Draupadi Murmu: 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಇಂದು ಪ್ರಮಾಣ ವಚನ; ಹೀಗಿದೆ ಕಾರ್ಯಕ್ರಮ ವೇಳಾಪಟ್ಟಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 25, 2022 | 7:30 AM

President of India: ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕಾರ್ಯಕ್ರಮದ ಸಮಯ ಹಾಗೂ ಇನ್ನಿತರ ಕಾರ್ಯಕ್ರಮಗಳ ವಿವರ ಹೀಗಿದೆ.

Draupadi Murmu: 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಇಂದು ಪ್ರಮಾಣ ವಚನ; ಹೀಗಿದೆ ಕಾರ್ಯಕ್ರಮ ವೇಳಾಪಟ್ಟಿ
ರಾಷ್ಟ್ರದ ಪ್ರಥಮ ಪ್ರಜೆ ದ್ರೌಪದಿ ಮುರ್ಮು ಅವರಿಂದ ಈ ಬಾರಿ ದಸರಾ ಉದ್ಘಾಟನೆ: ಸಿಎಂ ಬಸವರಾಜ್ ‌ಬೊಮ್ಮಾಯಿ ಪ್ರಕಟ
Follow us on

ಭಾರತದ 15ನೇ ರಾಷ್ಟ್ರಪತಿಯಾಗಿ (15th President of India) ದ್ರೌಪದಿ  ಮುರ್ಮು (Draupadi Murmu) ಅವರು ಇಂದು (ಸೋಮವಾರ) ಬೆಳಗ್ಗೆ 10.14ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಹುದ್ದೆ ಅಲಂಕರಿಸುವ ದೇಶದ ಪ್ರಥಮ ಬುಡಕಟ್ಟು ಮಹಿಳೆ ಎಂಬ ಹೆಗ್ಗಳಿಕೆಗೆ ಮುರ್ಮು ಪಾತ್ರವಾಗಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ ಕಾರ್ಯಕ್ರಮದ ಸಮಯ ಹಾಗೂ ಇನ್ನಿತರ ಕಾರ್ಯಕ್ರಮಗಳ ಬಗ್ಗೆ ರಾಷ್ಟ್ರಪತಿಯವರ ಕಾರ್ಯದರ್ಶಿ ಶುಕ್ರವಾರ ಮಾಹಿತಿ ಬಿಡುಗಡೆ ಮಾಡಿದ್ದಾರೆ.

ಕಾರ್ಯಕ್ರಮದ ವೇಳಾಪಟ್ಟಿ 

9:17 am: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತಮ್ಮ ಅಪಾರ್ಟ್​​​ಮೆಂಟ್​​​ನಿಂದ ಹೊರಟು ಸಮಿತಿ ಕೊಠಡಿ ಕಾವೇರಿಗೆ ತಲುಪಲಿದ್ದಾರೆ. 9.20ಕ್ಕೆ ಅವರು ಇಲ್ಲಿ ತಲುಪುವ ನಿರೀಕ್ಷೆ ಇದೆ.

9:22 am: ಚುನಾಯಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾರ್ತ್ ಕೋರ್ಟ್​​ಗೆ ಬರಲಿದ್ದಾರೆ. ಅಲ್ಲಿ ಅವರನ್ನು ಎಡಿಸಿ ಅವರು ಸ್ವಾಗತಿಸಿ ಕಾವೇರಿಗೆ ಕರೆ ತರಲಿದ್ದಾರೆ. ಅಲ್ಲಿ ರಾಷ್ಟ್ರಪತಿ ಕೋವಿಂದ್ ಅವರು ಮುರ್ಮು ಅವರನ್ನು ಸ್ವೀಕರಿಸಲಿದ್ದಾರೆ.

9:37 am: ರಾಷ್ಟ್ರಪತಿಯವರ ಮಿಲಿಟರಿ ಸೆಕ್ರೆಟರಿ (MSP) ಅವರು ಬರಲಿದ್ದು, ರಾಷ್ಟ್ರಪತಿಯವರ ಬಾಡಿಗಾರ್ಡ್ ಗಳಿಂದ ಸೆಲ್ಯೂಟ್ ಸ್ವೀಕರಿಸಲಿದ್ದಾರೆ.

9:42 am: ರಾಷ್ಟ್ರಪತಿ ಕೋವಿಂದ್ ಮತ್ತು ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರು ಕಾವೇರಿಯಿಂದ ದರ್ಬಾರ್ ಹಾಲ್​ಗೆ ಬರಲಿದ್ದು ಇಲ್ಲಿ ಮೆರವಣಿಗೆ ನಡೆಯಲಿದೆ. ಮೆರವಣಿಗೆಯು ರಾಷ್ಟ್ರಪತಿ ಭವನದ ಉತ್ತರ ಭಾಗದಿಂದ ನಂದಿ ಪ್ರತಿಮೆ ಸುತ್ತಿ ದರ್ಬಾರ್ ಹಾಲ್ ಗೆ ಬಂದು ವಂದನಾ ವೇದಿಕೆಯ ಮುಂದೆ ಬರುತ್ತದೆ. ರಾಷ್ಟ್ರಪತಿ ಮತ್ತು ಆಯ್ಕೆಯಾಗಿರುವ ನೂತನ ರಾಷ್ಟ್ರಪತಿ ವೇದಿಕೆಗೆ ಆಗಮಿಸಲಿದ್ದಾರೆ.

9:49 am: ರಾಷ್ಟ್ರಪತಿಯ ಅಂಗರಕ್ಷಕರು ನ್ಯಾಷನಲ್ ಸೆಲ್ಯೂಟ್ ನೀಡಲಿದ್ದಾರೆ. ರಾಷ್ಟ್ರಪತಿ ಸೆಲ್ಯೂಟ್ ಸ್ವೀಕರಿಸಲಿದ್ದಾರೆ. ತಕ್ಷಣವೇ ರಾಷ್ಟ್ರಪತಿಯವರ ಐಷಾರಾಮಿ ದೊಡ್ಡ ವಾಹನ ವೇದಿಕೆಯ ಬಳಿ ಬರಲಿದೆ. ಹಾಲಿ ರಾಷ್ಟ್ರಪತಿ ವೇದಿಕೆಯ ಕಡೆಗಿರುವ ಹಿಂಬದಿ ಸೀಟಲ್ಲಿ ಕೂರಲಿದ್ದಾರೆ. ಎಡಿಸಿ ಮತ್ತು ಚುನಾಯಿತ ರಾಷ್ಟ್ರಪತಿ ವೇದಿಕೆಯಿಂದ ದೂರದ ಹಿಂಬದಿ ಸೀಟಲ್ಲಿ  ಕೂರಲಿದ್ದಾರೆ.

9:50 am: ರಾಷ್ಟ್ರಪತಿಯವರ ವಾಹನ ಪಿಬಿಜಿ ಬೆಂಗಾವಲಿನೊಂದಿಗೆ ಸಂಸತ್ ಭವನದ ಗೇಟ್ 5ಗೆ ಬರಲಿದೆ.  6 ಸಿಖ್ ಗಾರ್ಡ್​​ಗಳು ನಿರ್ಗಮನಕ್ಕಾಗಿ ಜೈಪುರ ಕಾಲಮ್‌ನ ದಕ್ಷಿಣ ಭಾಗದಲ್ಲಿ ಕಾವಲುಗಾರರಾಗಿ ನಿಲ್ಲುತ್ತಾರೆ. ಈ ಮಾರ್ಗವು ರಾಷ್ಟ್ರಪತಿ ಭವನದ ಮುಖ್ಯ ಗೇಟ್ ಆಗಿರುತ್ತದೆ. ಇದು ಸೆಂಟ್ರಲ್ ವಿಸ್ಟಾ- ಸಂಸತ್ ಭವನದ ಐರನ್ ಗೇಟ್ 7 – ಕಟ್ಟಡದ ಗೇಟ್ 10, 9,8, 7, 6 ದಾಟಿ ಸಂಸತ್ ಭವನದ ಗೇಟ್ ಸಂಖ್ಯೆ 5 ತಲುಪುತ್ತದೆ. ಮೂರು ಸೇವೆಗಳ ಸಿಬ್ಬಂದಿಗಳು ಮಾರ್ಗದಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಸಾಲಿನಲ್ಲಿ ನಿಲ್ಲುತ್ತಾರೆ ಮತ್ತು ವಿವಿಐಪಿಗಳು ಹಾದುಹೋಗುವಾಗ ವಂದನೆ ಸಲ್ಲಿಸುತ್ತಾರೆ.

9:50 am: ದೇಶದ ಪ್ರಥಮ ಮಹಿಳೆ ನಾರ್ತ್ ಕೋರ್ಟ್​ನಿಂದ ಪಾರ್ಲಿಮೆಂಟ್​ನ ಸೆಂಟ್ರಲ್ ಹಾಲ್​ಗೆ ಹೊರಡಲಿದ್ದಾರೆ.

10:03 am: ರಾಷ್ಟ್ರಪತಿ ಮತ್ತು ಚುನಾಯಿತ ರಾಷ್ಟ್ರಪತಿ ವಿಧ್ಯುಕ್ತ ವಾಹನ ಮೆರವಣಿಗೆಯಲ್ಲಿ ಸಂಸತ್ ಭವನಕ್ಕೆ ಆಗಮಿಸುತ್ತಾರೆ ಮತ್ತು ಗೇಟ್ ಸಂಖ್ಯೆ 5 ರಲ್ಲಿ ಇಳಿಯುತ್ತಾರೆ. ಅವರನ್ನು ರಾಜ್ಯಸಭಾ ಅಧ್ಯಕ್ಷರು, ಲೋಕಸಭೆ ಸ್ಪೀಕರ್ ಮತ್ತು ಭಾರತದ ಮುಖ್ಯ ನ್ಯಾಯಾಧೀಶರು ಬರಮಾಡಿಕೊಳ್ಳುತ್ತಾರೆ.

10:05 am: ರಾಷ್ಟ್ರಪತಿಯವರು ಮೆರವಣಿಗೆಯಲ್ಲಿ ಪಾರ್ಲಿಮೆಂಟ್​ನ ಸೆಂಟ್ರಲ್ ಹಾಲ್​​ಗೆ ಹೋಗಲಿದ್ದಾರೆ.

10:11 am: ಚುನಾವಣಾ ಆಯೋಗವು ಚುನಾಯಿತ ರಾಷ್ಟ್ರಪತಿ ಯಾರೆಂದು ಹೇಳುವ ಪ್ರಕಟಣೆಯನ್ನು ಓದಿ ಹೇಳಲು ರಾಷ್ಟ್ರಪತಿಯವರು ಆದೇಶ ನೀಡುವಂತೆ ಗೃಹ ಕಾರ್ಯದರ್ಶಿ ಕೇಳಿಕೊಳ್ಳುತ್ತಾರೆ. ರಾಷ್ಟ್ರಪತಿಯವರ ಒಪ್ಪಿಗೆ ಪಡೆದ ನಂತರ ಗೃಹ ಕಾರ್ಯದರ್ಶಿ ಆ ಪ್ರಕಟಣೆಯನ್ನು ಓದಿ ಹೇಳುತ್ತಾರೆ.

10:14 am: ಭಾರತದ ಮುಖ್ಯ ನ್ಯಾಯಾಧೀಶರು ಮತ್ತು ರಾಷ್ಟ್ರಪತಿಯಾಗಿ ಆಯ್ಕೆಯಾದವರು ತಮ್ಮ ತಮ್ಮ ಆಸನಗಳಲ್ಲಿ ಕೂರುತ್ತಾರೆ . ಸಿಜೆಐ ಅವರು ಚುನಾಯಿತ ರಾಷ್ಟ್ರಪತಿಗೆ ಪ್ರಮಾಣ ವಚನದ ನಮೂನೆಯನ್ನು ಹಸ್ತಾಂತರಿಸುತ್ತಾರೆ.

10:14 am: ದ್ರೌಪದಿ ಮುರ್ಮು ಅವರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ ಪ್ರಮಾಣವಚನ ಬೋಧಿಸಲಿದ್ದಾರೆ. ಅವರು ಕೋವಿಂದ್ ಅವರೊಂದಿಗೆ ಸೀಟು ವಿನಿಮಯ ಮಾಡಿಕೊಳ್ಳುತ್ತಾರೆ.

10:18 am: ಅಧ್ಯಕ್ಷರ ಕಾರ್ಯದರ್ಶಿ ಪ್ರಮಾಣ ಪತ್ರವನ್ನು ನೂತನ ರಾಷ್ಟ್ರಪತಿ ಮುಂದೆ  ಇಡುತ್ತಾರೆ, ಅವರು ಅದಕ್ಕೆ ಸಹಿ ಹಾಕುತ್ತಾರೆ.

10:18 am: ರಾಷ್ಟ್ರಪತಿಗಳ ಅನುಮತಿಯ ನಂತರ ಗೃಹ ಕಾರ್ಯದರ್ಶಿ ಘೋಷಣೆಯನ್ನು ಪ್ರಕಟಿಸುತ್ತಾರೆ.

10:23 am: ನೂತನ ರಾಷ್ಟ್ರಪತಿ ಭಾಷಣ ಮಾಡುತ್ತಾರೆ.

10:35 am: ಸಮಾರಂಭವನ್ನು ಮುಗಿಸಲು ಗೃಹ ಕಾರ್ಯದರ್ಶಿಯ ಮನವಿಗೆ ರಾಷ್ಟ್ರಪತಿ ಒಪ್ಪಿಗೆ ನೀಡುತ್ತಾರೆ.