ದೆಹಲಿ: ಭಾನುವಾರ ನಡೆದ ಕಾಂಗ್ರೆಸ್‌ನ (Congress) ಉನ್ನತ ಮಟ್ಟದ ಸಭೆಗೆ ಮುಂಚಿತವಾಗಿ ರಾಜಸ್ಥಾನ ಮುಖ್ಯಮಂತ್ರಿ ಮತ್ತು ಪಕ್ಷದ ಉನ್ನತ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ (Ashok Gehlot) ಅವರು “ಆಂತರಿಕ ಸಂಘರ್ಷದಿಂದಾಗಿ” ಪಕ್ಷವು ಪಂಜಾಬ್ ಅನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ. ಅದೇ ವೇಳೆ ಪಕ್ಷದ ಒಗ್ಗಟ್ಟಿಗೆ ಗಾಂಧಿ ಕುಟುಂಬ ಮುಖ್ಯ ಎಂದು ಒತ್ತಿ ಹೇಳಿದರು. ರಾಹುಲ್ ಗಾಂಧಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಬೇಕು ಎಂದ ಅವರು 2017 ರಲ್ಲಿ ಕಾಂಗ್ರೆಸ್ ಒಟ್ಟಾಗಿದ್ದು ನಾವು ಪಂಜಾಬ್ ಚುನಾವಣೆ ಗೆದ್ದಿದ್ದೇವೆ. ಚರಣ್ಜಿತ್ ಸಿಂಗ್ ಚನ್ನಿ ಮುಖ್ಯಮಂತ್ರಿಯಾದ ನಂತರ, ಪರಿಸ್ಥಿತಿಯೂ ಅನುಕೂಲಕರವಾಗಿತ್ತು. ಆದರೆ ಆಂತರಿಕ ಸಂಘರ್ಷದಿಂದ ನಾವು ಪಂಜಾಬ್ ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದು ನಮ್ಮ ತಪ್ಪು ಎಂದು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಬೇಕು. ಸುಮಾರು ಮೂರು ದಶಕಗಳಿಂದ ಗಾಂಧಿ ಕುಟುಂಬದಿಂದ ಯಾರೂ ಪ್ರಧಾನಿಯಾಗಲಿ, ಮಂತ್ರಿಯಾಗಲಿ ಆಗಿಲ್ಲ. ಕಾಂಗ್ರೆಸ್‌ನ ಏಕತೆಗೆ ಗಾಂಧಿ ಕುಟುಂಬ ಮುಖ್ಯವಾಗಿದೆ ಎಂದು ಅರ್ಥಮಾಡಿಕೊಳ್ಳಬೇಕಿದೆ ಎಂದು 70 ವರ್ಷದ ನಾಯಕ ಗೆಹ್ಲೋಟ್ ಹೇಳಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಧ್ರುವೀಕರಣದ ರಾಜಕೀಯ ಸುಲಭವಾಗಿದೆ. ಬಿಜೆಪಿಯು ಕಾಂಗ್ರೆಸ್ ಅನ್ನು ಮುಸ್ಲಿಮರ ಪಕ್ಷ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದೆ. ದೇಶದ ಸಮಗ್ರತೆ ಮತ್ತು ಏಕತೆಯನ್ನು ಕಾಪಾಡುವುದು ನಮ್ಮ ಮಾರ್ಗವಾಗಿದೆ. ಚುನಾವಣೆಯ ಸಮಯದಲ್ಲಿ ಬಿಜೆಪಿಗೆ ಧರ್ಮವು ಮುಖ್ಯ ವಿಷಯವಾಗುತ್ತದೆ, ಹಣದುಬ್ಬರ ಮತ್ತು ಉದ್ಯೋಗಗಳ ಸಮಸ್ಯೆಗಳು ನಂತರದ್ದಾಗಿರುತ್ತವೆ ಎಂದಿದ್ದಾರೆ ಗೆಹ್ಲೋಟ್.
ಐದು ರಾಜ್ಯಗಳಲ್ಲಿನ ಭಾರೀ ಸೋಲು ಗಾಂಧಿ ಕುಟುಂಬದ ವಿರುದ್ಧದ ಟೀಕೆಗಳನ್ನು ಹೆಚ್ಚಿಸಿದ್ದು, ಸಂಪೂರ್ಣ ಕೂಲಂಕಷ ಮತ್ತು ನಾಯಕತ್ವ ಬದಲಾವಣೆಯ ಬೇಡಿಕೆಗಳನ್ನು ಪುನರುಜ್ಜೀವನಗೊಳಿಸಿದೆ.
ಇಂದಿನ ಸಿಡಬ್ಲ್ಯುಸಿ ಸಭೆಯಲ್ಲಿ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿದ್ದ ಹೊಸ ಪಕ್ಷದ ಮುಖ್ಯಸ್ಥರನ್ನು ಆಯ್ಕೆ ಮಾಡಲು ಕಾಂಗ್ರೆಸ್ ಸಾಂಸ್ಥಿಕ ಚುನಾವಣೆಗಳು ಈಗ ಎರಡು ಮೂರು ತಿಂಗಳುಗಳ ಕಾಲ ಮುಂದುವರಿಯಬಹುದು ಎಂದು ಮೂಲಗಳು ಹೇಳುತ್ತವೆ.
ಈ ಸಭೆಯಲ್ಲಿ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ರಾಜೀನಾಮೆ ನೀಡುತ್ತಾರೆ ಎಂಬುದನ್ನು ಕಾಂಗ್ರೆಸ್ ಸ್ಪಷ್ಟವಾಗಿ ನಿರಾಕರಿಸಿದೆ. ಸಭೆಯ ಮೊದಲು, ಜಾರ್ಖಂಡ್ ಕಾಂಗ್ರೆಸ್ ಸೋನಿಯಾ ಮತ್ತು ರಾಹುಲ್ ಗಾಂಧಿಯನ್ನು ಬೆಂಬಲಿಸುವ ನಿರ್ಣಯವನ್ನು ಅಂಗೀಕರಿಸಿತು.
ರಾಹುಲ್ ಅಧ್ಯಕ್ಷರಾಗಲಿ: ಡಿಕೆ ಶಿವಕುಮಾರ್
As I have said it earlier as well, Sh. Rahul Gandhi should take up the Congress presidency in a full time role immediately.
This is the wish of millions of Congress workers like me.@RahulGandhi @INCIndia
— DK Shivakumar (@DKShivakumar) March 13, 2022
ನಾನು ಮೊದಲೇ ಹೇಳಿದಂತೆ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ತಕ್ಷಣವೇ ಪೂರ್ಣಾವಧಿಯ ಪಾತ್ರದಲ್ಲಿ ತೆಗೆದುಕೊಳ್ಳಬೇಕು. ಇದು ನನ್ನಂತಹ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರ ಆಶಯ ಎಂದು ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮುಕುಲ್ ವಾಸ್ನಿಕ್ರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಜಿ 23 ನಾಯಕರ ಒತ್ತಾಯ; ಆದರೆ ಆಗಿದ್ದೇನು?
Published On - 4:04 pm, Sun, 13 March 22