AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದ ಹಲವು ರಾಜ್ಯಗಳಲ್ಲಿ ಮತ್ತೆ ನಿಧಾನವಾಗಿ ಏರುತ್ತಿದೆ ಕೊರೊನಾ; ಮಾಸ್ಕ್​ ಕಡ್ಡಾಯವಾಗಿ ಬಳಕೆ ಮಾಡೋದು ಒಳಿತು

ಮಹಾರಾಷ್ಟ್ರದಲ್ಲಿ ಗುರುವಾರ 103 ಕೊರೊನಾ ಕೇಸ್​ಗಳು ದಾಖಲಾಗಿವೆ. ಹಾಗೇ, ಐದು ಮಂದಿ ಕೊವಿಡ್​ 19ನಿಂದ ಮೃತಪಟ್ಟಿದ್ದಾರೆ.   ಮುಂಬೈ ನಗರದಲ್ಲಿ ಏಪ್ರಿಲ್​ 14ರಂದು 56 ಹೊಸ ಕೇಸ್​ಗಳು ದಾಖಲಾಗಿದ್ದವು.

ದೇಶದ ಹಲವು ರಾಜ್ಯಗಳಲ್ಲಿ ಮತ್ತೆ ನಿಧಾನವಾಗಿ ಏರುತ್ತಿದೆ ಕೊರೊನಾ; ಮಾಸ್ಕ್​ ಕಡ್ಡಾಯವಾಗಿ ಬಳಕೆ ಮಾಡೋದು ಒಳಿತು
ಕೊವಿಡ್ -19
TV9 Web
| Updated By: Lakshmi Hegde|

Updated on: Apr 15, 2022 | 12:37 PM

Share

ದೇಶದಲ್ಲಿ ಏಪ್ರಿಲ್​ 1ರಿಂದ ಕೊರೊನಾ ನಿಯಂತ್ರಣ ನಿರ್ಬಂಧಗಳು ಯಾವವೂ ಇಲ್ಲ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್​​ನ್ನು ಕಡ್ಡಾಯವಾಗಿ ಧರಿಸಿ ಎಂದು ಕೇಂದ್ರ ಸರ್ಕಾರ ಹೇಳಿದ್ದರೂ ಕೂಡ ಕೆಲವು ರಾಜ್ಯಗಳಲ್ಲಿ ಮಾಸ್ಕ್​ ಕೂಡ ಕಡ್ಡಾಯವಲ್ಲ. ಧರಿಸದೆ ಇದ್ದರೆ ದಂಡ ವಿಧಿಸುವುದಿಲ್ಲ ಎಂದು ಅಲ್ಲಿನ ಸರ್ಕಾರಗಳು ಹೇಳಿವೆ. ಆದರೆ ಈಗ ಮತ್ತೆ ಕೆಲವು ರಾಜ್ಯಗಳಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ ನಿಧಾನಕ್ಕೆ ಏರಿಕೆಯಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ದೆಹಲಿ, ಮಹಾರಾಷ್ಟ್ರ ಮತ್ತು ಮಿಜೋರಾಂಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ದೆಹಲಿಯಲ್ಲಿ ಏಪ್ರಿಲ್​ 14ರಂದು 325 ಕೊರೊನಾ ಕೇಸ್​ಗಳು ದಾಖಲಾಗಿದೆ. ಅಲ್ಲಿ ಪಾಸಿಟಿವಿಟಿ ದರವೂ ಕೂಡ ಶೇ. 2.39ರಷ್ಟಿದೆ. ಹಾಗಿದ್ದಾಗ್ಯೂ ಜನರು ಗಾಬರಿಯಾಗುವ ಅಗತ್ಯವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​, ವೈದ್ಯರು ಧೈರ್ಯ ತುಂಬುತ್ತಿದ್ದಾರೆ.

ಮಹಾರಾಷ್ಟ್ರದಲ್ಲೂ ಹೆಚ್ಚಳ

ಮಹಾರಾಷ್ಟ್ರದಲ್ಲಿ ಗುರುವಾರ 103 ಕೊರೊನಾ ಕೇಸ್​ಗಳು ದಾಖಲಾಗಿವೆ. ಹಾಗೇ, ಐದು ಮಂದಿ ಕೊವಿಡ್​ 19ನಿಂದ ಮೃತಪಟ್ಟಿದ್ದಾರೆ.   ಮುಂಬೈ ನಗರದಲ್ಲಿ ಏಪ್ರಿಲ್​ 14ರಂದು 56 ಹೊಸ ಕೇಸ್​ಗಳು ದಾಖಲಾಗಿದ್ದವು. ಈ ಮೂಲಕ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ ಇಲ್ಲಿ 10,58,623 ಏರಿಕೆಯಾಗಿದೆ. ಸದ್ಯ ಮುಂಬೈನಲ್ಲಿ ಶೇ.98ರಷ್ಟು ಚೇತರಿಕೆ ಪ್ರಮಾಣವಿದ್ದು, 346 ಸಕ್ರಿಯ ಪ್ರಕರಣಗಳಿವೆ.  ಮಿಜೋರಾಂನಲ್ಲಿ ಕೊವಿಡ್​ 19 ಏರಿಕೆ ತುಸು ಏರಿಕೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ  2,25,901ಕ್ಕೆ ತಲುಪಿದೆ.

ಇನ್ನುಳಿದಂತೆ ತಮಿಳುನಾಡಿನಲ್ಲಿ ನಿನ್ನೆ 25 ಹೊಸ ಕೊರೊನಾ ಕೇಸ್​ಗಳು ದಾಖಲಾಗಿದ್ದವು. ಅದರಲ್ಲಿ ಒಬ್ಬರು ಯುನೈಟೆಡ್ ಅರಬ್​ ಎಮಿರೇಟ್ಸ್​​ನಿಂದ ಭಾರತಕ್ಕೆ ವಾಪಸ್ ಬಂದವರು. ಈ ರಾಜ್ಯದಲ್ಲಿ ಒಟ್ಟು 230 ಕೊರೊನಾ ಸಕ್ರಿಯ ಪ್ರಕರಣಗಳು ಇದ್ದು, ಇಲ್ಲಿಯವರೆಗೆ  34,14,933 ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.  ಇತ್ತೀಚೆಗೆ ಕೊರೊನಾದ ಎಕ್ಸ್​ಇ ರೂಪಾಂತರಿ ವೈರಾಣು ಆತಂಕ ಸೃಷ್ಟಿಸಿರುವ ಬೆನ್ನಲ್ಲೇ,  ದಕ್ಷಿಣ ಆಫ್ರಿಕಾದ ಬೋಟ್ಸ್‌ವಾನಾದಲ್ಲಿ ಒಮಿಕ್ರೋನ್‌ ಬಿಎ.4 ಹಾಗೂ ಬಿಎ.5 ಎಂಬ 2 ಹೊಸ ರೂಪಾಂತರಿಗಳು ಪತ್ತೆಯಾಗಿವೆ. ಇವು ಹೆಚ್ಚು ಅಪಾಯಕಾರಿ ಅಥವಾ ತೀವ್ರವಾಗಿ ಹರಡುವ ಸಾಮರ್ಥ್ಯ ಹೊಂದಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಇದರ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಇದನ್ನೂ ಓದಿ: Viral: ಸ್ಕರ್ಟ್ ಧರಿಸಿ ‘ಸಾಮಿ ಸಾಮಿ’ ಹಾಡಿಗೆ ಯುವಕನ ಭರ್ಜರಿ ಡಾನ್ಸ್; ಏನಿದು ಹೊಸ ಟ್ರೆಂಡ್?

ಆಲಿಯಾ-ರಣಬೀರ್​ ಆಸ್ತಿ ಸೇರಿದರೆ ಆಗಲಿದೆ 840 ಕೋಟಿ ರೂಪಾಯಿ! ಇದರಲ್ಲಿ ಯಾರ ಪಾಲು ಎಷ್ಟು?

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್