AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜಯ್ ಮಲ್ಹೋತ್ರಾ ಹೊಸ ಆರ್​ಬಿಐ ಗವರ್ನರ್ ಆಗಿ ನೇಮಕ; ಶಕ್ತಿಕಾಂತ ದಾಸ್ ಅವಧಿ ಡಿ. 10ಕ್ಕೆ ಅಂತ್ಯ

Sanjay Malhotra appointed as new RBI governor: ಭಾರತೀಯ ರಿಸರ್ವ್ ಬ್ಯಾಂಕ್​ಗೆ ನೂತನ ಗವರ್ನರ್ ನೇಮಕವಾಗಿದೆ. ಕೇಂದ್ರ ಕಂದಾಯ ಸಚಿವಾಲಯದ ಕಾರ್ಯದರ್ಶಿಯಾಗಿರುವ ಸಂಜಯ್ ಮಲ್ಹೋತ್ರಾ ಅವರನ್ನು ಆರ್​ಬಿಐನ ಗವರ್ನರ್ ಆಗಿ ಸರ್ಕಾರ ನೇಮಕ ಮಾಡಿದೆ.

ಸಂಜಯ್ ಮಲ್ಹೋತ್ರಾ ಹೊಸ ಆರ್​ಬಿಐ ಗವರ್ನರ್ ಆಗಿ ನೇಮಕ; ಶಕ್ತಿಕಾಂತ ದಾಸ್ ಅವಧಿ ಡಿ. 10ಕ್ಕೆ ಅಂತ್ಯ
ಸಂಜಯ್ ಮಲ್ಹೋತ್ರಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 09, 2024 | 5:59 PM

Share

ನವದೆಹಲಿ, ಡಿಸೆಂಬರ್ 9: ಭಾರತೀಯ ರಿಸರ್ವ್ ಬ್ಯಾಂಕ್​ಗೆ ನೂತನ ಗವರ್ನರ್ ನೇಮಕವಾಗಿದೆ. ಕೇಂದ್ರ ಕಂದಾಯ ಸಚಿವಾಲಯದ ಕಾರ್ಯದರ್ಶಿಯಾಗಿರುವ ಸಂಜಯ್ ಮಲ್ಹೋತ್ರಾ ಅವರನ್ನು ಆರ್​ಬಿಐನ ಗವರ್ನರ್ ಆಗಿ ಸರ್ಕಾರ ನೇಮಕ ಮಾಡಿದೆ. ಪ್ರಸಕ್ತ ಆರ್​ಬಿಐ ಗವರ್ನರ್ ಆಗಿರುವ ಶಕ್ತಿಕಾಂತ ದಾಸ್ ಅವರ ಸೇವಾವಧಿ ಡಿಸೆಂಬರ್ 10, ನಾಳೆ ಮಂಗಳವಾರ ಅಂತ್ಯವಾಗುತ್ತಿದೆ. ಡಿಸೆಂಬರ್ 11ಕ್ಕೆ ಸಂಜಯ್ ಮಲ್ಹೋತ್ರಾ ಆರ್​ಬಿಐ ಗವರ್ನರ್ ಆಗಿ ಪದಗ್ರಹಣ ಮಾಡಲಿದ್ದಾರೆ. ಮೂರು ವರ್ಷ ಕಾಲ ಅವರ ಸೇವಾವಧಿ ಇದೆ.

ಸಂಜಯ್ ಮಲ್ಹೋತ್ರಾ ಅವರು ರಾಜಸ್ಥಾನ ಕೇಡರ್​ನ 1990ರ ಬ್ಯಾಚ್​ನ ಐಎಎಸ್ ಅಧಿಕಾರಿಯಾಗಿದ್ದಾರೆ. ಐಐಟಿ ಕಾನ್ಪುರ್​ನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮಾಡಿದ್ದಾರೆ. ಅಮೆರಿಕದ ಪ್ರಿನ್ಸ್​ಟನ್ ಯೂನಿವರ್ಸಿಟಿಯಲ್ಲಿ ಪಬ್ಲಿಕ್ ಪಾಲಿಸಿಯಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿದ್ದಾರೆ. ಹಣಕಾಸು ಸಚಿವಾಲಯದಲ್ಲಿ ರೆವೆನ್ಯೂ ಕಾರ್ಯದರ್ಶಿಯಾಗಿ ಸದ್ಯ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಸರ್ಕಾರಿ ಸ್ವಾಮ್ಯದ ಆರ್​ಇಸಿಯ ಛೇರ್ಮನ್ ಮತ್ತು ಎಂಡಿಯಾಗಿ ಕೆಲಸ ಮಾಡಿದ್ದರು. ಜಿಎಸ್​ಟಿ ಮಂಡಳಿಯಲ್ಲೂ ಅವರಿದ್ದರು. ವಿದ್ಯುತ್, ಹಣಕಾಸು, ತೆರಿಗೆ, ಐಟಿ, ಗಣಿ ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ಸಂಜಯ್ ಮಲ್ಹೋತ್ರಾ ಕೆಲಸ ಮಾಡಿದ ಅನುಭವಿ ಎನಿಸಿದ್ದಾರೆ.

ಇದನ್ನೂ ಓದಿ: ಭಾರತದ ಸಮಗ್ರ ಬೆಳವಣಿಗೆ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದಿಂದ ಮೆಚ್ಚುಗೆ: ಐಎಂಎಫ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೆವಿ ಸುಬ್ರಮಣಿಯನ್

ವಿದ್ಯುತ್ ಸಚಿವಾಲಯದಲ್ಲಿ ಅಪರ ಕಾರ್ಯದರ್ಶಿಯಾಗಿದ್ದ ಅವರು 3 ಲಕ್ಷ ಕೋಟಿ ರೂ ಮೊತ್ತದ ವಿದ್ಯುತ್ ವಿತರಣೆಯಲ್ಲಿ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಪ್ರಮುಖ ಪಾತ್ರ ವಹಿಸಿದ್ದಾರೆ. ತೆರಿಗೆ, ಪಬ್ಲಿಕ್ ಫೈನಾನ್ಸ್, ಇಂಧನ ವಲಯದ ಸುಧಾರಣೆ, ಆರ್ಥಿಕ ಆಡಳಿತದ ವಿಚಾರಗಳಲ್ಲಿ ಅವರಿಗಿರುವ ಪರಿಣಿತಿಯು ಸರ್ಕಾರಕ್ಕೆ ಲಾಭವಾಗುವ ನಿರೀಕ್ಷೆ ಇದೆ. ಆರ್​ಬಿಐ ಗವರ್ನರ್ ಆಗಿ ಅವರು ಮೂರು ವರ್ಷ ಸೇವೆ ಸಲ್ಲಿಸಲಿದ್ದಾರೆ.

ಸುದೀರ್ಘ ಅವಧಿ ಕೆಲಸ ಮಾಡಿದ್ದ ಶಕ್ತಿಕಾಂತದಾಸ್

ಪ್ರಸಕ್ತ ಆರ್​​ಬಿಐ ಗವರ್ನರ್ ಶಕ್ತಿಕಾಂತ ದಾಸ್ 2018ರ ಡಿಸೆಂಬರ್​ನಲ್ಲಿ ನೇಮಕವಾದವರು. ಎರಡು ಬಾರಿ ಅವರ ಸೇವಾವಧಿ ವಿಸ್ತರಣೆ ಆಗಿದೆ. ಅತಿಹೆಚ್ಚು ಕಾಲ ಆರ್​ಬಿಐ ಗವರ್ನರ್ ಆದವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ ದಾಸ್. ಬೆನೆಗಲ್ ರಾಮರಾವು ಎಂಬುವವರು 1949ರಿಂದ 1957ರವರೆಗೆ ಏಳೂವರೆ ವರ್ಷ ಕಾಲ ಆರ್​ಬಿಐ ಗವರ್ನರ್ ಆಗಿದ್ದರು. ಶಕ್ತಿಕಾಂತ ದಾಸ್ ಆರು ವರ್ಷ ಆರ್​ಬಿಐ ಗವರ್ನರ್ ಆಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:41 pm, Mon, 9 December 24

ಲಕ್ಕುಂಡಿಯಲ್ಲಿ ನಿಧಿ ರಹಸ್ಯ: ಬಸವಣ್ಣ ದೇವಸ್ಥಾನದಲ್ಲಿ ಸರ್ಪದ ಪೊರೆ ಪತ್ತೆ
ಲಕ್ಕುಂಡಿಯಲ್ಲಿ ನಿಧಿ ರಹಸ್ಯ: ಬಸವಣ್ಣ ದೇವಸ್ಥಾನದಲ್ಲಿ ಸರ್ಪದ ಪೊರೆ ಪತ್ತೆ
ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್​​ನಲ್ಲಿ ಗೊಂದಲ: ಆಗಿದ್ದೇನು?
ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್​​ನಲ್ಲಿ ಗೊಂದಲ: ಆಗಿದ್ದೇನು?
ಕಾಂಗ್ರೆಸ್ ಭವನಕ್ಕೆ ಕೋಟಿ ಕೋಟಿ ಮೌಲ್ಯದ ಸಿಎ ಸೈಟ್ ಮೂರ್ಕಾಸಿಗೆ
ಕಾಂಗ್ರೆಸ್ ಭವನಕ್ಕೆ ಕೋಟಿ ಕೋಟಿ ಮೌಲ್ಯದ ಸಿಎ ಸೈಟ್ ಮೂರ್ಕಾಸಿಗೆ
ಮಲ್ಲನ ಮ್ಯಾಜಿಕ್​ಗೆ ಕರಗಿದ ಸಾಲ್ಟ್
ಮಲ್ಲನ ಮ್ಯಾಜಿಕ್​ಗೆ ಕರಗಿದ ಸಾಲ್ಟ್
ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ಪತಿಗೆ ಮೊದಲ ಪತ್ನಿ ಶಾಕ್: ವಿಡಿಯೋ ನೋಡಿ
ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ಪತಿಗೆ ಮೊದಲ ಪತ್ನಿ ಶಾಕ್: ವಿಡಿಯೋ ನೋಡಿ
ಹಾಸನ: ಮಹಿಳೆ ರೂಮ್​ಗೆ ನುಗ್ಗಿ ಪತಿ ಸಂಬಂಧಿಕರ ಗಲಾಟೆ!
ಹಾಸನ: ಮಹಿಳೆ ರೂಮ್​ಗೆ ನುಗ್ಗಿ ಪತಿ ಸಂಬಂಧಿಕರ ಗಲಾಟೆ!
ಜಿಟಿಡಿ ವಿರುದ್ಧ ಹೆಚ್​​ಡಿಕೆ ಗರಂ: ಅವರು ನಮ್ಮೊಂದಿಗಿಲ್ಲ ಎಂದ ಕೇಂದ್ರ ಸಚಿವ
ಜಿಟಿಡಿ ವಿರುದ್ಧ ಹೆಚ್​​ಡಿಕೆ ಗರಂ: ಅವರು ನಮ್ಮೊಂದಿಗಿಲ್ಲ ಎಂದ ಕೇಂದ್ರ ಸಚಿವ
ಮನೆ ಮುಂದೆ ಸೈಕಲ್ ಓಡಿಸುತ್ತಿದ್ದ ಬಾಲಕನ ಮೇಲೆ ಹರೀತು ಕಾರು!
ಮನೆ ಮುಂದೆ ಸೈಕಲ್ ಓಡಿಸುತ್ತಿದ್ದ ಬಾಲಕನ ಮೇಲೆ ಹರೀತು ಕಾರು!
ವಿಶ್ವಕಪ್​ ಇತಿಹಾಸದಲ್ಲೇ ಅತ್ಯಂತ ಹೀನಾಯ ದಾಖಲೆ ಬರೆದ ಸೌರಭ್
ವಿಶ್ವಕಪ್​ ಇತಿಹಾಸದಲ್ಲೇ ಅತ್ಯಂತ ಹೀನಾಯ ದಾಖಲೆ ಬರೆದ ಸೌರಭ್
ನೆರವಿಗಾಗಿ ಕರೆ ಮಾಡಿದ್ದ ಮಹಿಳೆ ಮೇಲೆ ಪೊಲೀಸಪ್ಪ ಗರಂ: ವಿಡಿಯೋ ವೈರಲ್​​
ನೆರವಿಗಾಗಿ ಕರೆ ಮಾಡಿದ್ದ ಮಹಿಳೆ ಮೇಲೆ ಪೊಲೀಸಪ್ಪ ಗರಂ: ವಿಡಿಯೋ ವೈರಲ್​​