Draupadi Murmu Profile: ದ್ರೌಪದಿ ಮುರ್ಮು ಎನ್ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ! ಯಾರಿವರು? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
India President Election: ದ್ರೌಪದಿ ಮುರ್ಮು ಅವರು ದಶಕಗಳಿಂದ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಇವರು ಅಂತಿಮವಾಗಿ ಭಾರತದ ಮುಂದಿನ ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಆದಿವಾಸಿ ಸಮುದಾಯದಿಂದ ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿದ ಸಾಧನೆಗೆ ಪಾತ್ರರಾಗುತ್ತಾರೆ.
ಆಡಳಿತರಾರೂಢ NDA ಮೈತ್ರಿ ಕೂಟದ ವತಿಯಿಂದ ಮುಂದಿನ ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗಿ (Presidential Election)ದ್ರೌಪದಿ ಮುರ್ಮು ಅವರ (Draupadi Murmu) ಹೆಸರನ್ನು ಘೋಷಿಸಲಾಗಿದೆ. ಪ್ರಸ್ತುತ ಜಾರ್ಖಂಡ್ನ ರಾಜ್ಯಪಾಲರಾದ ದ್ರೌಪದಿ ಮುರ್ಮು ಒಡಿಶಾ (Odisha) ಮೂಲದ ಆದಿವಾಸಿ ಮಹಿಳೆ.
ದ್ರೌಪದಿ ಮುರ್ಮು ಅವರು ದಶಕಗಳಿಂದ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಇವರು ಅಂತಿಮವಾಗಿ ಭಾರತದ ಮುಂದಿನ ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಆದಿವಾಸಿ ಸಮುದಾಯದಿಂದ ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿದ ಸಾಧನೆಗೆ ಪಾತ್ರರಾಗುತ್ತಾರೆ.
ದ್ರೌಪದಿ ಮುರ್ಮು ಅವರು ಮೊಟ್ಟಮೊದಲ ಬಾರಿಗೆ ಜಾರ್ಖಂಡ್ನ ರಾಜ್ಯಪಾಲರಾಗಿ ನೇಮಕಗೊಂಡ ಮಹಿಳೆ. ತಮ್ಮ 59ನೇ ವಯಸ್ಸಿನಲ್ಲಿ 2015ರ ಮೇ ನಲ್ಲಿ ಇವರು ಜಾರ್ಖಂಡ್ನ ರಾಜ್ಯಪಾಲರಾಗಿ ನೇಮಕಗೊಂಡರು. ಒಡಿಶಾ ರಾಜ್ಯದ ಕುಸುಮಿ ಬ್ಲಾಕ್ನ ಊಪರ್ಬೇಡಾ ಗ್ರಾಮದ ನಿವಾಸಿ. ಒಡಿಶಾ ರಾಜ್ಯದಿಂದ ಯಾವುದೇ ರಾಜ್ಯದ ರಾಜ್ಯಪಾಲ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳೆ ಇವರು.
ದಿವಂಗತ ಬೀರಾಂಚಿ ನಾರಾಯಣ ಟುಡು ಅವರ ಪುತ್ರಿಯಾದ ದ್ರೌಪದಿ ಮುರ್ಮು ಅವರು ಒಡಿಶಾ ರಾಜ್ಯದ ರಾಯರಂಗಪುರದ ಜಿಲ್ಲೆಯಲ್ಲಿ ಕೌನ್ಸಿಲರ್ ಆಗಿ 1997ರಲ್ಲಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು. ಅದೇ ವರ್ಷ ಅವರು ರಾಯರಂಗಪುರದ ಉಪಾಧ್ಯಕ್ಷೆಯಾಗಿಯೂ ಆಯ್ಕೆಯಾದರು. ಅದಾದ 3 ವರ್ಷಗಳ ಬಳಿಕ ಅವರು ಅದೇ ಕ್ಷೇತ್ರದಿಂದ ಒಡಿಶಾ ಅಸೆಂಬ್ಲಿಗೂ ಆಯ್ಕೆಯಾದರು. ಮುಂದೆ ಅವರು ಬಿಜೆಪಿ ಎಸ್ಟಿ (ಪರಿಶಿಷ್ಟ ವರ್ಗ) ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯೆಯಾಗಿಯೂ ನೇಮಕಗೊಂಡರು.
ಭುವನೇಶ್ವರದ ರಮಾ ದೇವಿ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ದ್ರೌಪದಿ ಮುರ್ಮು ಬಿಎ ಪದವಿ ಪಡೆದಿದ್ದಾರೆ. ಸಹಾಯಕ ಪ್ರೊಫೆಸರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಒಡಿಶಾ ರಾಜ್ಯದ ನೀರಾವರಿ ಇಲಾಖೆಯಲ್ಲಿ ಕಿರಿಯ ಸಹಾಯಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
2000 ದಿಂದ 2004 ವರೆಗೂ ದ್ರೌಪದಿ ಮುರ್ಮು ಅವರು ನವೀನ್ ಪಟ್ನಾಯಕ್ ನೇತೃತ್ವದ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಅನೇಕ ಸಚಿವಾಲಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2007ರಲ್ಲಿ ದ್ರೌಪದಿ ಮುರ್ಮು ಅವರು ಮಾದರಿ ಶಾಸಕಿಯಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಒಡಿಶಾ ಅಸೆಂಬ್ಲಿಯ ಪಂಡಿತ್ ನೀಲಕಂಠ ಪ್ರಶಸ್ತಿಗೆ ಆಯ್ಕೆಯಾದರು.
ಅಭ್ಯರ್ಥಿ ಘೋಷಣೆ ನಂತರ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಮತಿ ದ್ರೌಪದಿ ಮುರ್ಮು ಅವರು ನಮ್ಮ ರಾಷ್ಟ್ರದ ಶ್ರೇಷ್ಠ ರಾಷ್ಟ್ರಪತಿಯಾಗುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.
Smt. Droupadi Murmu Ji has devoted her life to serving society and empowering the poor, downtrodden as well as the marginalised. She has rich administrative experience and had an outstanding gubernatorial tenure. I am confident she will be a great President of our nation.
— Narendra Modi (@narendramodi) June 21, 2022
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ ಟಿ ರವಿ ಅವರೂ ಸಹ ಟ್ವೀಟ್ ಮಾಡಿದ್ದಾರೆ:
In yet another remarkable step towards women empowerment and social justice, PM Shri @narendramodi led NDA Government declares Smt. Draupadi Murmu as its candidate for the President post.
Thank "The KarmaYogi" for honouring Our Tribal Community with such a huge responsibility ? pic.twitter.com/mJBhJ6tPNq
— C T Ravi ?? ಸಿ ಟಿ ರವಿ (@CTRavi_BJP) June 21, 2022
ಇನ್ನು, ಅಣಿಮಾ ಸೋನಕರ್ ಎಂಬುವವರು ಬಿಜೆಪಿ ಪಕ್ಷಕ್ಕೆ ಮೂರು ಬಾರಿ ದೇಶದ ಪ್ರಥಮ ಪ್ರಜೆಯನ್ನು ಆಯ್ಕೆ ಮಾಡುವ ಅವಕಾಶ ಸಿಕ್ಕಿದ್ದು ಮೂರೂ ಬಾರಿಯೂ ವಿಭಿನ್ನ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡಿದೆ ಎಂದು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ:
3 times that @BJP4India had the opportunity to appoint the “President of India”1) A Muslim2) An SC3) An ST & Woman#DraupadiMurmu Jai Hind pic.twitter.com/W8N5qYCfdp
— अणिमा सोनकर (@AnimaSonkar) June 21, 2022
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 10:08 pm, Tue, 21 June 22