ಅರುಣಾಚಲ ಪ್ರದೇಶದಲ್ಲಿ ಮುಂಜಾನೆ ಭೂಕಂಪ; ರಿಕ್ಟರ್ ಮಾಪಕದಲ್ಲಿ 5.3ರಷ್ಟು ತೀವ್ರತೆ ದಾಖಲು
ಕೆಲವು ದಿನಗಳ ಹಿಂದೆ ಅರುಣಾಚಲ ಪ್ರದೇಶದಲ್ಲಿ ಎರಡು ಭೂಕಂಪನಗಳು ಉಂಟಾಗಿದ್ದವು. ಫೆಬ್ರವರಿಯಲ್ಲಿ ಪ್ಯಾಂಗಿನ್ನಲ್ಲಿ ಸುಮಾರು 4.3 ರಷ್ಟು ತೀವ್ರತೆಯಲ್ಲಿ, ಭೂಮೇಲ್ಮೈನಿಂದ 10 ಕಿಮೀ ಆಳದಲ್ಲಿ ಭೂಕಂಪನವಾಗಿತ್ತು.
ಅರುಣಾಚಲ ಪ್ರದೇಶದಲ್ಲಿ ಇಂದು ಮುಂಜಾನೆ ಭೂಮಿ ನಡುಗಿದ್ದು, ರಿಕ್ಟರ್ ಮಾಪಕದಲ್ಲಿ 5.3ರಷ್ಟು ತೀವ್ರತೆ ದಾಖಲಾಗಿದೆ. ಚೀನಾದ ಕಿಂಗ್ಹೈನಲ್ಲಿ ಭೂಕಂಪನ ಉಂಟಾಗಿದ್ದು, ಅದರ ಪರಿಣಾಮ ಅರುಣಾಚಲ ಪ್ರದೇಶದಲ್ಲೂ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ. ಪ್ಯಾಂಗಿನ್ನಿಂದ 1176 ಕಿಮೀ ದೂರದಲ್ಲಿ ಭೂಮೇಲ್ಮೈಗಿಂತ 30 ಕಿಮೀ ಆಳದಲ್ಲಿ ಭೂಕಂಪನವಾಗಿದ್ದಾಗಿ ಹೇಳಿದೆ. ಯಾರೂ ಮೃತಪಟ್ಟ ಮತ್ತು ಯಾವುದೇ ಆಸ್ತಿ-ಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದೂ ಹೇಳಲಾಗಿದೆ.
Earthquake of Magnitude:5.3, Occurred on 15-04-2022, 06:56:19 IST, Lat: 38.62 & Long: 97.05, Depth: 30 Km ,Location: 1176km N of Pangin, Arunachal Pradesh, India for more information Download the BhooKamp App https://t.co/iR87Q064Pm @ndmaindia @Indiametdept pic.twitter.com/5Pbw0IGxp7
— National Center for Seismology (@NCS_Earthquake) April 15, 2022
ಕೆಲವು ದಿನಗಳ ಹಿಂದೆ ಅರುಣಾಚಲ ಪ್ರದೇಶದಲ್ಲಿ ಎರಡು ಭೂಕಂಪನಗಳು ಉಂಟಾಗಿದ್ದವು. ಫೆಬ್ರವರಿಯಲ್ಲಿ ಪ್ಯಾಂಗಿನ್ನಲ್ಲಿ ಸುಮಾರು 4.3 ರಷ್ಟು ತೀವ್ರತೆಯಲ್ಲಿ, ಭೂಮೇಲ್ಮೈನಿಂದ 10 ಕಿಮೀ ಆಳದಲ್ಲಿ ಭೂಕಂಪನವಾಗಿತ್ತು. ಹಾಗೇ ಜನವರಿಯಲ್ಲಿ ದಿಬಾಂಗ್ ವ್ಯಾಲಿ ಜಿಲ್ಲೆಯಲ್ಲಿ ಭೂಮಿ ನಡುಗಿತ್ತು. ಅದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.2ರಷ್ಟು ದಾಖಲಾಗಿತ್ತು. ಒಟ್ಟಾರೆ ಈ ಪ್ಯಾಂಗಿನ್ ಸುತ್ತಮುತ್ತ ಪದೇಪದೆ ಭೂಕಂಪನವಾಗುತ್ತಿದೆ.
ಇದನ್ನೂ ಓದಿ: Crime News: ಮಧ್ಯರಾತ್ರಿ ಕಾರಿನಲ್ಲಿ ಬಂದು ಹಲಸೂರು ಗೇಟ್ ಪೊಲೀಸ್ ಠಾಣೆ ಮುಂದೆಯೇ ಮದ್ಯ ಸೇವಿಸಿ ಎಣ್ಣೆ ಪಾರ್ಟಿ ಮಾಡಿದ ವ್ಯಕ್ತಿ