ಭಾರತವನ್ನು ಮನಸಾರೆ ಕೊಂಡಾಡಿ ಥ್ಯಾಂಕ್ಸ್ ಅಂತ ರಾಕ್ ಲೆಜೆಂಡ್ ಮಿಕ್ ಜೇಗರ್; ಕೂಡಲೇ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ
ಜೇಗರ್ ಗೆ ಕ್ರಿಕೆಟ್ ಅಂದರೆ ಭಯಂಕರ ಹುಚ್ಚು. ಭಾರತದಲ್ಲಿ ಈಗ ಕೊನೆ ಹಂತದಲ್ಲಿರುವ ಐಸಿಸಿ ವಿಶ್ವಕಪ್ 2023 ಟೂರ್ನಿಯಲ್ಲಿ ಇಗ್ಲೆಂಡ್-ಪಾಕಿಸ್ತಾನ್ ಮಧ್ಯೆ ಕೊಲ್ಕತ್ತಾದಲ್ಲಿ ನಡೆದ ಲೀಗ್ ಪಂದ್ಯವನ್ನು ವೀಕ್ಷಿಸಲು ಅವರು ಯುಕೆಯ ವಿಶೇಷ ಅತಿಥಿಯಾಗಿ ಭಾರತಕ್ಕೆ ಆಗಮಿಸಿದ್ದರು. ವಾಪಸ್ಸು ಹೋಗುವಾಗ ಒಂದು ಟ್ವೀಟ್ ಮಾಡಿರುವ ಮಿಕ್ ಭಾರತ ಮತ್ತು ಭಾರತದ ಜನತೆಗೆ ಧನ್ಯವಾದ ಸಲ್ಲಿಸಿದ್ದು ಅದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ.
ನವದೆಹಲಿ: ಬ್ರಿಟನ್ ರಾಕ್ ದಂತಕಥೆ ಮಿಕ್ ಜೇಗರ್ (Mick Jagger) ಯಾರಿಗೆ ಗೊತ್ತಿಲ್ಲ? ಬ್ರಿಟನ್ ಸಾಮ್ರಾಜ್ಯದಿಂದ ಸರ್ ಗೌರವಕ್ಕೆ ಪಾತ್ರರಾಗಿರುವ 80-ವರ್ಷ ವಯಸ್ಸಿನ ಸರ್ ಫಿಲಿಪ್ ಮೈಕೆಲ್ ಜೇಗರ್; ಗಾಯಕ, ಗೀತೆ ರಚನೆಕಾರ, ನಟ, ನೃತ್ಯಪಟು, ಸಿನಿಮಾ ನಿರ್ಮಾಪಕ-ಎಲ್ಲವೂ ಆಗಿದ್ದಾರೆ. ವಿಶ್ವದಾದ್ಯಂತ ಸಂಗೀತ ಪ್ರೇಮಿಗಳನ್ನು ಹುಚ್ಚು ಹಿಡಿಸಿದ ‘ದಿ ರೋಲಿಂಗ್ ಸ್ಟೋನ್ಸ್’ (The rolling Stones) ರಾಕ್ ಬ್ಯಾಂಡ್ ಅನ್ನು ಸ್ಥಾಪಿಸಿದ್ದು ಇವರೇ. ಜೇಗರ್ ಗೆ ಕ್ರಿಕೆಟ್ ಅಂದರೆ ಭಯಂಕರ ಹುಚ್ಚು. ಭಾರತದಲ್ಲಿ ಈಗ ಕೊನೆ ಹಂತದಲ್ಲಿರುವ ಐಸಿಸಿ ವಿಶ್ವಕಪ್ 2023 ಟೂರ್ನಿಯಲ್ಲಿ ಇಗ್ಲೆಂಡ್-ಪಾಕಿಸ್ತಾನ್ ಮಧ್ಯೆ ಕೊಲ್ಕತ್ತಾದಲ್ಲಿ ನಡೆದ ಲೀಗ್ ಪಂದ್ಯವನ್ನು ವೀಕ್ಷಿಸಲು ಅವರು ಯುಕೆಯ ವಿಶೇಷ ಅತಿಥಿಯಾಗಿ ಭಾರತಕ್ಕೆ ಆಗಮಿಸಿದ್ದರು. ವಾಪಸ್ಸು ಹೋಗುವಾಗ ಒಂದು ಟ್ವೀಟ್ ಮಾಡಿರುವ ಮಿಕ್ ಭಾರತ ಮತ್ತು ಭಾರತದ ಜನತಗೆ ಧನ್ಯವಾದ ಸಲ್ಲಿಸಿದ್ದು ಅದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಪ್ರತಿಕ್ರಿಯಿಸಿದ್ದಾರೆ.
‘You Can’t Always Get What You Want’, but India is a land brimming with seekers, offering solace and ‘Satisfaction’ to all.
Delighted to know you found joy among the people and culture here.
Do keep coming… https://t.co/UXKH529mu5
— Narendra Modi (@narendramodi) November 18, 2023
ತಮ್ಮ ಟ್ವೀಟ್ ನಲ್ಲಿ ಜೇಗರ್, ‘ಭಾರತಕ್ಕೆ ಧನ್ಯವಾದ ಮತ್ತು ನಮಸ್ತೆ, ದೈನಂದಿನ ಚಟುವಟಿಕೆಗಳಿಂದ ಮುಕ್ತನಾಗಿ ಭಾರತಕ್ಕೆ ಭೇಟಿ ನೀಡಿದ್ದು ನನ್ನಲ್ಲಿ ಅಪಾರ ಸಂತಸ ಮೂಡಿಸಿದೆ. ಎಲ್ಲರಿಗೆ ನನ್ನ ಪ್ರೀತಿಪೂರ್ವಕ ನಮನಗಳು,’ ಅಂತ ಹೇಳಿದ್ದಾರೆ. ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ಅವರು, ‘ಬದುಕಲ್ಲಿ ನಾವಂದುಕೊಂಡಿದ್ದೆಲ್ಲ ಯಾವಾಗಲೂ ಸಿಗಲ್ಲ, ಆದರೆ, ಭಾರತ ತನ್ನಲ್ಲಿಗೆ ಬರುವವರಿಗೆ ಸಾಂತ್ವನ ಮತ್ತು ಸಂತೃಪ್ತಿಯನ್ನು ಒದಗಿಸುವ ನಾಡಾಗಿದೆ. ನಮ್ಮ ದೇಶದ ಜನ ಮತ್ತು ಇಲ್ಲಿನ ಸಂಸ್ಕೃತಿ ನಿಮಗೆ ಸಂತೋಷ ನೀಡಿದ್ದು ಗೊತ್ತಾಗಿ ಬಹಳ ಖುಷಿಯಾಗಿದೆ. ಬರ್ತಾ ಇರಿ… ’ ಅಂತ ಟ್ವೀಟ್ ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:09 pm, Sat, 18 November 23