AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಸ್ಕರ್ಟ್ ಧರಿಸಿ ‘ಸಾಮಿ ಸಾಮಿ’ ಹಾಡಿಗೆ ಯುವಕನ ಭರ್ಜರಿ ಡಾನ್ಸ್; ಏನಿದು ಹೊಸ ಟ್ರೆಂಡ್?

Men In Skirts | Saami Saami: ಇತ್ತೀಚೆಗೆ ಯುವಕನೋರ್ವ ಸ್ಕರ್ಟ್ ಧರಿಸಿ ನೃತ್ಯ ಮಾಡುತ್ತಿರುವ ಒಂದು ವಿಡಿಯೋ ವೈರಲ್ ಆಗಿತ್ತು. ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಆ ವಿಡಿಯೋ ನಂತರ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಇದೀಗ ನೃತ್ಯಗಾರ ಜೈನಿಲ್ ಮೆಹ್ತಾ ‘ಸಾಮಿ ಸಾಮಿ’ ಹಾಡಿಗೆ ಹೆಜ್ಜೆಹಾಕಿದ್ದಾರೆ. ಇದಕ್ಕೂ ಕೂಡ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Viral: ಸ್ಕರ್ಟ್ ಧರಿಸಿ ‘ಸಾಮಿ ಸಾಮಿ’ ಹಾಡಿಗೆ ಯುವಕನ ಭರ್ಜರಿ ಡಾನ್ಸ್; ಏನಿದು ಹೊಸ ಟ್ರೆಂಡ್?
‘ಸಾಮಿ ಸಾಮಿ’ ಹಾಡಿಗೆ ಜೈನಿಲ್ ಮೆಹ್ತಾ ನೃತ್ಯ (Credits: Jainil Mehta/ Instagram)
Follow us
TV9 Web
| Updated By: shivaprasad.hs

Updated on:Apr 15, 2022 | 12:21 PM

ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಜನರು ತಮ್ಮ ಅಭಿರುಚಿಗೆ ಅನುಗುಣವಾಗಿ ತಮ್ಮ ಆಸಕ್ತಿಯ ಕ್ಷೇತ್ರಗಳ ವಿಡಿಯೋವನ್ನು ವೀಕ್ಷಿಸುತ್ತಾರೆ. ಇವುಗಳೊಂದಿಗೆ ಹಲವರು ಪ್ರಸ್ತುತ ಇರುವ ಟ್ರೆಂಡ್​ಗಳನ್ನು ಬ್ರೇಕ್ ಮಾಡಿ ಹೊಸ ಟ್ರೆಂಡ್ (New Trend) ಸೃಷ್ಟಿಸುತ್ತಾರೆ. ಇತ್ತೀಚೆಗೆ ಅಂಥದ್ದೇ ಒಂದು ವಿಡಿಯೋ ವೈರಲ್ (Viral Video) ಆಗಿತ್ತು. ಅದರಲ್ಲಿ ಯುವಕನೋರ್ವ ಸ್ಕರ್ಟ್ ಧರಿಸಿ ನೃತ್ಯ ಮಾಡಿದ್ದ. ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಆ ವಿಡಿಯೋ ನಂತರ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಅಲ್ಲದೇ ನೆಟ್ಟಿಗರ ನಡುವೆ ಚರ್ಚೆಗೂ ಕಾರಣವಾಗಿತ್ತು. ಆಲಿಯಾ ಭಟ್ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಹಾಡಿಗೆ ನ್ಯೂಯಾರ್ಕ್​ನಲ್ಲಿ ವಾಸವಿರುವ ಜೈನಿಲ್ ಮೆಹ್ತಾ ಎನ್ನುವವರು ಸ್ಕರ್ಟ್ ಧರಿಸಿ ನೃತ್ಯ ಮಾಡಿದ್ದರು. ಸ್ಕರ್ಟ್​ ಅನ್ನು ಎಲ್ಲರೂ ಧರಿಸಬಹುದು ಎನ್ನುವುದರ ಬಗ್ಗೆ ಜೈನಿಲ್ ಜಾಗೃತಿ ಮೂಡಿಸುತ್ತಿದ್ದಾರೆ. ಕೊರಿಯೋಗ್ರಫರ್ ಅವರು ತಮ್ಮ ಹೆಜ್ಜೆಗಳಿಂದ ಈಗಾಗಲೇ ಎಲ್ಲರ ಮನಸೂರೆಗೊಂಡಿದ್ದಾರೆ. ಇದೀಗ ಅವರು ಸೂಪರ್ ಹಿಟ್ ಹಾಡಾದ ‘ಸಾಮಿ ಸಾಮಿ’ಗೆ ಜೈನಿಲ್ ಹೆಜ್ಜೆಹಾಕಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ರೀಲ್ಸ್​ ಹಂಚಿಕೊಂಡಿರುವ ಜೈನಿಲ್ ಮೆಹ್ತಾ, ನ್ಯೂಯಾರ್ಕ್​ನ ಬೀದಿಯೊಂದರಲ್ಲಿ ‘ಸಾಮಿ ಸಾಮಿ’ ಹಾಡಿಗೆ ಹೆಜ್ಜೆಹಾಕಿದ್ದಾರೆ. ಈಗಾಗಲೇ ‘ಪುಷ್ಪ: ದಿ ರೈಸ್’ ಚಿತ್ರದ ಸೂಪರ್ ಹಿಟ್ ಹಾಡುಗಳಿಗೆ ಖ್ಯಾತ ಕ್ರಿಕೆಟ್ ತಾರೆಯರು, ಸೆಲೆಬ್ರಿಟಿಗಳು ಸೇರಿದಂತೆ ಅಸಂಖ್ಯ ಜನರು ಹೆಜ್ಜೆ ಹಾಕಿದ್ಧಾರೆ. ಇದೇ ಕಾರಣದಿಂದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಚಿತ್ರದ ಹಾಡುಗಳು ಟ್ರೆಂಡ್ ಸೃಷ್ಟಿಸಿದ್ದವು.

ಇದೀಗ ಹೊಸ ಟ್ರೆಂಡ್ ಸೃಷ್ಟಿಸುತ್ತಿರುವ ಜೈನಿಲ್ ಮೆಹ್ತಾ, ‘ಸಾಮಿ ಸಾಮಿ’ಗೆ ಹೆಜ್ಜೆಹಾಕಿದ್ದಾರೆ. ಅವರ ನೃತ್ಯಕ್ಕೆ ಜನರು ಮನಸೋತಿದ್ದಾರೆ. ಅಲ್ಲದೇ, ಜೈನಿಲ್ ಅವರು ಇಂತಹ ದಿರಿಸಿನಲ್ಲಿ ಹೆಜ್ಜೆ ಹಾಕುವ ಹಿಂದಿನ ಕಾರಣವನ್ನು ಪ್ರಶಂಸಿಸಿದ್ದಾರೆ. ಜೈನಿಲ್ ತಮ್ಮ ಅಭಿಯಾನವನ್ನು ‘ಮೆನ್ ಇನ್ ಸ್ಕರ್ಟ್ಸ್’ ಎಂಬ ಹ್ಯಾಶ್​ಟ್ಯಾಗ್​ ಅಡಿಯಲ್ಲಿ ನಡೆಸುತ್ತಿದ್ದಾರೆ.

ಸಾಮಾನ್ಯವಾಗಿ ಯುವತಿಯರು ಕೂಡ ಸ್ಕರ್ಟ್​ ಅಥವಾ ಸೀರೆ ಧರಿಸಿ ನೃತ್ಯ ಮಾಡಲು ಯೋಚಿಸುತ್ತಾರೆ. ನೃತ್ಯಕ್ಕೆ ಆ ದಿರಿಸುಗಳು ಪೂರಕವಲ್ಲ ಎಂಬ ಭಾವನೆ ಇದಕ್ಕೆ ಕಾರಣ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಕಲ್ಪನೆಯನ್ನು ಮುರಿಯುವ ವಿಡಿಯೋಗಳು ವೈರಲ್ ಆಗಿವೆ. ಈ ಪಂಕ್ತಿಗೂ ಜೈನಿಲ್ ಅವರ ಅಭಿಯಾನ ಸೇರ್ಪಡೆಯಾಗಿದೆ ಎನ್ನಬಹುದು.

ಜೈನಿಲ್ ಮೆಹ್ತಾ ಹೆಜ್ಜೆಹಾಕಿರುವ ವಿಡಿಯೋ ಇಲ್ಲಿದೆ:

ಜೈನಿಲ್ ಮೆಹ್ತಾ ನೃತ್ಯದ ಮತ್ತೊಂದು ವಿಡಿಯೋ:

ಈ ಹಿಂದೆ ವೈರಲ್ ಆಗಿದ್ದ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಹಾಡು:

ಪ್ರಸ್ತುತ ವೈರಲ್ ಆಗಿರುವ ‘ಸಾಮಿ ಸಾಮಿ’ ವಿಡಿಯೋವನ್ನು ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಅದಕ್ಕೆ ಈಗಾಗಲೇ 5.6 ಲಕ್ಷ ವೀಕ್ಷಣೆಗಳು ಲಭ್ಯವಾಗಿವೆ. ಸಾವಿರಾರು ಜನರು ಇಷ್ಟಪಟ್ಟಿದ್ದಾರೆ. ಅಲ್ಲದೇ ಜೈನಿಲ್ ಅವರ ನೃತ್ಯ ಸಂಯೋಜನೆಗೆ ಕಾಮೆಂಟ್​ಗಳ ಮೂಲಕ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ‘‘ಈ ವಿಡಿಯೋ ಅದ್ಭುತವಾಗಿದೆ, ಕೇವಲ 60 ಸೆಕೆಂಡ್​ಗಳು ಸಾಕಾಗುವುದಿಲ್ಲ’’ ಎಂದು ಓರ್ವರು ಪ್ರತಿಕ್ರಿಯೆ ನೀಡಿದ್ದರೆ, ಮತ್ತೋರ್ವರು ‘‘ಬಹಳ ಚೆನ್ನಾಗಿದೆ’’ ಎಂದು ಬರೆದಿದ್ದಾರೆ.

ದಿರಿಸಿನಲ್ಲಿ ಲಿಂಗ ತಾರತಮ್ಯ ಇರಬಾರದು ಎಂಬ ಚಿಂತನೆಯಲ್ಲಿ ‘ಮೆನ್ ಇನ್ ಸ್ಕರ್ಟ್ಸ್’ ಪರಿಕಲ್ಪನೆ ಮೂಡಿದೆ. ಹಾಗಂತ ಇದು ಹೊಸದೇನೂ ಅಲ್ಲ. ಆದರೆ ಜೈನಿಲ್ ಮೆಹ್ತಾ ತಮ್ಮ ನೃತ್ಯದ ಮೂಲಕ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: Viral Video : ಸ್ಕರ್ಟ್ ಧರಿಸಿ ಸಖತ್ ಡ್ಯಾನ್ಸ್ ಮಾಡಿದ ಯುವಕ !

ದಿಶಾ ಪಟಾನಿ ಸ್ಥಿತಿ ನೋಡಲಾಗದೇ ಸೀರೆ, ಬುರ್ಕಾ, ಸ್ಕರ್ಟ್​ ತೊಡಿಸಿದ ನೆಟ್ಟಿಗರು; ಇಲ್ಲಿವೆ ಫನ್ನಿ ಫೋಟೋಗಳು

Published On - 12:15 pm, Fri, 15 April 22