ದೆಹಲಿಗೆ ಬಂದಿಳಿದ ಏರ್ ಇಂಡಿಯಾದ ಮೊದಲ ವೈಡ್ ಬಾಡಿ A350 ವಿಮಾನ
ಟಾಟಾ ಮಾಲೀಕತ್ವದ ಏರ್‌ಲೈನ್ಸ್‌ಗೆ ಐತಿಹಾಸಿಕ ಕ್ಷಣ ಎದುರಾಗಿದೆ. ಏರ್ ಇಂಡಿಯಾ ತನ್ನ ಮೊದಲ ವೈಡ್-ಬಾಡಿ A350-900 ವಿಮಾನವನ್ನು ಸಿದ್ಧಪಡಿಸಿದೆ. ಇದು ಭಾರತೀಯ ವಿಮಾನಯಾನ ಸಂಸ್ಥೆಗಳಲ್ಲಿ ಹಾರಾಟ ನಡೆಸಲಿರುವ ಮೊದಲ ವಿಮಾನವಾಗಿದೆ. ಆ ಪೈಕಿ ಶನಿವಾರ ದೆಹಲಿಗೆ ಮೊದಲ A350-900 ವಿಮಾನ ಬಂದಿಳಿದಿದೆ.

ಹರಿಯಾಣ, ಡಿಸೆಂಬರ್ 23: ಟಾಟಾ ಮಾಲೀಕತ್ವದ ಏರ್‌ಲೈನ್ಸ್‌ಗೆ ಐತಿಹಾಸಿಕ ಕ್ಷಣ ಎದುರಾಗಿದೆ. ಏರ್ ಇಂಡಿಯಾ (Air India) ತನ್ನ ಮೊದಲ ವೈಡ್-ಬಾಡಿ A350-900 ವಿಮಾನವನ್ನು ಸಿದ್ಧಪಡಿಸಿದೆ. ಇದು ಭಾರತೀಯ ವಿಮಾನಯಾನ ಸಂಸ್ಥೆಗಳಲ್ಲಿ ಹಾರಾಟ ನಡೆಸಲಿರುವ ಮೊದಲ ವಿಮಾನವಾಗಿದೆ. ಏರ್‌ಲೈನ್ಸ್ ಇಂತಹ 20 ವಿಮಾನಗಳನ್ನು ತಯಾರಿಸಲು ಆರ್ಡರ್ ನೀಡಿದೆ. ಆ ಪೈಕಿ ಮೊದಲ ವಿಮಾನ ಶನಿವಾರ ದೆಹಲಿಗೆ ಬಂದಿಳಿದಿದೆ. ಆ ಮೂಲಕ ಏರ್ ಇಂಡಿಯಾದ ಪ್ರಮುಖ ಹೆಜ್ಜೆಯಾಗಿದೆ.
“ಹಲವು ತಿಂಗಳುಗಳ ಯೋಜನೆಯ ನಂತರ, ಮೊದಲ ವಿಮಾನ ಮತ್ತು ನಮ್ಮ ಹೊಸ ಲೈವರಿ ನಾಳೆ ದೆಹಲಿಗೆ ಆಗಮಿಸಲಿದೆ” ಎಂದು ಏರ್ ಇಂಡಿಯಾ ಸಿಇಒ ಮತ್ತು ಎಂಡಿ ಕ್ಯಾಂಪ್‌ಬೆಲ್ ವಿಲ್ಸನ್ ಅವರು ನಿನ್ನೆ ತಮ್ಮ ಉದ್ಯೋಗಿಗಳಿಗೆ ತಿಳಿಸಿದ್ದರು.
ದೆಹಲಿಗೆ ಬಂದಿಳಿದ ವೈಡ್-ಬಾಡಿ A350-900 ವಿಮಾನದ ಹಾರಾಟಕ್ಕೂ ಮುಂಚೆ ಎಲ್ಲಾ ಕಡ್ಡಾಯ ಪರೀಕ್ಷೆ, ತಪಾಸಣೆಯನ್ನು ಮಾಡಲಾಗಿದೆ. ಜೊತೆಗೆ ಕಸ್ಟಮ್ಸ್ ಕ್ಲಿಯರೆನ್ಸ್, ಸಲಕರಣೆಗಳ ವಿವಿಧ ತಪಾಸಣೆ, ಹಾಗೆಯೇ ರನ್ ವೇ ಪರೀಕ್ಷೆಗಳನ್ನು ಮಾಡಲಾಗುವುದು.
Air India’s first A350 aircraft arrives in Delhi
Read @ANI Story | https://t.co/GcM7iB9ZmU#AirIndia #AirCraft #Delhi pic.twitter.com/V8Mq4ROHkE
— ANI Digital (@ani_digital) December 23, 2023
A350-900 ವಿಮಾನವು ಜನವರಿ 2024 ರಿಂದ ಭಾರತದಲ್ಲಿ ತನ್ನ ವಾಣಿಜ್ಯ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಏರ್‌ಬಸ್ ಸೌಲಭ್ಯದಿಂದಾಗಿ ಫ್ರಾನ್ಸ್ ಮೂಲಕ ವಿಮಾನವು ದೆಹಲಿಗೆ ಆಗಮಿಸಿದೆ.
ಏರ್ ಇಂಡಿಯಾಕ್ಕೆ ಸೇರ್ಪಡೆಗೊಂಡಿರುವ A350-900 ವಿಮಾನವು ಒಟ್ಟು 316 ಆಸನಗಳೊಂದಿಗೆ ಮೂರು-ವರ್ಗದ ಕ್ಯಾಬಿನ್ ಸಂರಚನೆಯನ್ನು ಹೊಂದಿದೆ. ಪೂರ್ಣ-ಫ್ಲಾಟ್ ಹಾಸಿಗೆಗಳೊಂದಿಗೆ 28 ಬಿಸಿನೆಸ್ ಕ್ಲಾಸ್ ಸೂಟ್‌ಗಳು, ಹೆಚ್ಚುವರಿ ಲೆಗ್‌ರೂಂ ಒಳಗೊಂಡಿರುವ 24 ಪ್ರೀಮಿಯಂ ಎಕಾನಮಿ ಸೀಟುಗಳು ಮತ್ತು 264 ಎಕಾನಮಿ ಕ್ಲಾಸ್ ಸೀಟುಗಳನ್ನು ಹೊಂದಿದೆ.
ಇದನ್ನೂ ಓದಿ: ಆದಿತ್ಯ-ಎಲ್ 1 ಜ. 6ರಂದು ಉದ್ದೇಶಿತ ಕಕ್ಷೆಗೆ ತಲುಪಲಿದೆ: ಎಸ್ ಸೋಮನಾಥ್
ಏರ್ ಇಂಡಿಯಾ ವೈಡ್ ಬಾಡಿ ವಿಮಾನವನ್ನು ಹಾರಾಟ ಮಾಡುತ್ತಿರುವ ಏಕೈಕ ಭಾರತೀಯ ವಿಮಾನಯಾನ ಸಂಸ್ಥೆಯಾಗಿದೆ. ಇದಲ್ಲದೆ, ಕಂಪನಿಯು ಮೇ 2024 ರ ವೇಳೆಗೆ ಈ ಐದು ವಿಮಾನಗಳನ್ನು ಪಡೆದುಕೊಳ್ಳುವ ಯೋಜನೆಯಲ್ಲಿದೆ.
ವೈಡ್-ಬಾಡಿ A350-900 ವಿಮಾನವು ಎಲ್ಲಾ ಹಳೆಯ ವಿಮಾನಗಳಿಗಿಂತ 25 ಪ್ರತಿಶತ ಕಡಿಮೆ ಇಂಧನವನ್ನು ಬಳಕೆ ಮಾಡುತ್ತದೆ ಎಂದು ಏರ್‌ಬಸ್ ತಿಳಿಸಿದೆ. ಇದು ವಾಣಿಜ್ಯ ವಿಮಾನಯಾನ ಸಂಸ್ಥೆಗಳಿಂದ ಹೆಚ್ಚು ಬೇಡಿಕೆಯಿರುವ ವಿಮಾನಗಳಲ್ಲಿ ಒಂದಾಗಿದೆ.
ಏರ್ ಇಂಡಿಯಾ 250 ಏರ್‌ಬಸ್ ವಿಮಾನಗಳು ಮತ್ತು 220 ಹೊಸ ಬೋಯಿಂಗ್ ವಿಮಾನಗಳನ್ನು ಸಿದ್ದಪಡಿಸುತ್ತಿದ್ದು, ಒಟ್ಟು ಯುಎಸ್ಡಿ 70 ಶತಕೋಟಿ ಮೌಲ್ಯವನ್ನು ಹೊಂದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.