ಗರ್ಭಾವಸ್ಥೆಯಲ್ಲೂ ರಸ್ತೆಗಿಳಿದು ಕಾರ್ಯ ನಿರ್ವಹಿಸಿದ ಡಿಎಸ್​ಪಿ ಶಿಲ್ಪಾ ಸಾಹುಗೆ ಎಲ್ಲೆಡೆ ಮೆಚ್ಚುಗೆ

|

Updated on: Apr 24, 2021 | 12:09 PM

ಐದು ತಿಂಗಳ ಗರ್ಭಿಣಿ ಶಿಲ್ಪಾ ಸಾಹು ಛತ್ತೀಸ್​ಗಢದ ದಂತೇವಾಡ ಜಿಲ್ಲೆಯ ಡಿಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಎರಡನೇ ಅಲೆಯಲ್ಲಿ ಎಷ್ಟು ಜವಾಬ್ದಾರಿಯಾಗಿ ಇದ್ದರೂ ಸಾಲದು. ಆದರೆ ಜನ ಮಾತ್ರ ನಿರ್ಲಕ್ಷ್ಯತನದಿಂದ ತೋರುತ್ತಿದ್ದಾರೆ. ಈ ವೇಳೆ ತನ್ನ ಕರ್ತವ್ಯಕ್ಕೆ ಹಾಜರಾದ ಗರ್ಭಿಣಿ ಡಿಎಸ್​ಪಿ ಶಿಲ್ಪಾ ಸಾಹು ಕೊರೊನಾ ಮಾರ್ಗಸೂಚಿಯನ್ನು ಪಾಲಿಸಬೇಕೆಂದು ರಸ್ತೆಗೆ ಇಳಿದು ಜನರಿಗೆ ಸಂದೇಶ ನೀಡಿದರು.

ಗರ್ಭಾವಸ್ಥೆಯಲ್ಲೂ ರಸ್ತೆಗಿಳಿದು ಕಾರ್ಯ ನಿರ್ವಹಿಸಿದ ಡಿಎಸ್​ಪಿ ಶಿಲ್ಪಾ ಸಾಹುಗೆ ಎಲ್ಲೆಡೆ ಮೆಚ್ಚುಗೆ
ತನ್ನ ತಂಡದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಡಿಎಸ್​ಪಿ ಶಿಲ್ಪಾ ಸಾಹು
Follow us on

ಛತ್ತೀಸ್​ಗಢ್​: ಸರ್ಕಾರದ ಕೆಲಸ ದೇವರ ಕೆಲಸ ಎಂದು ಹಲವರು ಹೇಳುತ್ತಾರೆ. ಆದರೆ ಅದನ್ನು ಪಾಲಿಸುವುದು ಕೆಲವರು ಮಾತ್ರ. ಹಲವು ನೆಪಗಳನ್ನು ಹೇಳಿ ಕೆಲಸದಿಂದ ತಪ್ಪಿಸಿಕೊಳ್ಳುವ ಈ ಕಾಲದಲ್ಲಿ ತುಂಬು ಗರ್ಭಿಣಿ ಅಧಿಕಾರಿಯೊಬ್ಬರು ಕರ್ತವ್ಯದಿಂದ ಹಿಂದೆ ಸರಿಯದೆ ತನ್ನ ಕೆಲಸದಲ್ಲಿ ನಿರತರಾಗಿ ಇತರರಿಗೆ ಮಾದರಿಯಾಗಿದ್ದಾರೆ. ಛತ್ತೀಸ್​ಗಢದ ದಂತೇವಾಡ ಜಿಲ್ಲೆಯ ಡಿಎಸ್ಪಿ ಶಿಲ್ಪಾ ಸಾಹು ಎಂಬುವವರು ಸದ್ಯ ಸುದ್ದಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರ ವಿಡಿಯೋ ಹರಿಡಾಡುತ್ತಿದೆ.

ಐದು ತಿಂಗಳ ಗರ್ಭಿಣಿ ಶಿಲ್ಪಾ ಸಾಹು ಛತ್ತೀಸ್​ಗಢದ ದಂತೇವಾಡ ಜಿಲ್ಲೆಯ ಡಿಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಎರಡನೇ ಅಲೆಯಲ್ಲಿ ಎಷ್ಟು ಜವಾಬ್ದಾರಿಯಾಗಿ ಇದ್ದರೂ ಸಾಲದು. ಆದರೆ ಜನ ಮಾತ್ರ ನಿರ್ಲಕ್ಷ್ಯತನದಿಂದ ತೋರುತ್ತಿದ್ದಾರೆ. ಈ ವೇಳೆ ತನ್ನ ಕರ್ತವ್ಯಕ್ಕೆ ಹಾಜರಾದ ಗರ್ಭಿಣಿ ಡಿಎಸ್​ಪಿ ಶಿಲ್ಪಾ ಸಾಹು ಕೊರೊನಾ ಮಾರ್ಗಸೂಚಿಯನ್ನು ಪಾಲಿಸಬೇಕೆಂದು ರಸ್ತೆಗೆ ಇಳಿದು ಜನರಿಗೆ ಸಂದೇಶ ನೀಡಿದರು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ತಿಳಿ ಹೇಳಿದರು.

ಕೊರೊನ ಹಿನ್ನೆಲೆ ಛತ್ತೀಸ್ಗಢದ ದಂತೇವಾಡ ಲಾಕ್​ಡೌನ್​ ಆಗಿದೆ. ಆದರೂ ಕೆಲವರು ಚಲಿಸುತ್ತಿದ್ದಾರೆ. ವಾಹನಗಳಲ್ಲಿ ಮಾಸ್ಕ್ ಧರಿಸದೆ ಬೇಕಾಬಿಟ್ಟಿಯಾಗಿ ಓಡಾಡುವ ಜನರನ್ನು ತಡೆದು ಮೊದಲು ಮಾಸ್ಕ್ ಹಾಕಿಕೊಳ್ಳಿ ಎಂದು ಡಿಎಸ್​ಪಿ ಶಿಲ್ಪಾ ಸಾಹು ಮನವಿ ಮಾಡಿದರು. ಸುಡು ಬಿಸಿಲಿನಲ್ಲಿ ನಿಂತು ತನ್ನ ತಂಡದೊಂದಿಗೆ ಕೆಲಸವನ್ನು ನಿರ್ವಹಿಸಿದ ಮಹಿಳಾ ಅಧಿಕಾರಿಯ ಈ ಕಾರ್ಯ ಕ್ಷಮತೆಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಗರ್ಭಿಣಿ ಮಹಿಳೆಗೆ ವಿಶ್ರಾಂತಿ ಅನಿವಾರ್ಯ. ಗರ್ಭ ಧರಿಸುವ ಹೆಣ್ಣು ಕಾಲ ಕಾಲಕ್ಕೆ ಉತ್ತಮ ಆಹಾರವನ್ನು ಪಡೆಯಬೇಕು. ಹೆಚ್ಚು ಆಯಾಸ ಪಡದೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಈ ನಡುವೆ ಡಿಎಸ್​ಪಿ ಶಿಲ್ಪಾ ಸಾಹು ರಸ್ತೆಯಲ್ಲಿ ನಿಂತು ಕಾರ್ಯ ನಿರ್ವಹಿಸುವ ಮೂಲಕ ಜನರ ಜೀವದ ಬಗ್ಗೆ ಕಾಳಜಿ ವಹಿಸಿದ್ದು, ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ.

ಇದನ್ನೂ ಓದಿ

ಕೊರೊನಾ ಎಫೆಕ್ಟ್​: 15 ಕೆಜಿ ಟೊಮ್ಯಾಟೋಗೆ ಕೇವಲ 15 ರೂಪಾಯಿ; ಮನನೊಂದ ರೈತನಿಂದ ಫಸಲು ತುಂಬಿದ ಹೊಲ ನಾಶ

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೂಲ್ಸ್ ಬ್ರೇಕ್; ಹಣ್ಣು, ತರಕಾರಿ ಖರೀದಿಗೆ ಮುಗಿಬಿದ್ದ ಜನ

(During pregnancy DSP Shilpa Sahu advises people to follow the Corona guideline)