ಲಕ್ನೋ: ಬಿಹಾರದ ಬೇಗುಸರಾಯ್‌ನಲ್ಲಿ ಅತಿಯಾಗಿ ಅಮಲೇರಿಸಿಕೊಂಡ ವರನೊಬ್ಬ ಹಾರ ಹಾಕುವ ಮುನ್ನ ಮಂಟಪದ ಮೇಲೆ ಕುಸಿದುಬಿದ್ದಿದ್ದಾನೆ. ಬಿದ್ದ ವರನನ್ನು ಮದುವೆಯಾಗಲು ವಧು ನಿರಾಕರಿಸಿದ್ದಾಳೆ. ಡಿಸೆಂಬರ್ 8ರಂದು ಈ ಘಟನೆ ನಡೆದಿದೆ.
ಬುಲ್ಬುಲ್ ಮಹತೋ ಅವರ ಮಗಳು ಕಾಜಿರ್ ಸಲ್ಪುರ್ ಗ್ರಾಮದಲ್ಲಿ ಭುಲ್ಲಾ ಮಹತೋ ಅವರ ಮಗನನ್ನು ಮದುವೆಯಾಗಬೇಕಿತ್ತು. ಆದರೆ, ವರ ಬಂದಾಗ ಬಾಲಕಿಯ ಕುಟುಂಬಸ್ಥರು ಆತ ಕಂಠಪೂರ್ತಿ ಕುಡಿದಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ವರ ಹಾರ ಹಾಕುವಾಗ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಇದರಿಂದ ಕೋಪಗೊಂಡ ವಧು ಮದುವೆಯನ್ನು ನಿರಾಕರಿಸಿದ್ದಾಳೆ.
ಇದನ್ನೂ ಓದಿ: ಅದಾನಿ ಕುಟುಂಬದಲ್ಲಿ ಮದುವೆ ಸಂಭ್ರಮ: ಉದಯಪುರದ ಐಷಾರಾಮಿ ಹೋಟೆಲ್ನಲ್ಲಿ ಭರ್ಜರಿ ಸಿದ್ಧತೆ
ಬಳಿಕ, ಹುಡುಗನ ಕುಟುಂಬವು ವಧುವಿನ ಕುಟುಂಬಕ್ಕೆ ಮದುವೆಯ ಉಡುಗೊರೆಯಾಗಿ ಪಡೆದ ಹಣ ಮತ್ತು ವಸ್ತುಗಳನ್ನು ಹಿಂದಿರುಗಿಸಿ ಆ ಮದುವೆಯನ್ನು ಮುರಿಯಲಾಯಿತು. ಅಷ್ಟರಲ್ಲಿ ಪೊಲೀಸರಿಗೆ ಘಟನೆಯ ಮಾಹಿತಿ ಸಿಕ್ಕಿದ್ದು, ವರನನ್ನು ಬಂಧಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ