Naxal Attack: ಒಡಿಶಾದಲ್ಲಿ ನಕ್ಸಲ್ ದಾಳಿ; ಹುತಾತ್ಮರಾದ ಮೂವರು ಸಿಆರ್‌ಪಿಎಫ್ ಯೋಧರು
ನುವಾಪಾಡಾದಲ್ಲಿ ನಕ್ಸಲರ ಗುಂಡಿನ ದಾಳಿಯಿಂದಾಗಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಸಿಆರ್ಇಎಫ್ ಸಿಬ್ಬಂದಿ ರಸ್ತೆ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ನಕ್ಸಲರು ಅವರ ಮೇಲೆ ದಾಳಿ ನಡೆಸಿದ್ದಾರೆ
ಒಡಿಶಾ: ಒಡಿಶಾದ ನುವಾಪಾಡಾ ಜಿಲ್ಲೆಯಲ್ಲಿ ನಿನ್ನೆ (ಮಂಗಳವಾರ) ಮಧ್ಯಾಹ್ನ ನಡೆದ ನಕ್ಸಲರ ದಾಳಿಯಲ್ಲಿ (Naxal Attack) ಮೂವರು ಸಿಆರ್‌ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭೇದೆನ್ ಬ್ಲಾಕ್‌ನ ಸಹಜಪಾನಿ ಗ್ರಾಮದ ಬಳಿಯ ಪಟಧಾರ ಮೀಸಲು ಅರಣ್ಯದಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ.
ನುವಾಪಾಡಾದಲ್ಲಿ ನಕ್ಸಲರ ಗುಂಡಿನ ದಾಳಿಯಿಂದಾಗಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ನಮ್ಮ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳುತ್ತಿದ್ದಾರೆ ಎಂದು ಒಡಿಶಾದ ಪೊಲೀಸ್ ಮಹಾನಿರ್ದೇಶಕ ಎಸ್‌ಕೆ ಬನ್ಸಾಲ್ ತಿಳಿಸಿದ್ದಾರೆ. ಸಿಆರ್ಇಎಫ್ ಸಿಬ್ಬಂದಿ ರಸ್ತೆ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ನಕ್ಸಲರು ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇನಾ ಪಡೆಗಳ ಚಲನವಲನದ ಬಗ್ಗೆ ನಕ್ಸಲರಿಗೆ ಮೊದಲೇ ಮಾಹಿತಿ ಇತ್ತು ಎಂದು ಶಂಕಿಸಲಾಗಿದೆ. ನಕ್ಸಲರು ಸುಧಾರಿತ ಅಥವಾ ಕಚ್ಚಾ ನಿರ್ಮಿತ ಬ್ಯಾರೆಲ್ ಗ್ರೆನೇಡ್ ಲಾಂಚರ್‌ಗಳನ್ನು (ಬಿಜಿಎಲ್) ಬಳಸಿ ಸೇನಾ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ, ಘಟನೆ ನಡೆದಾಗ ಏಳು ಯೋಧರು ಆ ಸ್ಥಳದಲ್ಲಿದ್ದರು ಎಂದು ಭುವನೇಶ್ವರದಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಉತ್ತರ ಪ್ರದೇಶ ಮೂಲದ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಶಿಶು ಪಾಲ್ ಸಿಂಗ್, ಹರಿಯಾಣ ಮೂಲದ ಎಎಸ್‌ಐ ಶಿವ ಲಾಲ್ ಮತ್ತು ಬಿಹಾರ ಮೂಲದ ಕಾನ್‌ಸ್ಟೆಬಲ್ ಧರ್ಮೇಂದ್ರ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಅವರು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) 19ನೇ ಬೆಟಾಲಿಯನ್‌ನಲ್ಲಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ