AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಮಹಿಳಾ ಪ್ರಯಾಣಿಕರಿಗೆ ಪ್ರಯಾಣ ಉಚಿತ; ಮಹಿಳೆಯರನ್ನು ಕಂಡರೆ ಡಿಟಿಎಸ್ ಬಸ್ ನಿಲ್ಲಿಸುತ್ತಿಲ್ಲವಂತೆ

ಯಾವುದೇ ರೀತಿಯ ಅಕ್ರಮಗಳನ್ನು ಎಲ್ಲಿಯಾದರೂ ಕಂಡರೆ, ಅವರು ತಕ್ಷಣ ಅದರ ವಿಡಿಯೊವನ್ನು ಮಾಡಿ ಮತ್ತು ಅದನ್ನು ಹಂಚಿಕೊಳ್ಳಬೇಕು ಎಂದು ನಾನು ಪ್ರಯಾಣಿಕರಿಗೆ ಮನವಿ ಮಾಡುತ್ತೇನೆ. ತಪ್ಪಿತತ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಟ್ವೀಟ್ ಮಾಡಿದ್ದಾರೆ

ದೆಹಲಿಯಲ್ಲಿ ಮಹಿಳಾ ಪ್ರಯಾಣಿಕರಿಗೆ ಪ್ರಯಾಣ ಉಚಿತ; ಮಹಿಳೆಯರನ್ನು ಕಂಡರೆ ಡಿಟಿಎಸ್ ಬಸ್ ನಿಲ್ಲಿಸುತ್ತಿಲ್ಲವಂತೆ
ದೆಹಲಿ ಬಸ್
ರಶ್ಮಿ ಕಲ್ಲಕಟ್ಟ
|

Updated on: May 18, 2023 | 5:37 PM

Share

ದೆಹಲಿಯಲ್ಲಿ (Delhi) ಮಹಿಳೆಯರಿಗೆ ಬಸ್​​ನಲ್ಲಿ ಪ್ರಯಾಣ ಉಚಿತ ಹೀಗಿರುವಾಗ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಡಿಟಿಎಸ್ (DTS) ಚಾಲಕರು ಬಸ್ ನಿಲ್ಲಿಸುತ್ತಿಲ್ಲವಂತೆ. ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ (Arvind Kejriwal),   ಮಹಿಳೆಯರ ಪ್ರಯಾಣ ಉಚಿತ ಎಂಬ ಕಾರಣಕ್ಕೆ ಕೆಲವು ಚಾಲಕರು ಮಹಿಳಾ ಪ್ರಯಾಣಿಕರನ್ನು ಕಂಡಾಗ ಬಸ್‌ಗಳನ್ನು ನಿಲ್ಲಿಸುವುದಿಲ್ಲ ಎಂಬ ದೂರುಗಳು ಬರುತ್ತಿವೆ. ಇದನ್ನು ಸರ್ವಥಾ ಸಹಿಸುವುದಿಲ್ಲ. ಈ ಬಸ್ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

ಕೇಜ್ರಿವಾಲ್ ಅವರ ಟ್ವೀಟ್ ಅನ್ನು ಹಂಚಿಕೊಂಡ ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್, ಚಾಲಕನನ್ನು ಬದಲಾಯಿಸಲಾಗಿದೆ ಮತ್ತು ಮುಂದಿನ ಆದೇಶದವರೆಗೆ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಗೌರವಾನ್ವಿತ ಮುಖ್ಯಮಂತ್ರಿಗಳ ಸೂಚನೆಯಂತೆ, ಚಾಲಕನನ್ನು ಬದಲಾಯಿಸಲಾಗಿದೆ ಮತ್ತು ಮುಂದಿನ ಆದೇಶದವರೆಗೆ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಚಾಲಕ ಮತ್ತು ಇತರ ಸಿಬ್ಬಂದಿ ವಿರುದ್ಧ ತನಿಖೆ ಆರಂಭಿಸಲಾಗಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ.

ಇದನ್ನೂ ಓದಿ: ಐಎಎಸ್ ಆಗಿ ರಾಜಕಾರಣಕ್ಕೆ, ಸೈಕಲ್​​ನಲ್ಲೇ ಲೋಕಸಭೆಗೆ ಬರುತ್ತಿದ್ದ ಸಂಸದ; ನೂತನ ಕಾನೂನು ಸಚಿವ ಮೇಘವಾಲ್ ಕಿರು ಪರಿಚಯ

ಯಾವುದೇ ರೀತಿಯ ಅಕ್ರಮಗಳನ್ನು ಎಲ್ಲಿಯಾದರೂ ಕಂಡರೆ, ಅವರು ತಕ್ಷಣ ಅದರ ವಿಡಿಯೊವನ್ನು ಮಾಡಿ ಮತ್ತು ಅದನ್ನು ಹಂಚಿಕೊಳ್ಳಬೇಕು ಎಂದು ನಾನು ಪ್ರಯಾಣಿಕರಿಗೆ ಮನವಿ ಮಾಡುತ್ತೇನೆ. ತಪ್ಪಿತತ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ