ಕೇರಳದಲ್ಲಿ ಅರೆಸ್ಟ್ ಆದ ಇಬ್ಬರು ನಕ್ಸಲರನ್ನ 10 ದಿನ ಕುಂದಾಪುರ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ ನ್ಯಾಯಾಲಯ; ಬಂಧಿತ ನಕ್ಸಲರ ವಿಚಾರಣೆ

ಕೇರಳದಲ್ಲಿ ಬಂಧಿತರಾದ ನಕ್ಸಲ್ ನಾಯಕರನ್ನು ಮೇ 20 ರವರೆಗೆ ಅಂದರೆ 10 ದಿನಗಳ ಕಾಲ ಕುಂದಾಪುರ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಲಾಗಿದೆ. ನಕ್ಸಲ್ ಚಟುವಟಿಕೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿ ಆಗಿರುವ ಆರೋಪ ಸಂಬಂಧ ಇಬ್ಬರನ್ನು ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಇಬ್ಬರನ್ನು ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು.

ಕೇರಳದಲ್ಲಿ ಅರೆಸ್ಟ್ ಆದ ಇಬ್ಬರು ನಕ್ಸಲರನ್ನ 10 ದಿನ ಕುಂದಾಪುರ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ ನ್ಯಾಯಾಲಯ; ಬಂಧಿತ ನಕ್ಸಲರ ವಿಚಾರಣೆ
ಕೇರಳದಲ್ಲಿ ಅರೆಸ್ಟ್ ಆದ ನಕ್ಸಲ್ಸ್
Follow us
TV9 Web
| Updated By: ಆಯೇಷಾ ಬಾನು

Updated on:May 12, 2022 | 2:52 PM

ಉಡುಪಿ: ಶೃಂಗೇರಿ ಭುವನಹಕ್ಲು ನಿವಾಸಿ, ನಕ್ಸಲ್ ನಾಯಕ ಬಿ.ಜೆ.ಕೃಷ್ಣಮೂರ್ತಿ ಮತ್ತು ಸಾವಿತ್ರಿ ಸೇರಿ ಇಬ್ಬರು ನಕ್ಸಲರನ್ನು ಮೇ 20ರವರೆಗೆ ಕುಂದಾಪುರ ಪೊಲೀಸ್ ಕಸ್ಟಡಿಗೆ ನೀಡಿ ಉಡುಪಿ ಜಿಲ್ಲೆಯ ಕುಂದಾಪುರ ನ್ಯಾಯಾಲಯ ಆದೇಶ ಹೊರಡಿಸಿದೆ. ಕೇರಳದಲ್ಲಿ ಬಂಧಿತರಾದ ನಕ್ಸಲ್ ನಾಯಕರನ್ನು ಮೇ 20 ರವರೆಗೆ ಅಂದರೆ 10 ದಿನಗಳ ಕಾಲ ಕುಂದಾಪುರ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಲಾಗಿದೆ.

ನಕ್ಸಲ್ ಚಟುವಟಿಕೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿ ಆಗಿರುವ ಆರೋಪ ಸಂಬಂಧ ಇಬ್ಬರನ್ನು ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಇಬ್ಬರನ್ನು ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಕೇರಳದಲ್ಲಿ ಬಿ.ಜೆ.ಕೃಷ್ಣಮೂರ್ತಿ, ಸಾವಿತ್ರಿಯನ್ನು ಕೇರಳ ಭಯೋತ್ಪಾದನಾ ನಿಗ್ರಹ ಪಡೆ ಕಳೆದ ನವೆಂಬರ್ 10ರಂದು ವಯನಾಡಿನಲ್ಲಿ ಬಂಧಿಸಿತ್ತು. ಫೆ.24ರಂದು ಇಬ್ಬರನ್ನು ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಹಲವು ಪ್ರಕರಣ ಸಂಬಂಧ ವಿಚಾರಣೆಗಾಗಿ ಕೇರಳ ಪೊಲೀಸರು ಕೃಷ್ಣಮೂರ್ತಿ, ಸಾವಿತ್ರಿ ಹಸ್ತಾಂತರಿಸಿದ್ದರು. ಸದ್ಯ 10 ದಿನಗಳ ಕಾಲ ಕುಂದಾಪುರ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಲಾಗಿದೆ.

ಸದ್ಯ ಈಗಾಗಲೆ ಹೆಬ್ರಿ, ಕಾರ್ಕಳ ಮತ್ತು ಅಜೆಕಾರು ಠಾಣಾ ವ್ಯಾಪ್ತಿಯ ಪ್ರಕರಣದ ಮಹಜರು ಮುಕ್ತಾಯಗೊಂಡಿದೆ. 2006 ರಲ್ಲಿ ಕುಂದಾಪುರ ಅಮಾಸೆಬೈಲ್ ನಡೆದ ಪ್ರಕರಣ ವಿಚಾರಣೆ ನಡೆಸಬೇಕಿದೆ. ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಕೇಶವ್ ಯಡಿಯಾಳದ ಹತ್ಯೆ ಪ್ರಕರಣ ಸೇರಿದಂತೆ ಇನ್ನಿತರ ಪ್ರಕರಣಗಳ ವಿಚಾರಣೆಗಾಗಿ ಕುಂದಾಪುರ ಉಪವಿಭಾಗದ ಪೊಲೀಸರು ಕೃಷ್ಣಮೂರ್ತಿ, ಸಾವಿತ್ರಿಯನ್ನು ವಶಕ್ಕೆ ಪಡೆದಿದ್ದಾರೆ. ಇವರ ಮೇಲೆ ಅಮಾಸೆಬೈಲು ಠಾಣೆಯಲ್ಲಿ 4, ಶಂಕರನಾರಾಯಣ 6, ಕೊಲ್ಲೂರಿನಲ್ಲಿ 1 ಪ್ರಕರಣ ದಾಖಲಾಗಿದೆ. ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಮತ್ತು ತಂಡದಿಂದ ನಕ್ಸಲ್ ವಾದಿಗಳ ವಿಚಾರಣೆ ನಡೆಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಅಸ್ವಸ್ಥಗೊಂಡ ಹಿನ್ನೆಲೆ ಉಗ್ರನನ್ನು ಕಿಮ್ಸ್ಗೆ ದಾಖಲಿಸಿ ಚಿಕಿತ್ಸೆ ಇನ್ನು ಮತ್ತೊಂದು ಕಡೆ ನಿತ್ರಾಣಗೊಂಡಿದ್ದ ಪಾಕಿಸ್ತಾನ ಉಗ್ರ ಮೊಹಮ್ಮದ್ ಫಹಾದ್(42) ನನ್ನು ಮರಳಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಉಗ್ರಚ ಮೊಹಮ್ಮದ್ ಫಹಾದ್ ಹುಚ್ಚಾಟ ಮೆರೆದಿದ್ದ. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 7 ದಿನದಿಂದ ಉಪವಾಸವಿದ್ದ. ಈ ಹಿನ್ನೆಲೆ ಅಸ್ವಸ್ಥಗೊಂಡಿದ್ದು ಉಗ್ರನನ್ನು ಕಿಮ್ಸ್ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಕೆಆರ್ಎಸ್ ಡ್ಯಾಂ ಸ್ಫೋಟಿಸುವ ಸಂಚು ರೂಪಿಸಿದ್ದ ಉಗ್ರನನ್ನು 2006ರ ಅಗಸ್ಟ್ 26ರಂದು ಮೈಸೂರಿನ ವಿಜಯನಗರ ಠಾಣೆಯ ಪೊಲೀಸರು ಬಂಧಿಸಿದ್ದರು. 2021ರಲ್ಲಿ ಮೈಸೂರು ಜೈಲಿನಿಂದ ಧಾರವಾಡ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿತ್ತು. ತನ್ನ ವಿರುದ್ಧದ ಪ್ರಕರಣಗಳ ತನಿಖೆಯನ್ನು ಶೀಘ್ರ ಮುಗಿಸಬೇಕು. ತನ್ನನ್ನೂ ಬೆಂಗಳೂರು ಅಥವಾ ಕಾಶ್ಮೀರದ ಜೈಲಿಗೆ ಸ್ಥಳಾಂತರಿಸಬೇಕು, ಸಹ ಕೈದಿಗಳ ಜೊತೆ ಬೆರೆಯಲು ಅವಕಾಶ ನೀಡುವಂತೆ ಆಗ್ರಹಿಸಿ ಉಗ್ರ ಮೊಹಮ್ಮದ್ ಫಹಾದ್ ಉಪವಾಸ ಮಾಡಿದ್ದ. ಬೆಂಗಳೂರು, ಕಾಶ್ಮೀರದ ಜೈಲಿನಲ್ಲಿ ಉಗ್ರ ಫಹಾದ್ ಸಹಚರರಿದ್ದಾರೆ. ಸದ್ಯ ಮೊಹಮ್ಮದ್ ಫಹಾದ್ 14 ವರ್ಷ ಶಿಕ್ಷೆಗೆ ಒಳಗಾಗಿದ್ದಾನೆ. ಉಗ್ರ ಚಟುವಟಿಕೆ ಹಿನ್ನೆಲೆ ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದೆ.

Published On - 2:52 pm, Thu, 12 May 22