿನಗಳ ಹಿಂದಷ್ಟೇ ಕಳೆದುಕೊಂಡಿತ್ತು. ಮರಿಯನ್ನು ಕಳೆದುಕೊಂಡ ಆ ಮಂಗ ಆಘಾತದಲ್ಲಿತ್ತು. ಈ ಹಸುಗೂಸನ್ನು ನೋಡಿದಾಗ ಅದು ತನ್ನ ಮರಿಯೇ ಎಂದು ಭಾವಿಸಿ, ಆ ಪ್ರೀತಿಯಿಂದಲೇ ಮಗುವನ್ನು ತನ್ನ ಬಳಿ ಇಟ್ಟುಕೊಂಡಿತ್ತು. ಮಗುವಿಗೆ ಯಾವುದೇ ಹಾನಿ ಮಾಡದಿದ್ದರೂ, ತನ್ನ ಮರಿಯನ್ನು ಯಾರಾದರೂ ಕಿತ್ತುಕೊಳ್ಳುತ್ತಾರೆ ಎಂಬ ಭಯದಲ್ಲಿ ಅದು ಆಕ್ರಮಣಕಾರಿ ವರ್ತನೆ ತೋರಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:07 pm, Wed, 22 April 26

Follow Us
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?