ರಾಜಸ್ಥಾನದಲ್ಲಿ ಕಾಂಗ್ರೆಸ್ ನಾಯಕರು ಅರೆಮನಸ್ಸಿನಿಂದ ಜತೆಯಾಗಿದ್ದಾರೆ: ಮೋದಿ

"ಇಲ್ಲಿಯೂ ಅದೇ ಕಥೆ ನಡೆಯುತ್ತಿದೆ, ದೆಹಲಿಯಿಂದ ದೊಡ್ಡ ನಾಯಕರು ಬಂದಾಗ ಅವರು (ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್) ಕ್ಯಾಮೆರಾಗಳ ಮುಂದೆ ಕೈಕುಲುಕಿದ 100 ಸಂದರ್ಭಗಳಿವೆ, ಆದರೆ ಯಾವುದೇ ಒಗ್ಗಟ್ಟು ಇರಲಿಲ್ಲ. ಹೃದಯದಲ್ಲಿ ಕಹಿ. ಅವರು ಕೇವಲ ನಕಲಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ ಎಂದು ಪಿಎಂ ಮೋದಿ ಅವರು ಗೆಹ್ಲೋಟ್ ಮತ್ತು ಪೈಲಟ್‌ರ ಹೆಸರನ್ನು ಉಲ್ಲೇಖಿಸದೆ ಹೇಳಿದ್ದಾರೆ.

ರಾಜಸ್ಥಾನದಲ್ಲಿ ಕಾಂಗ್ರೆಸ್ ನಾಯಕರು ಅರೆಮನಸ್ಸಿನಿಂದ ಜತೆಯಾಗಿದ್ದಾರೆ: ಮೋದಿ
ನರೇಂದ್ರ ಮೋದಿ
Follow us
|

Updated on:Nov 18, 2023 | 7:54 PM

ನಾಗೌರ್‌ ನವೆಂಬರ್ 18: ‘ದೆಹಲಿ ದರ್ಬಾರ್’ ತನ್ನ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿರುವ ಕಾರಣ ರಾಜಸ್ಥಾನ (Rajasthan) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​​ಗೆ (Ashok Gehlot) ರಾಜ್ಯವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ  ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಹೇಳಿದ್ದಾರೆ. ರಾಜಸ್ಥಾನದ ನಾಗೌರ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ರಾಜಸ್ಥಾನದ ಜನರು ತಮ್ಮಷ್ಟಕ್ಕೆ ಉಳಿದಿರುವಾಗ ಸಿಎಂ ದೆಹಲಿ ದರ್ಬಾರ್ ಅನ್ನು ನಿಭಾಯಿಸುವಲ್ಲಿ ನಿರತರಾಗಿದ್ದರು. ಈಗ ಚುನಾವಣೆಗಳು ಬರುತ್ತಿದ್ದಂತೆ ಅವರು ಅರೆಮನಸ್ಸಿನಿಂದ ಜತೆಯಾಗಿದ್ದಾರೆ ಎಂದು ಹೇಳಿದ್ದಾರೆ.

‘ಶತಮಾನದ’ ಕಾರ್ಯಕ್ರಮಕ್ಕೆ ಕಾರ್ಡ್‌ಗಳ ಮೂಲಕ ಎಲ್ಲರನ್ನೂ ಮನೆಗೆ ಆಹ್ವಾನಿಸಿದ ಮಹಿಳೆಯ ಕತೆಯನ್ನು ಹಂಚಿಕೊಂಡ ಪ್ರಧಾನಿ ಮೋದಿ, “ಈ ಶತಮಾನದ ಕಾರ್ಯಕ್ರಮ ಏನೆಂದು ಎಲ್ಲರೂ ಆಶ್ಚರ್ಯಚಕಿತರಾದರು. ಮಹಿಳೆ ತನ್ನ ಪತಿ 100 ನೇ ಬಾರಿ ಧೂಮಪಾನವನ್ನು ತ್ಯಜಿಸುತ್ತಾರೆ ಎಂದು ಹೇಳಿದರು. ಆ ದಿನ ಅವರ ಪತಿ 99 ನೇ ಬಾರಿಗೆ ಧೂಮಪಾನವನ್ನು ತ್ಯಜಿಸಿದ್ದರು.”

“ಇಲ್ಲಿಯೂ ಅದೇ ಕಥೆ ನಡೆಯುತ್ತಿದೆ, ದೆಹಲಿಯಿಂದ ದೊಡ್ಡ ನಾಯಕರು ಬಂದಾಗ ಅವರು (ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್) ಕ್ಯಾಮೆರಾಗಳ ಮುಂದೆ ಕೈಕುಲುಕಿದ 100 ಸಂದರ್ಭಗಳಿವೆ, ಆದರೆ ಯಾವುದೇ ಒಗ್ಗಟ್ಟು ಇರಲಿಲ್ಲ. ಹೃದಯದಲ್ಲಿ ಕಹಿ. ಅವರು ಕೇವಲ ನಕಲಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ ಎಂದು ಪಿಎಂ ಮೋದಿ ಅವರು ಗೆಹ್ಲೋಟ್ ಮತ್ತು ಪೈಲಟ್‌ರ ಹೆಸರನ್ನು ಉಲ್ಲೇಖಿಸದೆ ಹೇಳಿದ್ದಾರೆ. ಏತನ್ಮಧ್ಯೆ, ಸಚಿನ್ ಪೈಲಟ್‌ರನ್ನು ‘ಬೇಚಾರಾ’ (ಪಾಪದವ) ‘ಕಾಯುತ್ತಿರುವ ಮುಖ್ಯಮಂತ್ರಿ’ ಎಂದು ಉಲ್ಲೇಖಿಸಿದ್ದಾರೆ.

ಗಾಂಧಿಯವರ ಪ್ರಚಾರದ ವೇಳೆ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಇಬ್ಬರೂ ರಾಹುಲ್ ಗಾಂಧಿಯೊಂದಿಗೆ ಕಾಣಿಸಿಕೊಂಡಿದ್ದರಿಂದ ದಾಳಿ ನಡೆದಿದೆ. ರಾಜಸ್ಥಾನ ಕಾಂಗ್ರೆಸ್ ಒಗ್ಗಟ್ಟಿನಿಂದ ನಿಂತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. “ನಾವು ಒಟ್ಟಿಗೆ ಕಾಣಿಸಿಕೊಳ್ಳುವುದಲ್ಲ, ನಾವು ಒಟ್ಟಿಗೆ ಇದ್ದೇವೆ.  ಕಾಂಗ್ರೆಸ್ ರಾಜಸ್ಥಾನದಲ್ಲಿ ಗೆಲ್ಲುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.

ಇದನ್ನೂ ಓದಿರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ: ವಿದ್ಯಾಧರ್ ನಗರ ಅಭ್ಯರ್ಥಿ ದಿಯಾ ಕುಮಾರಿ

ಸಚಿನ್ ಪೈಲಟ್ ಗೆಹ್ಲೋಟ್ ವಿರುದ್ಧ ಬಂಡಾಯವೆದ್ದ ನಂತರ ಮತ್ತು ಗೆಹ್ಲೋಟ್ ಅವರು ಪೈಲಟ್ ನ್ನು ‘ದ್ರೋಹಿ’, ‘ದೇಶದ್ರೋಹಿ’ ಎಂದು ಕರೆದಿದ್ದರು. ಈ ವರ್ಷದ ಆರಂಭದಲ್ಲಿ, ಸಚಿನ್ ಪೈಲಟ್ ಭ್ರಷ್ಟಾಚಾರದ ಬಗ್ಗೆ ತಮ್ಮದೇ ಸರ್ಕಾರವನ್ನು ಪ್ರಶ್ನಿಸಿ ಯಾತ್ರೆ ಕೈಗೊಂಡರು. ಆದರೆ, ಈಗ ಪ್ರಚಾರದ ವೇಳೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಶೋಕ್ ಗೆಹ್ಲೋಟ್ ಇತ್ತೀಚೆಗೆ ಪಕ್ಷದ ಸಭೆಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ ಸಚಿನ್ ಪೈಲಟ್ ಕೂಡ ಕಾಣಿಸಿಕೊಂಡಿದ್ದಾರೆ. “ಒಟ್ಟಿಗೆ ಗೆಲ್ಲುತ್ತೇವೆ, ಮತ್ತೊಮ್ಮೆ” ಎಂದು ಗೆಹ್ಲೋಟ್ ಬರೆದಿದ್ದಾರೆ.

ಈ ಬಾರಿ ಕಾಂಗ್ರೆಸ್ ಸರ್ಕಾರ ರಚಿಸುವುದಿಲ್ಲ ಎಂದು ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಹೇಳಿಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. “ಏನಾಯಿತು ಗೆಹ್ಲೋಟ್ ಜಿ? ನಿಮ್ಮ ಮ್ಯಾಜಿಕ್ ನಿಮ್ಮ ಮಗನ ಮೇಲೂ ಕೆಲಸ ಮಾಡುತ್ತಿಲ್ಲವೇ? ಸಿಎಂ ಮಗನ ಕನಸನ್ನು ನೀವು ಈಡೇರಿಸುವುದಿಲ್ಲವೇ” ಎಂದು ಮೋದಿ ಕೇಳಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:50 pm, Sat, 18 November 23

ತಾಜಾ ಸುದ್ದಿ
ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್
ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ಮೇಳದ ಕಲರವ
ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ಮೇಳದ ಕಲರವ
ಜಮೀರ್ ಅಹ್ಮದ್ ವಜಾ ಮಾಡುವಂತೆ  ಸದನದಲ್ಲಿ ಬಿಜೆಪಿ ಶಾಸಕರಿಂದ ಪ್ರತಿಭಟನೆ
ಜಮೀರ್ ಅಹ್ಮದ್ ವಜಾ ಮಾಡುವಂತೆ  ಸದನದಲ್ಲಿ ಬಿಜೆಪಿ ಶಾಸಕರಿಂದ ಪ್ರತಿಭಟನೆ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ: ಸಿಎಂ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ: ಸಿಎಂ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ