Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದಾನಿ ಕುಟುಂಬದಲ್ಲಿ ಮದುವೆ ಸಂಭ್ರಮ: ಉದಯಪುರದ ಐಷಾರಾಮಿ ಹೋಟೆಲ್​ನಲ್ಲಿ ಭರ್ಜರಿ ಸಿದ್ಧತೆ

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗನ ಮದುವೆ ಇಡೀ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಸಪ್ತಪದಿ ತುಳಿದಿದ್ದರು. ಈಗ ಮತ್ತೋರ್ವ ಉದ್ಯಮಿ ಪುತ್ರನ ಮದುವೆ ಸುದ್ದಿ ಸದ್ದು ಮಾಡುತ್ತಿದೆ. ಹೌದು..ಉದ್ಯಮಿ ಗೌತಮ್ ಅದಾನಿ ಮಗನ ಕಂಕಣಭಾಗ್ಯ ಕೂಡಿಬಂದಿದ್ದು, ಈಗಾಗಲೇ ಉದಯಪುರದಲ್ಲಿ ಮದುವೆ ಪೂರ್ವ ಕಾರ್ಯಕ್ರಮಗಳ ಸಿದ್ಧತೆಗಳು ಭರದಿಂದ ಸಾಗಿವೆ.

ಅದಾನಿ ಕುಟುಂಬದಲ್ಲಿ ಮದುವೆ ಸಂಭ್ರಮ: ಉದಯಪುರದ ಐಷಾರಾಮಿ ಹೋಟೆಲ್​ನಲ್ಲಿ ಭರ್ಜರಿ ಸಿದ್ಧತೆ
ಜೀತ್‌ ಅದಾನಿ-ದಿವಾ ಜೈಮಿನ್‌ ಶಾ
Follow us
ರಮೇಶ್ ಬಿ. ಜವಳಗೇರಾ
|

Updated on:Dec 09, 2024 | 10:10 PM

ಉದಯ್‌ಪುರ , (ಡಿಸೆಂಬರ್ 9): ರಾಜಸ್ಥಾನದ ಉದಯಪುರವು ಅತ್ಯಂತ ಜನಪ್ರಿಯವಾದ ಪ್ರವಾಸಿ ಸ್ಥಳಗಳನ್ನು ಹೊಂದಿದೆ. ಅದರಲ್ಲೂ ಇಲ್ಲಿನ ಐಷರಾಮಿ ಹೋಟೆಲ್​ಗಳು ವಿವಿಧ ಕಾರ್ಯಕ್ರಮಗಳಿಗೆ ಪ್ರಸಿದ್ಧಿಯಾಗಿವೆ. ಸೆಲೆಬ್ರಿಟಿಗಳು, ದೊಡ್ಡ-ದೊಡ್ಡ ಉದ್ಯಮಿಗಳ ಕುಟುಂಬದ ಮದುವೆ ಸೇರಿದಂತೆ ಇತರೆ ಕಾರ್ಯಕ್ರಮಗಳು ಈ ಉದಯಪುರದಲ್ಲೇ ನಡೆದಿವೆ. ಈಗ ಉದಯಪುರ ಮತ್ತೊಂದು ಅದ್ಧೂರಿ ಸಮಾರಂಭಕ್ಕೆ ಸಾಕ್ಷಿಯಾಗಲಿದೆ. ಹೌದು…ಅದಾನಿ ಗ್ರೂಪ್‌ನ ಚೇರ್ಮನ್‌ ಉದ್ಯಮಿ ಗೌತಮ್‌ ಅದಾನಿ ಅವರ ಪುತ್ರ ಜೀತ್‌ ಅದಾನಿ ವಿವಾಹ ಪೂರ್ವ ಕಾರ್ಯಕಮಗಳು ನಡೆಯಲಿವೆ. ಈಗಾಗಲೇ ಸಕಲ ಸಿದ್ಧತೆಗಳು ನಡೆದಿದ್ದು, ಇದೇ ಡಿಸೆಂಬರ್ 10 ಮತ್ತು 11 ರಂದು ಜೀತ್ ಅದಾನಿ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯಲಿವೆ.

ವಜ್ರ ಹಾಗೂ ಚಿನ್ನಾಭರಣ ಉದ್ಯಮಿ ಜೈಮಿನ್‌ ಶಾ ಅವರ ಪುತ್ರಿ ದಿವಾ ಜೈಮಿನ್‌ ಶಾ ಜೊತೆ ಜೀತ್‌ ಅದಾನಿಯವರ ನಿಶ್ಚಿತಾರ್ಥ ಕಳೆದ ವರ್ಷ ಮಾರ್ಚ್ 12ರಂದುಅಹಮದಾಬಾದ್​ನ ರೆಸಾರ್ಟ್​ವೊಂದರಲ್ಲಿ ಸರಳವಾಗಿ ನಡೆದಿತ್ತು. ಆದ್ರೆ, ಮದುವೆಯನ್ನು ಅದ್ಧೂರಿಯಾಗಿ ಮಾಡಲು ಗೌತಮ್ ಅದಾನಿ ತೀರ್ಮಾನಿಸಿದ್ದು, ಅದರಂತೆ ಉದಯಪುರದಲ್ಲಿ ಮದುವೆ ಪೂರ್ವ ಸಿದ್ಧತೆಗಳು ನಡೆದಿವೆ.

ಐಷಾರಾಮಿ ಹೋಟೆಲ್​ಗಳು ಬುಕ್

ಜೀತ್‌ ಅದಾನಿ ಹಾಗೂ ದಿವಾ ಜೈಮಿನ್‌ ಶಾ ಮದುವೆಗಾಗಿ ಮೂರು ಐಷಾರಾಮಿ ಪಂಚತಾರಾ ಹೋಟೆಲ್‌ಗಳನ್ನು ಬುಕ್ ಮಾಡಲಾಗಿದೆ. ಅನೇಕ ಉದ್ಯಮಿಗಳು, ರಾಜಕೀಯ ಮುಖಂಡರು, ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ಇದರಿಂದ ತಾಜ್ ಲೇಕ್ ಪ್ಯಾಲೇಸ್, ಲೀಲಾ ಪ್ಯಾಲೇಸ್ ಮತ್ತು ಉದಯ್ ವಿಲಾಸ್ ಈ ಮೂರು ಹೋಟೆಲ್‌ಗಳು ಸಂಪೂರ್ಣವಾಗಿ ಬುಕ್ ಆಗಿವೆ.

ಇನ್ನು ವಿವಾಹ ಸಮಾರಂಭವು ಉದಯ್ ವಿಲಾಸ್ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದ್ದು, ಈ ಉದಯ್ ವಿಲಾಸ್ ಹೋಟೆಲ್ ಒಟ್ಟು 100 ಕೊಠಡಿಗಳು ಹೊಂದಿದೆ. ಇನ್ನು ಈ ಹೋಟೆಲ್​ಗೆ​​ ಒಂದು ದಿನಕ್ಕೆ ಬರೋಬ್ಬರಿ 10 ಲಕ್ಷ ರೂ.

ಮದುವೆಗೆ ಆಗಮಿಸುವ ಅತಿಥಿಗಳು ಉಳಿದುಕೊಳ್ಳಲು ತಾಜ್ ಲೇಕ್ ಪ್ಯಾಲೇಸ್ ಮತ್ತು ಲೀಲಾ ಪ್ಯಾಲೇಸ್ ಹೋಟೆಲ್​ನಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಈ ಹೋಟೆಲ್​ (ಒಂದು ರೂಮ್​ಗೆ) ದರ ದಿನಕ್ಕೆ 75 ಸಾವಿರದಿಂದ 3.5 ಲಕ್ಷ ರೂ.

Published On - 10:07 pm, Mon, 9 December 24