ಆನಂದಯ್ಯನ ಔಷಧಿ ಫಾರ್ಮುಲಾದೊಂದಿಗೆ ತಯಾರಿಸಿದ್ದಾಗಿ ಹೇಳಿಕೊಂಡು ಇನ್ನೂ ಹಲವರಿಂದ ಔಷಧ ವಿತರಣೆ; ಮುಗಿಬಿದ್ದ ಜನಸ್ತೋಮ

ಅಮಲಾಪುರಂನ ಗೀತಾ ಮಂದಿರದ ಬಳಿ ಕೊರೊನಾ ನಿವಾರಣೆಯಾಗುತ್ತದೆ ಎಂದು ಆನಂದಯ್ಯನ ಔಷಧಿ ಎಂಬ ಹೆಸರಲ್ಲಿ ಔಷಧಿ ವಿತರಣೆ ಮಾಡಲಾಗುತ್ತಿದ್ದು, ಕೊವಿಡ್ ನಿಯಮ ಮರೆತು ಭಾರಿ ಜನಸ್ತೋಮ ಸೇರಿದೆ.

ಆನಂದಯ್ಯನ ಔಷಧಿ ಫಾರ್ಮುಲಾದೊಂದಿಗೆ ತಯಾರಿಸಿದ್ದಾಗಿ ಹೇಳಿಕೊಂಡು ಇನ್ನೂ ಹಲವರಿಂದ ಔಷಧ ವಿತರಣೆ; ಮುಗಿಬಿದ್ದ ಜನಸ್ತೋಮ
ಕೊರೊನಾ ವೈರಸ್ ವಿರುದ್ಧ ಆಯುರ್ವೇದ ಔಷಧ ನೀಡಲು ಆನಂದಯ್ಯಗೆ ಆಂಧ್ರ ಸರ್ಕಾರ ಗ್ರೀನ್​ ಸಿಗ್ನಲ್
Follow us
guruganesh bhat
|

Updated on: Jun 01, 2021 | 5:59 PM

ಹೈದರಾಬಾದ್: ಆನಂದಯ್ಯನ ಔಷಧಿ ಎಂದೇ ದಿಢೀರ್ ಖ್ಯಾತಿಗೆ ಬಂದಿರುವ ಔಷಧಿಯ ಫಾರ್ಮುಲಾ ಬಳಸಿ ಇನ್ನೂ ಹಲವರು ಔಷಧಿ ತಯಾರಿಸುತ್ತಿದ್ದಾರೆ. ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲೂ ಔಷಧ ವಿತರಣೆ ಆರಂಭವಾಗಿದ್ದು, ಭಾರಿ ಪ್ರಮಾಣದ ಜನರು ಮುಗಿಬಿದ್ದು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ವರದಿಯಾಗಿದೆ. ಅಮಲಾಪುರಂನ ಗೀತಾ ಮಂದಿರದ ಬಳಿ ಕೊರೊನಾ ನಿವಾರಣೆಯಾಗುತ್ತದೆ ಎಂದು ಆನಂದಯ್ಯನ ಔಷಧಿ ಎಂಬ ಹೆಸರಲ್ಲಿ ಔಷಧಿ ವಿತರಣೆ ಮಾಡಲಾಗುತ್ತಿದ್ದು, ಕೊವಿಡ್ ನಿಯಮ ಮರೆತು ಭಾರಿ ಜನಸ್ತೋಮ ಸೇರಿದೆ. ಆನಂದಯ್ಯನ ಫಾರ್ಮೂಲಾದೊಂದಿಗೆ ಔಷಧಿ ತಯಾರಿಸಿದ್ದೇವೆ ಎಂದು ಹಲವು ಔಷಧ ವಿತರಣೆ ಮಾಡುತ್ತಿದ್ದಾರೆ.

ಕೊರೊನಾ ವೈರಸ್ ವಿರುದ್ಧ ಆಯುರ್ವೇದ ಔಷಧ ನೀಡುವುದನ್ನು ಮುಂದುವರಿಸುವಂತೆ ನಾಟಿ ವೈದ್ಯ ಆನಂದಯ್ಯ ಅವರಿಗೆ ಆಂಧ್ರಪ್ರದೇಶ ಸರ್ಕಾರ ಈಗಾಗಲೇ ಒಪ್ಪಿಗೆ ಸೂಚಿಸಿದೆ. ಪೆಡಂಭೂತವಾಗಿ ಕಾಡುತ್ತಿರುವ ಕೊರೊನಾಗೆ ನಾಟಿ ಔಷಧ ನೀಡುವ ಮೂಲಕ ನೆಲ್ಲೂರಿನ ಕೃಷ್ಣಪಟ್ಟಣಂ ಆನಂದಯ್ಯ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದರು. ಇದೀಗ ಭಾರೀ ಚರ್ಚೆಗಳು, ಪರೀಕ್ಷೆಗಳ ಬಳಿಕ ಕೆಲ ಷರತ್ತುಗಳೊಂದಿಗೆ ಆನಂದಯ್ಯ ಕೊರೊನಾ ಔಷಧಕ್ಕೆ ಗ್ರೀನ್​ ಸಿಗ್ನಲ್ ನೀಡಿರುವುದಾಗಿ ಆಂಧ್ರಪ್ರದೇಶದ ಸಿಎಂ ಕಚೇರಿ ತಿಳಿಸಿದೆ. AYUSH ಸಚಿವಾಲಯದ (Ayurveda, Yoga & Naturopathy, Unani, Siddha and Homeopathy) ಕೇಂದ್ರೀಯ ಆಯುರ್ವೇದ ಪರಿಶೋಧನೆ ಸಂಸ್ಥೆ ಸಮಿತಿ (Central Council for Research in Ayurvedic Sciences -CCRAS) ಅನುಮೋದನೆ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಆಂಧ್ರ ಸರ್ಕಾರ ಸ್ಪಷ್ಟಪಡಿಸಿದೆ.

ಆದರೆ ಕಣ್ಣಿಗೆ ಡ್ರಾಪ್ ಮಾತ್ರ ಹಾಕುವಂತಿಲ್ಲ ಎಂದು ಷರತ್ತು ವಿಧಿಸಿ ಆಂಧ್ರ ಸರ್ಕಾರ ನಾಟಿ ವೈದ್ಯ ಆನಂದಯ್ಯಗೆ ಕೊರೊನಾ ವಿರುದ್ಧ ಆಯುರ್ವೇದ ಔಷಧ ನೀಡುವುದನ್ನು ಮುಂದುವರಿಸುವಂತೆ ಸೂಚಿಸಿದೆ. ಕಣ್ಣಿಗೆ ಡ್ರಾಪ್ ಹಾಕುವ ವೈದ್ಯ ಪದ್ಧತಿಯ ಬಗ್ಗೆ ಸಂಶೋಧನಾ ವರದಿ ಬರಬೇಕಾಗಿದ್ದು, ಅದಕ್ಕೆ ಇನ್ನೂ 2-3 ವಾರ ಸಮಯ ಹಿಡಿಸುತ್ತದೆ ಎಂದು ಹೇಳಿದೆ.

ಕೊರೊನಾ ವಿರುದ್ಧ ನಾಟಿ ವೈದ್ಯ ಆನಂದಯ್ಯ ನೀಡುವ ಆಯುರ್ವೇದ ಔಷಧ (Anandaiah coronavirus medicine) ಬಳಸಿದರೆ ತೊಂದರೆ ಏನೂ ಇಲ್ಲ ಎಂದು CCRAS ಸಮಿತಿ ಸಲ್ಲಿಸಿದ ತಾಜಾ ಅಧ್ಯಯನ ವರದಿಯ ಮೇರೆಗೆ ಇದೀಗ ವೈದ್ಯ ಆನಂದಯ್ಯ ನೀಡುವ ವಿವಾದಿತ ಪಿಎಲ್​ಎಫ್ ​ಔಷಧಿಗೆ ಅನುಮೋದನೆ ದೊರೆತಂತಾಗಿದೆ. ಆದರೆ ಆನಂದಯ್ಯ ನೀಡುವ ಆಯುರ್ವೇದ ಔಷಧದಿಂದ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತದೆ, ಕಡಿಮೆಯಾಗುತ್ತದೆ ಎಂಬುದಕ್ಕೆ ಇನ್ನೂ ಪುಷ್ಠಿ ದೊರೆತಿಲ್ಲ ಎಂದೂ CCRAS ಸಮಿತಿ ಸ್ಪಷ್ಟಪಡಿಸಿದೆ. ಇದರೊಂದಿಗೆ ಜನ ತಮ್ಮ ಸ್ವ ಇಚ್ಛೆಯಿಂದ ಆನಂದಯ್ಯ ನಾಟಿ ಔಷಧ ಬಳಸಬಹುದು ಎಂದು ಆಂಧ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕೊರೊನಾ ಸೋಂಕಿತರು ಸ್ವತಃ ಆನಂದಯ್ಯ ಅವರನ್ನು ಭೇಟಿಯಾಗಿ ಔಷಧ ಪಡೆಯಬೇಕು ಅಂತೇನೂ ಇಲ್ಲ. ಅದವರ ಬದಲಿಗೆ ಸೋಂಕಿತರ ಬಂಧು ಮಿತ್ರರು ಬಂದು ಔಷಧ ತೆಗೆದುಕೊಂಡು ಹೋಗಬಹುದು. ಇದರಿಂದ ಕೊರೊನಾ ಸೋಂಕು ವಿಸ್ತರಣೆಗೆ ತಡೆಹಾಕಬಹುದು ಎಂದೂ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

ಔಷಧ ನೀಡಲು ಆನಂದಯ್ಯಗೆ ಆಂಧ್ರ ಹೈಕೋರ್ಟ್ ಸಹ ಅನುಮತಿ:

ಈ ಮಧ್ಯೆ, ಕೊರೊನಾ ಔಷಧ ನೀಡಲು ಆನಂದಯ್ಯಗೆ ಆಂಧ್ರ ಹೈಕೋರ್ಟ್ ಸಹ ಅನುಮತಿ ನೀಡಿದೆ. ಆದರೆ ಕೊರೊನಾ ಐ ಡ್ರಾಪ್ಸ್ ಸಂಬಂಧ ವರದಿ ಕೇಳಿರುವ ಹೈಕೋರ್ಟ್, ಗುರುವಾರ ವರದಿ ನೀಡುವಂತೆ ಸೂಚಿಸಿದೆ.

ಇದನ್ನೂ ಓದಿ: 990 ರೂ. ಬೆಲೆಯ ಡಿಆರ್‌ಡಿಒದ ಆಂಟಿ-ಕೊವಿಡ್ ಔಷಧವನ್ನು ಯಾರೆಲ್ಲ ಬಳಸಬಹುದು? ಇಲ್ಲದೆ ವಿವರ

ಕೊವಿಡ್ ಮತ್ತು ಚಂಡಮಾರುತದಿಂದ ತತ್ತರಿಸಿದ ಸುಂದರಬನ; ಬದುಕು ನಿರ್ವಹಣೆಗಾಗಿ ಹರಸಾಹಸ ಪಡುತ್ತಿದ್ದಾರೆ ಜನ

(Drug distribution by many others claiming to have been made with krishnapatnam anandaiah drug formula)

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು