Video: ಗುರುಗ್ರಾಮದ ಕ್ಲಬ್ ಹೊರಗೆ ಅವಳಿ ಬಾಂಬ್ ಸ್ಪೋಟ

Video: ಗುರುಗ್ರಾಮದ ಕ್ಲಬ್ ಹೊರಗೆ ಅವಳಿ ಬಾಂಬ್ ಸ್ಪೋಟ

ನಯನಾ ರಾಜೀವ್
|

Updated on: Dec 11, 2024 | 7:57 AM

ಹರ್ಯಾಣದ ಗುರುಗ್ರಾಮದ ನೈಟ್​ಕ್ಲಬ್​ ಹೊರಗೆ ಎರಡು ಕಚ್ಚಾಬಾಂಬ್ ಸ್ಫೋಟಗೊಂಡಿವೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಪ್ರಕರಣ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಹ್ಯೂಮನ್ ನೈಟ್ ಕ್ಲಬ್‌ನ ಹೊರಗೆ ಮುಂಜಾನೆ 5.15 ರ ಸುಮಾರಿಗೆ ಸ್ಫೋಟಗಳು ನಡೆದಿದ್ದು, ಪಕ್ಕದ ಕ್ಲಬ್‌ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಇದು ಸೆರೆಯಾಗಿದೆ. ಉತ್ತರ ಪ್ರದೇಶದ ಮೀರತ್‌ನ ನಿವಾಸಿ ಸಚಿನ್ ಎಂದು ಗುರುತಿಸಲಾಗಿದ್ದು, ಆತನ ಬಳಿಯಿದ್ದ ಎರಡು ಸಜೀವ ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ

ಹರ್ಯಾಣದ ಗುರುಗ್ರಾಮದ ನೈಟ್​ಕ್ಲಬ್​ ಹೊರಗೆ ಎರಡು ಕಚ್ಚಾಬಾಂಬ್ ಸ್ಫೋಟಗೊಂಡಿವೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಪ್ರಕರಣ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಹ್ಯೂಮನ್ ನೈಟ್ ಕ್ಲಬ್‌ನ ಹೊರಗೆ ಮುಂಜಾನೆ 5.15 ರ ಸುಮಾರಿಗೆ ಸ್ಫೋಟಗಳು ನಡೆದಿದ್ದು, ಪಕ್ಕದ ಕ್ಲಬ್‌ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಇದು ಸೆರೆಯಾಗಿದೆ.
ಉತ್ತರ ಪ್ರದೇಶದ ಮೀರತ್‌ನ ನಿವಾಸಿ ಸಚಿನ್ ಎಂದು ಗುರುತಿಸಲಾಗಿದ್ದು, ಆತನ ಬಳಿಯಿದ್ದ ಎರಡು ಸಜೀವ ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆ ವ್ಯಕ್ತಿ ಮದ್ಯಪಾನ ಮಾಡಿ ಎರಡು ಬಾಂಬ್​ಗಳನ್ನು ಸ್ಫೋಟಿಸಿದ್ದ, ಇನ್ನೆರಡು ಬಾಂಬ್​ಗಳನ್ನು ಸ್ಫೋಟಿಸುವ ಮೊದಲು ಪೊಲೀಸರು ಆತನನ್ನು ಬಂಧಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ