ಭುವನೇಶ್ವರ: ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (National Democratic Alliance – NDA) ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಬುಧವಾರ (ಜೂನ್ 22) ಮುಂಜಾನೆ ಒಡಿಶಾದ ರೈರಂಗ್ಪುರ್ ನಗರದ ಜಗನ್ನಾಥ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಮುರ್ಮು ಭೇಟಿ ನೀಡುವ ಹಿನ್ನೆಲೆಯಲ್ಲಿ ದೇಗುಲಕ್ಕೆ ಭಾರೀ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ದೇಗುಲಕ್ಕೆ ಬಂದಿದ್ದ ಇತರ ಭಕ್ತರು ಮುರ್ಮು ಅವರನ್ನು ಅಭಿನಂದಿಸಿದರು. ಮುರ್ಮು ಅವರು ಸಹ ಭಕ್ತರಿಗೆ ನಗುನಗುತ್ತಲೇ ಪ್ರತಿವಂದನೆ ಸಲ್ಲಿಸಿದರು. ರೈರಂಗ್ಪುರದ ಶಿವ ದೇಗುಲಕ್ಕೂ ಭೇಟಿ ನೀಡಿದ ಅವರು, ಪ್ರಾರ್ಥನೆ ಸಲ್ಲಿಸುವ ಮೊದಲು ದೇಗುಲ ಪ್ರಾಂಗಣದಲ್ಲಿ ಕಸಗುಡಿಸಿದರು.
ಈ ಮೊದಲು ಜಾರ್ಖಂಡ್ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಮುರ್ಮು ಅವರನ್ನು ತನ್ನ ರಾಷ್ಟ್ರಪತಿ ಅಭ್ಯರ್ಥಿಯಾಗಿ ಎನ್ಡಿಎ ನಿನ್ನೆಯಷ್ಟೇ (ಜೂನ್ 21) ಘೋಷಿಸಿತ್ತು. ವಿರೋಧ ಪಕ್ಷಗಳು ತಮ್ಮ ಒಮ್ಮತದ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ ಅವರನ್ನು ಘೋಷಿಸಿದೆ.
#WATCH | Odisha: NDA’s Presidential candidate Draupadi Murmu offers prayers at Rairangpur Jagannath Temple pic.twitter.com/qqUAEY9xWB
— ANI (@ANI) June 22, 2022
ದ್ರೌಪದಿ ಮುರ್ಮು ಯಾರು?
ಸಂತಲ್ ಸಮುದಾಯದ ದ್ರೌಪದಿ ಮುರ್ಮು 1997ರಲ್ಲಿ ರೈರಂಗ್ಪುರದ ನಗರ ಪಂಚಾಯಿತಿಯ ಕೌನ್ಸಿಲರ್ ಆಗಿ ರಾಜಕೀಯ ಜೀವನ ಆರಂಭಿಸಿದರು. ಬುದ್ಧಿವಂತಿಕೆ ಮತ್ತು ಚುರುಕಿನ ಆಡಳಿತದಿಂದ ಬಹುಬೇಗ ಮೇಲೇರಿಸಿದರು. 2000ನೇ ಇಸವಿಯಲ್ಲಿ ಒಡಿಶಾ ಸರ್ಕಾರದ ಸಚಿವರಾದರು. 2015ರಲ್ಲಿ ಜಾರ್ಝಂಡ್ ರಾಜ್ಯಪಾಲರಾದರು.
Odisha | NDA’s Presidential candidate Draupadi Murmu offers prayers at Rairangpur Jagannath Temple pic.twitter.com/8OWKginIG2
— ANI (@ANI) June 22, 2022
ರೈರಂಗ್ಪುರ್ ಕ್ಷೇತ್ರದಿಂದ ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಬಿಜು ಜನತಾ ದಳ (ಬಿಜೆಡಿ) ಪಕ್ಷವು ಬಿಜೆಪಿಯೊಂದಿಗೆ ನಂಟು ಕಳೆದುಕೊಂಡ ನಂತರ ನಡೆದ ಚುನಾವಣೆಯಲ್ಲಿ (2009) ಮುರ್ಮು ತಮ್ಮ ಸ್ಥಾನ ಉಳಿಸಿಕೊಂಡಿದ್ದರು. ಆ ವರ್ಷ ನಡೆದ ಚುನಾವಣೆಯಲ್ಲಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಇಡೀ ರಾಜ್ಯದಲ್ಲಿ ಜಯಗಳಿಸಿತ್ತು. ಜಾರ್ಖಂಡ್ ರಾಜ್ಯದ ಮೊದಲ ಮಹಿಳಾ ರಾಜ್ಯಪಾಲರಾಗಿದ್ದ ಗೌರವವೂ ಅವರಿಗೆ ಸಂದಿದೆ.
#WATCH | Odisha: NDA’s presidential candidate Draupadi Murmu sweeps the floor at Shiv temple in Rairangpur before offering prayers here. pic.twitter.com/HMc9FsVFa7
— ANI (@ANI) June 22, 2022
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:49 am, Wed, 22 June 22