ಉಗ್ರ ಚಟುವಟಿಕೆಗೆ ಹಣ ಸಂಗ್ರಹ ಮಾಡುತ್ತಿದ್ದ ಐವರನ್ನು ವಶ ಪಡೆದ ಇಡಿ: ಬೆಂಗಳೂರಿನ ಪ್ರತಿಷ್ಠಿತ ಬ್ಯಾಂಕ್​​ನಲ್ಲಿತ್ತು ಪಿಎಫ್‌ಐನ ಖಾತೆ

ಪಿಎಫ್‌ಐನ್ನು ನಿಷೇಧ ಮಾಡಿದ ನಂತರ ಜಾರಿ ನಿರ್ದೇಶನಾಲಯ (ಇಡಿ) ಹಲವು ಸ್ಥಳಗಳಿಗೆ ದಾಳಿ ಮಾಡಿ ಹಣ, ದಾಖಲೆಗಳನ್ನು ವಶಪಡಿಸಿಕೊಳ್ಳುತ್ತಿದೆ. ಇದೀಗ ಸಾವಿರಾರೂ ಪಿಎಫ್‌ಐ ಸದಸ್ಯರು ಗಲ್ಫ್ ರಾಷ್ಟ್ರಗಳು ಮತ್ತು ಇತರೆಡೆ ಸುಸಂಘಟಿತ ಮತ್ತು ರಚನಾತ್ಮಕ ರೀತಿಯಲ್ಲಿ ಸಾಕಷ್ಟು ಹಣವನ್ನು ಸಂಗ್ರಹಿಸಿದೆ ಎಂದು ಇಡಿ ಹೇಳಿದೆ.

ಉಗ್ರ ಚಟುವಟಿಕೆಗೆ ಹಣ ಸಂಗ್ರಹ ಮಾಡುತ್ತಿದ್ದ ಐವರನ್ನು ವಶ ಪಡೆದ ಇಡಿ: ಬೆಂಗಳೂರಿನ ಪ್ರತಿಷ್ಠಿತ ಬ್ಯಾಂಕ್​​ನಲ್ಲಿತ್ತು ಪಿಎಫ್‌ಐನ ಖಾತೆ
Follow us
ಅಕ್ಷಯ್​ ಪಲ್ಲಮಜಲು​​
|

Updated on: Dec 23, 2023 | 2:05 PM

ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ಒಂದೊಂದು ಉಗ್ರ ಚಟುವಟಿಕೆಯನ್ನು ತನಿಖಾ ದಳ ಹೊರಗೆ ತರುತ್ತಿದೆ. ಪಿಎಫ್‌ಐನ್ನು ನಿಷೇಧ ಮಾಡಿದ ನಂತರ ಜಾರಿ ನಿರ್ದೇಶನಾಲಯ (ಇಡಿ) ಹಲವು ಸ್ಥಳಗಳಿಗೆ ದಾಳಿ ಮಾಡಿ ಹಣ, ದಾಖಲೆಗಳನ್ನು ವಶಪಡಿಸಿಕೊಳ್ಳುತ್ತಿದೆ. ಇದೀಗ ಸಾವಿರಾರೂ ಪಿಎಫ್‌ಐ ಸದಸ್ಯರು ಗಲ್ಫ್ ರಾಷ್ಟ್ರಗಳು ಮತ್ತು ಇತರೆಡೆ ಸುಸಂಘಟಿತ ಮತ್ತು ರಚನಾತ್ಮಕ ರೀತಿಯಲ್ಲಿ ಸಾಕಷ್ಟು ಹಣವನ್ನು ಸಂಗ್ರಹಿಸಿದೆ ಎಂದು ಇಡಿ ಹೇಳಿದೆ.

ಭಯೋತ್ಪಾದಕ ಚಟುವಟಿಕೆಗಳು ಮತ್ತು ಐಸಿಸ್‌ನಂತಹ ಗುಂಪುಗಳೊಂದಿಗೆ ಸಂಪರ್ಕ ಹೊಂದಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಪಿಎಫ್‌ಐ ನಿಷೇಧಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ದೆಹಲಿ ತಿಹಾರ್ ಜೈಲಿನಲ್ಲಿರುವ ಐವರು ಆರೋಪಿಗಳನ್ನು ತನಿಖೆಗಾಗಿ ಇಡಿ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಇದಕ್ಕೂ ಮೊದಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸುತ್ತಿರುವ ಮತ್ತೊಂದು ಭಯೋತ್ಪಾದನೆ ಪ್ರಕರಣದಲ್ಲಿ ಈ ಐವರು ಜೈಲು ಸೇರಿದರು.

ಐವರು ಆರೋಪಿಗಳಾದ ಎಎಸ್ ಇಸ್ಮಾಯಿಲ್, ಮೊಹಮ್ಮದ್ ಶಕೀಫ್, ಅನಿಸ್ ಅಹ್ಮದ್, ಅಫ್ಸರ್ ಪಾಶಾ ಮತ್ತು ಇಎಂ ಅಬ್ದುಲ್ ರಹಿಮಾನ್ ಹಲವು ಕಡೆಗಳಿಂದ ಹಣ ಸಂಗ್ರಹ ಮಾಡಿದ್ದರು ಎಂದು ತನಿಖಾ ಸಂಸ್ಥೆ ಹೇಳಿದೆ. ಹವಾಲಾ ಮತ್ತು ಬ್ಯಾಂಕಿಂಗ್ ಚಾನೆಲ್‌ಗಳ ರೂಪದಲ್ಲಿ ಈ ಹಣವನ್ನು “ಕಾನೂನುಬಾಹಿರ” ಚಟುವಟಿಕೆಗಳಿಗೆ ಬಳಸುತ್ತಿದ್ದರು ಎಂದು ಹೇಳಿದೆ.

ಪಿಎಫ್‌ಐನಲ್ಲಿ ಐದು ಆರೋಪಿಗಳ ಪಾತ್ರಗಳೇನು?

ಇಎಮ್ ಅಬ್ದುಲ್ ರಹಿಮಾನ್: ಈ ವ್ಯಕ್ತಿ ಮೊದಲಿನಿಂದಲೂ ಪಿಎಫ್‌ಐನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಕಳೆದ ಹಲವಾರು ವರ್ಷಗಳಿಂದ ಪಿಎಫ್‌ಐನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾನೆ. ಪಿಎಫ್‌ಐ ತೆಗೆದುಕೊಳ್ಳುವ ಪ್ರತಿಯೊಂದು ಪ್ರಮುಖ ಕ್ರಮ ಮತ್ತು ನಿರ್ಧಾರಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾನೆ. ಅಬ್ದುಲ್ ರಹಿಮಾನ್ 1979 ರಿಂದ 1984 ರವರೆಗೆ ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ನೊಂದಿಗೆ ಸಹ ಸಂಬಂಧ ಹೊಂದಿದ್ದ. SIMI ನಿಷೇಧದ ನಂತರ ಪಿಎಫ್‌ಐ ಸೇರಿದ್ದಾನೆ.

ಅನಿಸ್ ಅಹ್ಮದ್: ಪಿಎಫ್‌ಐನ ಹಣಕಾಸು ನಿರ್ವಹಣೆಯಲ್ಲಿ ಅನೀಸ್ ಅಹ್ಮದ್ ಪ್ರಮುಖ ಪಾತ್ರ ವಹಿಸಿದ್ದು, ಪಿಎಫ್‌ಐ ವಕ್ತಾರರಾಗಿಯೂ ಸೇವೆ ಸಲ್ಲಿಸಿದ್ದಾನೆ. ಪ್ರತಿ ಜಿಲ್ಲೆಯ PFI ಸಂಘಟನೆಯಿಂದ ಸಂಗ್ರಹಿಸಿದ ಹಣವನ್ನು ಅದರ ರಾಷ್ಟ್ರೀಯ ಸಮಿತಿಯ ಖಾತೆಗೆ ಜಮಾ ಮಾಡುತ್ತಿದ್ದ. ಹಣವನ್ನು ಹೆಚ್ಚಾಗಿ ದೆಹಲಿ ಮತ್ತು ಉತ್ತರ ಪ್ರದೇಶದಿಂದ ಸಂಗ್ರಹಿಸಲಾಗಿದೆ.

ಅಫ್ಸರ್ ಪಾಶಾ: ಪಿಎಫ್‌ಐನಲ್ಲಿ ರಾಷ್ಟ್ರಮಟ್ಟದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದ ಅಫ್ಸರ್ ಪಾಶಾ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಪಿಎಫ್‌ಐನ ವಲಯ ಮುಖ್ಯಸ್ಥನಾಗಿದ್ದ, ಪಿಎಫ್‌ಐನ ಪ್ರತಿಯೊಂದು ಹಣಕಾಸಿನ ವಿಷಯದಲ್ಲಿ ಅಫ್ಸರ್ ಪಾಶಾ ಮಾತು ಮುಖ್ಯವಾಗಿತ್ತು. 2009ರಿಂದ 2010ರವರೆಗೆ ಪಿಎಫ್‌ಐ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ. 2009 ರಲ್ಲಿ ಮೈಸೂರು ಕೋಮುಗಲಭೆಯಲ್ಲಿ ಪಾತ್ರ ವಹಿಸಿದ್ದಾರೆಂದು ಆರೋಪಿಸಲಾಗಿದೆ. ಬೆಂಗಳೂರಿನ ಫ್ರೇಜರ್ ಟೌನ್‌ನಲ್ಲಿರುವ ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ, ಈಗ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪಿಎಫ್‌ಐ ಖಾತೆಯಲ್ಲಿ ಈ ಅಕ್ರಮ ಹಣವನ್ನು ಸಂಗ್ರಹಿಸಲಾಗಿತ್ತು.

ಇದನ್ನೂ ಓದಿ: ಶಸ್ತ್ರಾಸ್ತ್ರ ತರಬೇತಿ ಶಿಬಿರ ಆಯೋಜಿಸಿದ್ದ ಪಿಎಫ್​ಐನ ಇಬ್ಬರು ಸದಸ್ಯರನ್ನು ಬಂಧಿಸಿದ ಎನ್​ಐಎ

ಎಎಸ್ ಇಸ್ಮಾಯಿಲ್: ಪಿಎಫ್‌ಐನ ಸಂಸ್ಥಾಪಕ-ಸದಸ್ಯರಲ್ಲಿ ಒಬ್ಬ ಈ ಎಎಸ್ ಇಸ್ಮಾಯಿಲ್. 2018 ರಿಂದ 2020 ರವರೆಗೆ PFI ನ ಉತ್ತರ ವಲಯದ ಅಧ್ಯಕ್ಷನಾಗಿದ್ದ. ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಚೆನ್ನೈನ ಮೈಲಾಪುರ ರಸ್ತೆಯಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಪಿಎಫ್‌ಐ ಖಾತೆಯಲ್ಲೂ ಕೂಡ ಹಣವನ್ನು ಸಂಗ್ರಹ ಮಾಡಲಾಗಿತ್ತು.

ಮೊಹಮ್ಮದ್ ಶಕೀಫ್: ಕರ್ನಾಟಕದಲ್ಲಿ ಪಿಎಫ್ಐನಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿದ್ದ. 2016 ರಿಂದ 2020 ರವರೆಗೆ ದಕ್ಷಿಣ ರಾಜ್ಯದಲ್ಲಿ PFI ನ ರಾಜ್ಯ ಅಧ್ಯಕ್ಷನಾಗಿದ್ದು. ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ. ಇದರ ಜತೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪಿಎಫ್ಐ ಖಾತೆಯಲ್ಲಿ ಹಣ ಸಂಗ್ರಹ ಮಾಡುತ್ತಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ