ಹಿಂದೂ ಮಹಾಸಾಗರದಲ್ಲಿ ಇಸ್ರೇಲ್‌ ಸರಕು-ಸಾಗಣೆ ಹಡಗಿನ ಮೇಲೆ ಡ್ರೋನ್ ದಾಳಿ

|

Updated on: Dec 23, 2023 | 5:32 PM

ಹಿಂದೂ ಮಹಾಸಾಗರದಲ್ಲಿ ಇಂದು (ಡಿ.23) ಸರಕು-ಸಾಗಣೆ ಹಡಗುಗಳ ಮೇಲೆ ಡ್ರೋನ್ ದಾಳಿ ನಡೆಸಲಾಗಿದೆ. ಈ ದಾಳಿಯಿಂದ ಯಾವುದೇ ಸಾವು-ನೋವುಗಳ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಒಂದು ಹಡಗು ಇಸ್ರೇಲ್‌ಗೆ ಸಂಬಂಧಿಸಿದೆ ಎಂದು ವರದಿ ತಿಳಿಸಿದೆ.

ಹಿಂದೂ ಮಹಾಸಾಗರದಲ್ಲಿ ಇಸ್ರೇಲ್‌ ಸರಕು-ಸಾಗಣೆ ಹಡಗಿನ ಮೇಲೆ ಡ್ರೋನ್ ದಾಳಿ
ಸಾಂದರ್ಭಿಕ ಚಿತ್ರ
Follow us on

ಹಿಂದೂ ಮಹಾಸಾಗರದಲ್ಲಿ (Indian Ocean) ಇಂದು (ಡಿ.23) ಸರಕು-ಸಾಗಣೆ ಹಡಗುಗಳ ಮೇಲೆ ಡ್ರೋನ್ ದಾಳಿ ನಡೆಸಲಾಗಿದೆ. ಈ ದಾಳಿಯಿಂದ ಯಾವುದೇ ಸಾವು-ನೋವುಗಳ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಒಂದು ಹಡಗು ಇಸ್ರೇಲ್‌ಗೆ ಸಂಬಂಧಿಸಿದೆ ಎಂದು ವರದಿ ತಿಳಿಸಿದೆ. ಬ್ರಿಟಿಷ್ ಮಿಲಿಟರಿಯ ಯುನೈಟೆಡ್ ಕಿಂಗ್‌ಡಮ್ ಮಾರಿಟೈಮ್ ಟ್ರೇಡ್ ಆಪರೇಷನ್ಸ್ ಮತ್ತು ಕಡಲ ಭದ್ರತಾ ಸಂಸ್ಥೆ ಅಂಬ್ರೆ ಪ್ರಕಾರ, ಭಾರತದ ಕರಾವಳಿ ಭಾಗದಲ್ಲಿ ಈ ದಾಳಿ ನಡೆದಿದೆ. ಈ ದಾಳಿಯಿಂದ ಹಡುಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದೆ. ಇದು ಇಸ್ರೇಲ್​ನ ಲೈಬೀರಿಯಾ-ಫ್ಲಾಗ್ಡ್ ರಾಸಾಯನಿಕ/ಉತ್ಪನ್ನಗಳ ಟ್ಯಾಂಕರ್​​​​ಗಳನ್ನು ಹೊತ್ತೊಯ್ಯುತ್ತಿದ್ದ ಹಡಗು ಎಂದು ಹೇಳಲಾಗಿದೆ. ಇನ್ನು ಈ ದಾಳಿಗೆ ಭಾರತೀಯ ನೌಕಾಪಡೆ ಪ್ರತ್ಯುತ್ತರ ನೀಡುತ್ತಿದೆ ಎಂದು ಹೇಳಲಾಗಿದೆ. ಇನ್ನು ದಾಳಿಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಬಗ್ಗೆ ಇಸ್ರೇಲ್​ಗೂ ವರದಿ ಮಾಡಲಾಗಿದೆ. ಇನ್ನು ಈ ದಾಳಿ ಎಲ್ಲಿಂದ ನಡೆದಿದೆ ? ಯಾರು ನಡೆಸಿದ್ದಾರೆ ಎಂದು ತಿಳಿದು ಬಂದಿಲ್ಲ ಎಂದು ವರದಿ ಹೇಳಿದೆ. ಭಾರತ ಸರ್ಕಾರ ಹೆಚ್ಚಿನ ಕ್ರಮ ತೆಗೆದುಕೊಳ್ಳುವಂತೆ ನೌಕ ದಳಕ್ಕೆ ತಿಳಿಸಿದೆ.

ಈ ದಾಳಿಗೆ ಗುರಿಯಾಗಿದ್ದು ಒಂದು ಇಸ್ರೇಲ್​​​ ಸರಕು ಸಾಗಣೆ ಹಡಗು ಎಂದು ಹೇಳಲಾಗಿತ್ತು. ಇದೀಗ ಎರಡನೇ ಹಡಗು ಸೌದಿ ಅರೇಬಿಯಾದ ಬಂದರಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಹಡಗು ಎಂದು ಹೇಳಲಾಗಿದೆ. ಪೋರಬಂದರ್ ಕರಾವಳಿಯಿಂದ 217 ನಾಟಿಕಲ್ ಮೈಲಿ ದೂರದಲ್ಲಿರುವ ಅರಬ್ಬಿ ಸಮುದ್ರದಲ್ಲಿ ಎಂವಿ ಕೆಮ್ ಪ್ಲುಟೊ ಎಂಬ ಸರಕು ಸಾಗಣೆ ಹಡಗು ಎಂದು ಭಾರತೀಯ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಇದು ಸೌದಿ ಅರೇಬಿಯಾದ ಬಂದರಿನಿಂದ ಮಂಗಳೂರು ಕಡೆಗೆ ಹೋಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಬೆಂಕಿ ತಗುಲಿದ ಹಡಗಿನ ರಕ್ಷಣೆ ಮಾಡಲಾಗಿದೆ, ಬೆಂಕಿ ನಂದಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ICGS ವಿಕ್ರಮ್ ಅನ್ನು ಭಾರತೀಯ ವಿಶೇಷ ಆರ್ಥಿಕ ವಲಯದ ಗಸ್ತುಗೆ ನಿಯೋಜಿಸಲಾಗಿದೆ. ಇದರ ಸಹಾಯದಿಂದ ಈ ಹಡಗುಗಳ ರಕ್ಷಣೆ ಮಾಡಲಾಗಿದೆ. ಈಗಾಗಲೇ ಭಾರತೀಯ ಸೇನೆಗಳು ಡ್ರೊನ್​​​​ಗಳನ್ನು ಹೊಡೆದುರುಳಿಸಲಾಗಿದೆ. ಇತ್ತಿಚೇಗಷ್ಟೇ ಕಾರ್ಯನಿವಹಿಸಲು ಪ್ರಾರಂಭಿಸಿದ ವಿಕ್ರಮ್​​, ಸರಕು ಸಾಗಣೆ ಹಡಗುಗಳ ಮೇಲೆ ದಾಳಿಯನ್ನು ತಡೆಯಲು ಹಾಗೂ ರಕ್ಷಣೆಯನ್ನು ಮಾಡಲು ಮುಂದಾಗಿದೆ.

ಇನ್ನು ಈ ದಾಳಿಯನ್ನು ಇರಾನ್ ಬೆಂಬಲಿತ ಹೌತಿ ಬಂಡುಕೋರರಿಂದ ನಡೆಸಲಾಗಿದೆ ಎಂದು ಹೇಳಲಾಗಿದೆ. ಇದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಬಂದಿಲ್ಲ. ಸಮುದ್ರ ಭಾಗದಲ್ಲಿ ಇರಾನ್​​​ ದಾಳಿ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ದಾಳಿಯ ಮುಖ್ಯ ಗುರಿ ಇಸ್ರೇಲ್​​ ಆಗಿದೆ ಎಂದು ಯುಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಸ್ರೇಲ್​​​ – ಹಮಾಸ್​​​ ನಡುವಿನ ಸಂಘರ್ಷಣೆಯೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಇಸ್ರೇಲ್​​ ಮೇಲೆ ಬೆಂಕಿಕಾರುತ್ತಿರುವ ಹಮಾಸ್​​​ ಉಗ್ರರ ಪರವಾಗಿ ಇರಾನ್​​​ ಮತ್ತು ಇತರ ಮುಸ್ಲಿಂ ರಾಷ್ಟ್ರಗಳು ನಿಂತಿದೆ. ಈ ಕಾರಣಕ್ಕೆ ಇರಾನ್​​​​ ಟಾರ್ಗೆಟ್​​​ ಮಾಡಿ ಇಸ್ರೇಲ್​​​ ಹಡಗಿನ ಮೇಲೆ ದಾಳಿ ಮಾಡಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಇಸ್ರೇಲ್ ಪಿಎಂ ನೆತನ್ಯಾಹುನ್ನು ವಿಚಾರಣೆಯಿಲ್ಲದೆ ಗುಂಡಿಕ್ಕಿ ಕೊಲ್ಲುವ ಸಮಯ ಬಂದಿದೆ: ಕಾಂಗ್ರೆಸ್ ಸಂಸದ

ಪೆಂಟಗನ್ ಪ್ರಕಾರ, ಹೌತಿ ಬಂಡುಕೋರರು 100 ಕ್ಕೂ ಹೆಚ್ಚು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಮಾಡಿದ್ದಾರೆ. 35 ಕ್ಕೂ ಹೆಚ್ಚು ವಿವಿಧ ದೇಶಗಳನ್ನು ಒಳಗೊಂಡ 10 ಸರಕು ಸಾಗಣೆ ಹಡಗುಗಳನ್ನು ಗರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:40 pm, Sat, 23 December 23