ಇಸ್ರೇಲ್ ಪಿಎಂ ನೆತನ್ಯಾಹುನ್ನು ವಿಚಾರಣೆಯಿಲ್ಲದೆ ಗುಂಡಿಕ್ಕಿ ಕೊಲ್ಲುವ ಸಮಯ ಬಂದಿದೆ: ಕಾಂಗ್ರೆಸ್ ಸಂಸದ

"ಈಗ, ಭಾರತದಲ್ಲಿ ಹುಟ್ಟಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ. ನಮ್ಮ ಪ್ರಧಾನಿಗೆ ಅಮೆರಿಕಾವನ್ನು ಬೆಂಬಲಿಸಲು ನಾಚಿಕೆಯಾಗುವುದಿಲ್ಲವೇ? ಇಂದು ಭಾರತೀಯ ಮೂಲದ ವ್ಯಕ್ತಿ ರಿಷಿ ಸುನಕ್ ಯುಕೆ ಪ್ರಧಾನಿಯಾಗಿದ್ದಾರೆ. ಆದರೆ ನಾನು ಅವರ ಬಗ್ಗೆ ನಾಚಿಕೆಪಡುತ್ತೇನೆ. ಭಾರತೀಯ ಪ್ರಧಾನಿಯವರು ಅಮೆರಿಕ ಮತ್ತು ಬ್ರಿಟನ್‌ನ ಸಾಮಂತರಾಗಲು ಒಪ್ಪಿಕೊಳ್ಳುವ ಮೂಲಕ ಭಾರತವನ್ನು ಅವಮಾನಿಸಿದ್ದಾರೆ ಎಂದು ಉಣ್ಣಿತ್ತಾನ್ ಹೇಳಿದ್ದಾರೆ.

ಇಸ್ರೇಲ್ ಪಿಎಂ ನೆತನ್ಯಾಹುನ್ನು ವಿಚಾರಣೆಯಿಲ್ಲದೆ ಗುಂಡಿಕ್ಕಿ ಕೊಲ್ಲುವ ಸಮಯ ಬಂದಿದೆ: ಕಾಂಗ್ರೆಸ್ ಸಂಸದ
ರಾಜಮೋಹನ್ ಉಣ್ಣಿತ್ತಾನ್
Follow us
|

Updated on: Nov 18, 2023 | 7:00 PM

ಕಾಸರಗೋಡು ನವೆಂಬರ್ 18: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಪ್ಯಾಲೆಸ್ತೀನ್‌ನಲ್ಲಿ ನರಮೇಧ ನಡೆಸುತ್ತಿರುವ ಯುದ್ಧ ಅಪರಾಧಿಯಾಗಿದ್ದು, ಅವರನ್ನು ವಿಚಾರಣೆಯಿಲ್ಲದೆ ಗುಂಡಿಕ್ಕಿ ಕೊಲ್ಲುವ ಸಮಯ ಬಂದಿದೆ ಎಂದು ಕೇರಳದ ಕಾಂಗ್ರೆಸ್ (Congress) ಸಂಸದ ರಾಜಮೋಹನ್ ಉಣ್ಣಿತ್ತಾನ್ (Rajmohan Unnithan) ಹೇಳಿದ್ದಾರೆ.ಗಾಜಾ ಪಟ್ಟಿಯನ್ನು ಆಳುವ ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್ಮೆಂಟ್ ಹಮಾಸ್ ತಮ್ಮ ಭೂಮಿ, ಜನರು ಮತ್ತು ಜೀವಗಳನ್ನು ರಕ್ಷಿಸಲು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡರು.”ಅವರು ಭಯೋತ್ಪಾದಕರಲ್ಲ, ಯಾರಾದರೂ ಹಮಾಸ್ ಅನ್ನು ಭಯೋತ್ಪಾದಕರು ಎಂದು ಬಿಂಬಿಸಿದರೆ, ಅವರಿಗೆ ತೀವ್ರವಾಗಿ ಪ್ರತಿಕ್ರಿಯಿಸಲು ಇದು ತಕ್ಕ ಸಮಯ ಎಂದು ಸಂಸದರು ಹೇಳಿದ್ದಾರೆ

ಕಾಸರಗೋಡು ನಗರ ಮತ್ತು ಸುತ್ತಮುತ್ತಲಿನ ಮಸೀದಿಗಳ ಒಕ್ಕೂಟ ಕಾಸರಗೋಡು ಯುನೈಟೆಡ್ ಮುಸ್ಲಿಂ ಜಮಾ-ಅತ್ ಶುಕ್ರವಾರ ಆಯೋಜಿಸಿದ್ದ ಫೆಲೆಸ್ತೀನ್ ಐಕ್ಯತಾ ರ‍್ಯಾಲಿ ಮತ್ತು ಪ್ರಾರ್ಥನಾ ಸಭೆಯಲ್ಲಿ ಸಂಸದರು ಈ ಮಾತುಗಳನ್ನಾಡಿದ್ದಾರೆ. ಅಮೆರಿಕ ಇರಾಕ್‌ನಲ್ಲಿ 10 ಲಕ್ಷ ಅರಬ್ ಜನರನ್ನು ಅಥವಾ ಮುಸ್ಲಿಮರನ್ನು ಕೊಂದಿದೆ, ಅಫ್ಘಾನಿಸ್ತಾನದಲ್ಲಿ ಏಳು ಲಕ್ಷ ಮುಸ್ಲಿಮರನ್ನು ಕೊಂದಿದೆ. ಕೊರಿಯಾ ಮತ್ತು ವಿಯೆಟ್ನಾಂನಲ್ಲಿ ಅಮಾಯಕರನ್ನು ಕೊಂದಿದೆ.ಆದರೆ ಅಮೆರಿಕದ ಯುದ್ಧದ ದುರಾಸೆಗೆ ತೃಪ್ತಿಯಾಗಿಲ್ಲ. ಪ್ಯಾಲೆಸ್ತೀನ್‌ನಲ್ಲಿ ಅದನ್ನೇ ನಾವು ನೋಡುತ್ತಿದ್ದೇವೆ” ಎದು ಭಾರತದ ಎರಡನೇ ಅತ್ಯಂತ ಹಳೆಯ ಮಸೀದಿಯಾದ ಕಾಸರಗೋಡಿನ ಮಲಿಕ್ ದಿನಾರ್ ಮಸೀದಿಯ ಬಳಿಯ ಮೈದಾನದಲ್ಲಿ ನಡೆದ ರ‍್ಯಾಲಿ ಯನ್ನುದ್ದೇಶಿಸಿ ಹೇಳಿದ್ದಾರೆ.

ಲಕ್ಷಗಟ್ಟಲೆ ಜನರನ್ನು ಕೊಂದವರು ದೇಶಪ್ರೇಮಿಗಳು, ಆದರೆ ತಮ್ಮ ಸ್ವಂತ ಭೂಮಿಯನ್ನು ರಕ್ಷಿಸಿಕೊಳ್ಳಲು ಯಾರನ್ನಾದರೂ ಕೊಲ್ಲುವವರು ಉಗ್ರಗಾಮಿಗಳು, ಅವರು (ಹಮಾಸ್) ಉಗ್ರರಾಗಿದ್ದರೆ, ನಾವು ಪ್ರತಿಯೊಬ್ಬರೂ ಉಗ್ರಗಾಮಿಗಳೊಂದಿಗೆ ಇರುತ್ತೇವೆ” ಎಂದು ಉಣ್ಣಿತ್ತಾನ್ ಹೇಳಿದ್ದಾರೆ.

ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯದ ಮೊದಲು ಪ್ಯಾಲೆಸ್ತೀನ್ ಬಗ್ಗೆ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದರು. 1938ರಲ್ಲಿ ಮಹಾತ್ಮ ಗಾಂಧಿ ಹರಿಜನ ನಿಯತಕಾಲಿಕೆಯಲ್ಲಿ ಅಮೆರಿಕದವರಿಗೆ ಅಮೆರಿಕ, ಇಂಗ್ಲೀಷರಿಗೆ ಇಂಗ್ಲೆಂಡ್ ಮತ್ತು ಫ್ರೆಂಚರಿಗೆ ಫ್ರಾನ್ಸ್, ಪ್ಯಾಲೆಸ್ತೀನ್ ಪ್ಯಾಲೆಸ್ತೀನರಿಗೆ ಎಂದು ಬರೆದಿದ್ದರು. ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಂದಾಗಿ ಭಾರತವು ಪ್ಯಾಲೆಸ್ತೀನ್ ಅನ್ನು ಒಂದು ರಾಷ್ಟ್ರವೆಂದು ಗುರುತಿಸಿತು. “ಇಂದಿರಾ ಗಾಂಧಿಯವರ ಅಂತ್ಯಕ್ರಿಯೆಯಲ್ಲಿ ವೇಳೆ, ದೆಹಲಿಯ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ನಾಯಕ ಯಾಸರ್ ಅರಾಫತ್ ಅವರು ಕಣ್ಣೀರಿಟ್ಟದ್ದು ನನಗೆ ನೆನಪಿದೆ. ಅವರು ತಮ್ಮ ಸಹೋದರಿ ಹೋದರು ಎಂದು ಹೇಳಿದರು. ಭಾರತವು ಪ್ಯಾಲೆಸ್ತೀನ್ ಜೊತೆ ಭಾವನಾತ್ಮಕ ಸಂಬಂಧವನ್ನು ಹೊಂದಿದೆ.

“ಈಗ, ಭಾರತದಲ್ಲಿ ಹುಟ್ಟಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ. ನಮ್ಮ ಪ್ರಧಾನಿಗೆ ಅಮೆರಿಕಾವನ್ನು ಬೆಂಬಲಿಸಲು ನಾಚಿಕೆಯಾಗುವುದಿಲ್ಲವೇ? ಇಂದು ಭಾರತೀಯ ಮೂಲದ ವ್ಯಕ್ತಿ ರಿಷಿ ಸುನಕ್ ಯುಕೆ ಪ್ರಧಾನಿಯಾಗಿದ್ದಾರೆ. ಆದರೆ ನಾನು ಅವರ ಬಗ್ಗೆ ನಾಚಿಕೆಪಡುತ್ತೇನೆ. ಭಾರತೀಯ ಪ್ರಧಾನಿಯವರು ಅಮೆರಿಕ ಮತ್ತು ಬ್ರಿಟನ್‌ನ ಸಾಮಂತರಾಗಲು ಒಪ್ಪಿಕೊಳ್ಳುವ ಮೂಲಕ ಭಾರತವನ್ನು ಅವಮಾನಿಸಿದ್ದಾರೆ ಎಂದು ಉಣ್ಣಿತ್ತಾನ್ ಹೇಳಿದ್ದಾರೆ.

ಇದನ್ನೂ ಓದಿ: ಗಾಜಾ ಆಸ್ಪತ್ರೆ ಮೇಲೆ ದಾಳಿ; ಹಮಾಸ್​​ನ್ನು ಖಂಡಿಸಿ ನೆತನ್ಯಾಹುಗೆ ಬೆಂಬಲ ಸೂಚಿಸಿದ ಜೋ ಬೈಡನ್

ಗಾಜಾದಲ್ಲಿ ನಡೆಯುತ್ತಿರುವ ಹತ್ಯಾಕಾಂಡವನ್ನು ತಡೆಯಲು ಅಂತಾರಾಷ್ಟ್ರೀಯ ಸಮುದಾಯ ಒಗ್ಗಟ್ಟಾಗಬೇಕು.ಇಸ್ಲಾಮಿಕ್ ಜಗತ್ತು ಒಟ್ಟುಗೂಡಿದರೆ, ಬೆಂಜಮಿನ್ ನೆತನ್ಯಾಹು ಅವರ ಒಂದು ಕಣವೂ ಸಿಗುವುದಿಲ್ಲ. ಆದರೆ ಅವರು ಶಾಂತಿಪ್ರಿಯ ಜನರು. ಅವರಿಗೆ ತಾಳ್ಮೆ ಮತ್ತು ಸ್ವಯಂ ಸಂಯಮವಿದೆ. ಅವರ ತಾಳ್ಮೆಯನ್ನು ಪದೇ ಪದೇ ಪರೀಕ್ಷಿಸಿದ ಕಾರಣ ಹಮಾಸ್ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡಿತು ಎಂದು ಕಾಸರಗೋಡು ಕ್ಷೇತ್ರದ ಸಂಸದರು ಹೇಳಿದ್ದಾರೆ.

ಯುದ್ಧದ ನಂತರ, ಇಸ್ರೇಲಿ ನಾಯಕತ್ವವು ಎರಡನೇ ಮಹಾಯುದ್ಧದ ನಂತರ ನಾಜಿ ಯುದ್ಧ ಅಪರಾಧಿಗಳು ನ್ಯೂರೆಂಬರ್ಗ್ ಟ್ರಯಲ್ ಹೇಗೆ ಎದುರಿಸಿದರು ಎಂಬಂತಹ ಪ್ರಯೋಗಗಳನ್ನು ಎದುರಿಸಬೇಕು.

ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಕರೆದವರಿಗೆ ಹುಬ್ಬೇರಿಸಬೇಡಿ ಎಂದು ಇಸ್ಲಾಮಿಕ್ ವಿದ್ವಾಂಸ ಮತ್ತು ಮಂಗಳೂರು ಮತ್ತು ಕೀಜೂರಿನ ಖಾಜಿ ತ್ವಾಕಾ ಅಹ್ಮದ್ ಅಝ್ಹರಿ ಕಾಸಿಯಾರಕಂ ಹೇಳಿದ್ದಾರೆ.”ಯಹೂದಿಗಳು ವಿಶ್ವದ ಅತ್ಯಂತ ಆಶೀರ್ವದಿಸಿದ ಸಮುದಾಯಗಳಲ್ಲಿ ಒಂದಾಗಿದೆ. ಅವರು ತಮ್ಮ ಬುದ್ಧಿವಂತಿಕೆ ಮತ್ತು ಚಾಕಚಕ್ಯತೆಗೆ ಹೆಸರುವಾಸಿಯಾಗಿದ್ದಾರೆ. ಆದರೆ ಅವರು ಗಾಜಾದಲ್ಲಿ ತಮ್ಮ ನಿಜವಾದ ಬಣ್ಣವನ್ನು ತೋರಿಸುತ್ತಿದ್ದಾರೆ. ಗಾಜಾದ ಜನರಿಗೆ ನ್ಯಾಯ ಮತ್ತು ಧೈರ್ಯವನ್ನು ನೀಡುವಂತೆ ದೇವರನ್ನು ಪ್ರಾರ್ಥಿಸುತ್ತೇನೆ. ಹಮಾಸ್ ಸೈನಿಕರಿಗೆ ಮಾರ್ಗದರ್ಶನ ಮತ್ತು ರಕ್ಷಣೆ ನೀಡಬೇಕೆಂದು ಪ್ರಾರ್ಥಿಸುತ್ತೇನೆ,”ನಾವು ಅವರೊಂದಿಗೆ ಭಾವನಾತ್ಮಕವಾಗಿ ಯುದ್ಧದಲ್ಲಿ ಭಾಗಿಯಾಗಬೇಕು” ಎಂದು ಅವರು ಹೇಳಿರುವುದಾಗಿ ಮಲಯಾಳ ಮನೋರಮಾ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​
ಗಾಯಗೊಂಡ ಕಾಗೆಯ  ಆರೈಕೆ ಮಾಡುತ್ತಿರುವ ಕೊಪ್ಳಳದ ಶ್ರೀನಿವಾಸ ರೆಡ್ಡಿ ದಯಾಮಯಿ
ಗಾಯಗೊಂಡ ಕಾಗೆಯ  ಆರೈಕೆ ಮಾಡುತ್ತಿರುವ ಕೊಪ್ಳಳದ ಶ್ರೀನಿವಾಸ ರೆಡ್ಡಿ ದಯಾಮಯಿ
ಬಿಆರ್ ಪಾಟೀಲ್ ಜೊತೆ ಮಾತಾಡಿ ಬಂದು ಕಾಣುವಂತೆ ಹೇಳಿದ್ದೇನೆ: ಸಿದ್ದರಾಮಯ್ಯ
ಬಿಆರ್ ಪಾಟೀಲ್ ಜೊತೆ ಮಾತಾಡಿ ಬಂದು ಕಾಣುವಂತೆ ಹೇಳಿದ್ದೇನೆ: ಸಿದ್ದರಾಮಯ್ಯ
ಉತ್ತರಕಾಶಿ: ಸಾವು ಗೆದ್ದು ಬಂದ ಕಾರ್ಮಿಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಉತ್ತರಕಾಶಿ: ಸಾವು ಗೆದ್ದು ಬಂದ ಕಾರ್ಮಿಕರನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಆರೋಪ ಮುಕ್ತನಾಗದ ಹೊರತು ಸದನಕ್ಕೆ ಕಾಲಿಡಲ್ಲ, ಸಾಬೀತಾದರೆ ರಾಜೀನಾಮೆ: ಪಾಟೀಲ್
ಆರೋಪ ಮುಕ್ತನಾಗದ ಹೊರತು ಸದನಕ್ಕೆ ಕಾಲಿಡಲ್ಲ, ಸಾಬೀತಾದರೆ ರಾಜೀನಾಮೆ: ಪಾಟೀಲ್
ಕಷ್ಟಪಟ್ಟು ಕನ್ನಡ ಓದಿದ ಮೈಕಲ್ ಅಜಯ್; ಇಲ್ಲಿದೆ ವಿಡಿಯೋ
ಕಷ್ಟಪಟ್ಟು ಕನ್ನಡ ಓದಿದ ಮೈಕಲ್ ಅಜಯ್; ಇಲ್ಲಿದೆ ವಿಡಿಯೋ