ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಭಾರತ ಸೇರಿ ಹಲವು ರಾಷ್ಟ್ರಗಳ ಪ್ರಯಾಣಿಕರಿಗೆ ನಿರ್ಬಂಧ ಹೇರಿದ್ದ ದುಬೈ ಸರ್ಕಾರ ಅದನ್ನೀಗ ಸಡಿಲಿಸಿದೆ. ಅಂದರೆ ದುಬೈನ ನಿವಾಸಿಗಳಾಗಿದ್ದು ಭಾರತದಕ್ಕೆ ಬಂದು, ಲಾಕ್ಡೌನ್ ಕಾರಣದಿಂದ ಅಲ್ಲಿಗೆ ಹೋಗಲು ಸಾಧ್ಯವಾಗದೆ ಇದ್ದವರು ಈಗ ದುಬೈಗೆ ತೆರಳಬಹುದು. ಆದರೆ ಯುಎಇ ಅನುಮೋದಿತ ಕೊವಿಡ್ ಲಸಿಕೆ ಎರಡೂ ಡೋಸ್ ಪಡೆದವರು ದುಬೈ ಪ್ರವೇಶಿಸಬಹುದಾಗಿದೆ ಎಂದು ಅಲ್ಲಿನ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದೀಗ ಭಾರತ, ದಕ್ಷಿಣಾಫ್ರಿಕಾ, ನೈಜೀರಿಯಾ ದೇಶಗಳ ಪ್ರಯಾಣಿಕರು ಜೂ.23ರಿಂದ ದುಬೈನ್ನು ಪ್ರವೇಶಿಸಬಹುದಾಗಿದೆ. ಆದರೆ ಕೊವಿಡ್ 19 ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ. ಅದರೊಂದಿಗೆ ಕೆಲವು ಪರಿಷ್ಕೃತ ಶಿಷ್ಟಾಚಾರಗಳನ್ನು ದುಬೈ ಆಡಳಿತ ಪ್ರಕಟಿಸಿದ್ದು, ಅದನ್ನು ಪಾಲಿಸಲೇಬೇಕು ಎಂದು ಹೇಳಲಾಗಿದೆ.
ಭಾರತದಿಂದ ದುಬೈಗೆ ಪ್ರಯಾಣ ಬೆಳೆಸುವವರು ಮಾನ್ಯತೆ ಇರುವ ರೆಸಿಡೆನ್ಸ್ ವೀಸಾ ಹೊಂದಿರಬೇಕು. ಯುಎಇಯಿಂದಲೂ ಅನುಮೋದನೆ ಹೊಂದಿದ ಕೊವಿಡ್ 19 ಲಸಿಕೆಯ ಎರಡೂ ಡೋಸ್ಗಳನ್ನು ಪಡೆದಿರಬೇಕು. ಅಂದರೆ ಕೊವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಪಡೆದಿರಬೇಕು. ಇನ್ನುಳಿದಂತೆ ಯುಎಇ ಸರ್ಕಾರ ಚೀನಾದ ಸಿನೋಫಾರ್ಮ್ ಲಸಿಕೆ, ಫೈಝರ್, ಸ್ಪುಟ್ನಿಕ್ ವಿ ಲಸಿಕೆಗಳಿಗೆ ಅನುಮೋದನೆ ನೀಡಿದೆ. ಹಾಗೇ, ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾದ ಪ್ರಯಾಣಿಕರೂ ಕೂಡ (ಇಲ್ಲಿನ ನಿವಾಸಿಗಳು ಅಲ್ಲದಿದ್ದರೂ) ದುಬೈಗೆ ಪ್ರವೇಶ ಮಾಡಬಹುದಾಗಿದ್ದು, ಲಸಿಕೆ ಹಾಕಿಸಿಕೊಂಡಿರಬೇಕು ಮತ್ತು ಪಿಸಿಆರ್ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು.
ಭಾರತದಿಂದ ದುಬೈಗೆ ಹೊರಡುವ ಪ್ರಯಾಣಿಕರೂ ಸಹ ನಾಲ್ಕು ಗಂಟೆ ಮೊದಲು ರ್ಯಾಪಿಡ್ ಪಿಸಿಆರ್ ಟೆಸ್ಟ್ಗೆ ಒಳಗಾಗಬೇಕು. ಹಾಗೇ ದುಬೈ ತಲುಪಿದ ನಂತರ ಇನ್ನೊಮ್ಮೆ ಪಿಸಿಆರ್ ಟೆಸ್ಟ್ ಮಾಡಿಸಬೇಕು. ಟೆಸ್ಟ್ಗೆ ಒಳಗಾಗುವವರೆಗೂ ಅವರು ಸಾಂಸ್ಥಿಕ ಕ್ವಾರಂಟೈನ್ನಲ್ಲೇ ಇರಬೇಕಾಗುತ್ತದೆ. ಟೆಸ್ಟ್ಗೆ ಒಳಗಾಗಿ 24ಗಂಟೆಯಲ್ಲಿ ರಿಪೋರ್ಟ್ ಬರುವುದರಿಂದ ಈ ನಿಯಮ ಪಾಲನೆ ಕಡ್ಡಾಯವಾಗಿದೆ.
ಇದನ್ನೂ ಓದಿ: ನಾಳೆಯಿಂದ ಬೆಂಗಳೂರಿನಲ್ಲಿ ಎಲ್ಲವೂ ಬಹುತೇಕ ನಾರ್ಮಲ್.. ಹೋಟೆಲ್ನಲ್ಲಿ ಟೇಬಲ್ ಸರ್ವಿಸ್ ಶುರು