AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಲ್ಕೋಹಾಲ್ ಬಿಡಿ, ಹಸುವಿನ ಹಾಲು ಕುಡಿಯಿರಿ: ಮಧ್ಯಪ್ರದೇಶದಲ್ಲಿ ಜನರಿಗೆ ಕರೆ ನೀಡಿದ ಉಮಾ ಭಾರತಿ

ಸರಣಿ ಟ್ವೀಟ್‌ಗಳಲ್ಲಿ, ಬಿಜೆಪಿ ನಾಯಕಿ ಘಟನೆಯನ್ನು ಹಂಚಿಕೊಂಡಿದ್ದು ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಮದ್ಯ ಸೇವನೆಯ ವಿರುದ್ಧದ ಅಭಿಯಾನದ ಬಗ್ಗೆ ವಿವರಿಸಿದ್ದಾರೆ. ಜನರ ಕುಡಿತದ ಚಟವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳದಂತೆ ಉಮಾ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಆಲ್ಕೋಹಾಲ್ ಬಿಡಿ, ಹಸುವಿನ ಹಾಲು ಕುಡಿಯಿರಿ: ಮಧ್ಯಪ್ರದೇಶದಲ್ಲಿ ಜನರಿಗೆ ಕರೆ ನೀಡಿದ ಉಮಾ ಭಾರತಿ
ಉಮಾ ಭಾರತಿ
ರಶ್ಮಿ ಕಲ್ಲಕಟ್ಟ
|

Updated on:Feb 03, 2023 | 2:11 PM

Share

ಮದ್ಯ ಸೇವನೆ ಬಿಡಿ ಅದರ ಬದಲಿಗೆ ಹಸುವಿನ ಹಾಲನ್ನು(Milk) ಕುಡಿಯಲು ಪ್ರಾರಂಭಿಸಿ ಎಂದು ಬಿಜೆಪಿ ನಾಯಕಿ ಉಮಾ ಭಾರತಿ (Uma Bharti) ಜನರಿಗೆ ಕರೆ ನೀಡಿದ್ದಾರೆ. ಮಧ್ಯಪ್ರದೇಶದ (Madhya Pradesh) ಓರ್ಚಾಗೆ ಭೇಟಿ ನೀಡಿದ ಅವರು ಸ್ಥಳೀಯ ಮದ್ಯದ ಅಂಗಡಿಯೊಂದರ ಸುತ್ತಲೂ ಮೇಯುತ್ತಿದ್ದ ಬೀದಿ ಹಸುಗಳನ್ನು ಕಟ್ಟಿ ಅವುಗಳಿಗೆ ಆಹಾರ ನೀಡಿದ್ದಾರೆ.. ಆ ಮದ್ಯದಂಗಡಿ ಮುಂದೆ ನಿಂತ ಉಮಾ ಭಾರತಿ,”ಶರಾಬ್ ನಹಿ, ದೂಧ್ ಪಿಯೋ’ (ಹಾಲು ಕುಡಿಯಿರಿ, ಮದ್ಯ ಅಲ್ಲ) ಎಂದಿದ್ದಾರೆ.

ಸರಣಿ ಟ್ವೀಟ್‌ಗಳಲ್ಲಿ, ಬಿಜೆಪಿ ನಾಯಕಿ ಘಟನೆಯನ್ನು ಹಂಚಿಕೊಂಡಿದ್ದು ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಮದ್ಯ ಸೇವನೆಯ ವಿರುದ್ಧದ ಅಭಿಯಾನದ ಬಗ್ಗೆ ವಿವರಿಸಿದ್ದಾರೆ. ಜನರ ಕುಡಿತದ ಚಟವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳದಂತೆ ಉಮಾ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಸುಪ್ರೀಂಕೋರ್ಟ್‌ಗೆ ಶೀಘ್ರದಲ್ಲೇ ಐವರು ನೂತನ ನ್ಯಾಯಾಧೀಶರ ನೇಮಕ: ಕೇಂದ್ರ ಸರ್ಕಾರ

ಭಾರತಿ ಕಳೆದ ವರ್ಷದಿಂದ ಮದ್ಯ ಸೇವನೆ ವಿರುದ್ಧ ಪ್ರತಿಭಟನೆ ನಡೆಸಿ ಸುದ್ದಿಯಾಗುತ್ತಿದ್ದಾರೆ. ಜೂನ್ 2022 ರಲ್ಲಿ, ಅವರು ಮದ್ಯದ ಅಂಗಡಿಗೆ ಸಗಣಿ ಎಸೆದಿದ್ದರು. ಮಾರ್ಚ್ 2022 ರಲ್ಲಿ ಅವರು ಭೋಪಾಲ್‌ನ ಮತ್ತೊಂದು ಮದ್ಯದ ಅಂಗಡಿಗೆ ಕಲ್ಲು ಎಸೆದರು. ಕಳೆದೆರಡು ತಿಂಗಳಿನಿಂದ ಅವರು ಸಂಪೂರ್ಣ ಮದ್ಯಪಾನ ನಿಷೇಧ ಹಾಗೂ ರಾಜ್ಯದಲ್ಲಿ ಮದ್ಯ ಮಾರಾಟವನ್ನು ನಿಯಂತ್ರಿಸುವಂತೆ ಒತ್ತಾಯಿಸುತ್ತಿದ್ದಾರೆ.

ಮದ್ಯದಂಗಡಿಯನ್ನು ಗೋಶಾಲೆ ಮಾಡಿ ಎಂದು ಒತ್ತಾಯಿಸಿದ ಬಿಜೆಪಿ ನಾಯಕಿ

ಉಮಾಭಾರತಿ ಅವರು ಮಂಗಳವಾರ ಮಧ್ಯಪ್ರದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಮದ್ಯವೇ  ಕಾರಣ ಎಂದಿದ್ದಾರೆ. ಅದೇ ವೇಳೆ ನಿಯಮಗಳನ್ನು ಉಲ್ಲಂಘಿಸಿ ನಡೆಸುತ್ತಿರುವ ಮದ್ಯದ ಅಂಗಡಿಗಳನ್ನು  ಗೋಶಾಲೆಗಳಾಗಿ ಪರಿವರ್ತಿಸಲು  ಒತ್ತಾಯಿಸಿದ್ದಾರೆ. ಭೋಪಾಲ್‌ನ ದೇವಸ್ಥಾನದಲ್ಲಿ ನಾಲ್ಕು ದಿನ ಕಳೆದ  ಉಮಾ ಭಾರತಿ, ರಾಜ್ಯದಲ್ಲಿ “ನಿಯಂತ್ರಿತ” ಮದ್ಯ ನೀತಿಯ ಬೇಡಿಕೆಯನ್ನು ಬೆಂಬಲಿಸಲು “ಮಧುಶಾಲಾ ಮೇ ಗೌಶಾಲಾ” (ಮದ್ಯ ಮಾರಾಟ ಕೇಂದ್ರಗಳ ಸ್ಥಳದಲ್ಲಿ ಗೋಶಾಲೆಗಳು) ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.

ಮದ್ಯದ ನೀತಿಗೆ ಕಾಯದೆ, ನಿಯಮಗಳನ್ನು ಉಲ್ಲಂಘಿಸಿ ನಡೆಸುತ್ತಿರುವ ಮದ್ಯದಂಗಡಿಗಳನ್ನು ಗೋಶಾಲೆಯನ್ನಾಗಿ ಪರಿವರ್ತಿಸಲು ನಾನು ಪ್ರಾರಂಭಿಸುತ್ತೇನೆ. ಓರ್ಚಾದಲ್ಲಿರುವ “ಅಕ್ರಮ” ಮದ್ಯದ ಅಂಗಡಿಯ ಹೊರಗೆ  11 ಹಸುಗಳನ್ನು ಕಟ್ಟಿ ಹಾಕಲಿರುವ ವ್ಯವಸ್ಥೆ ಮಾಡಲು ಜನರಿಗೆ ತಿಳಿಸಿದ್ದೇನೆ. “ನನ್ನನ್ನು ತಡೆಯಲು ಯಾರು ಧೈರ್ಯ ಮಾಡುತ್ತಾರೆ ಎಂಬುದನ್ನು ನೋಡುತ್ತೇವೆ .ಈ ಹಸುಗಳಿಗೆ ಆಹಾರ , ನೀರುನ್ನು ನಾನು ಕೊಡುತ್ತೇನೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ನಾಯಕಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:05 pm, Fri, 3 February 23

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!