ಅಸ್ಸಾಂನ ತೇಜ್​ಪುರದಲ್ಲಿ ಮತ್ತೆ ನಡುಗಿದ ಭೂಮಿ; 3.7ರಷ್ಟು ತೀವ್ರತೆ ದಾಖಲು

ಅಸ್ಸಾಂನಲ್ಲಿ ಕಳೆದ ತಿಂಗಳು ಕೂಡ ಭೂಕಂಪನ ಉಂಟಾಗಿತ್ತು. ಅಕ್ಟೋಬರ್​ 3ರಂದು ಕೂಡ ಭೂಮಿ ನಡುಗಿತ್ತು. ಆಗ ರಿಕ್ಟರ್​ ಮಾಪಕದಲ್ಲಿ 3.8ರಷ್ಟು ತೀವ್ರತೆ ದಾಖಲಾಗಿತ್ತು.

ಅಸ್ಸಾಂನ ತೇಜ್​ಪುರದಲ್ಲಿ ಮತ್ತೆ ನಡುಗಿದ ಭೂಮಿ; 3.7ರಷ್ಟು ತೀವ್ರತೆ ದಾಖಲು
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Nov 04, 2021 | 1:29 PM

ಅಸ್ಸಾಂನ ಗುವಾಹಟಿ ಮತ್ತು ತೇಜ್​ಪುರ್​ಗಳಲ್ಲಿ ಇಂದು ಭೂಕಂಪ ಉಂಟಾಗಿದ್ದು, ರಿಕ್ಟರ್​ ಮಾಪಕದಲ್ಲಿ 3.7ರಷ್ಟು ತೀವ್ರತೆ ದಾಖಲಾಗಿದೆ.  ತೇಜ್​ಪುರದ ಪಶ್ಚಿಮ-ನೈಋತ್ಯಕ್ಕೆ 35 ಕಿಮೀ ದೂರದಲ್ಲಿ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ.  ಬೆಳಗ್ಗೆ ಸುಮಾರು 10.19ರ ಹೊತ್ತಿಗೆ ಭೂಮಿ ನಡುಗಿದ್ದು, ಯಾರದ್ದೂ ಪ್ರಾಣ ಹೋದ ಬಗ್ಗೆ, ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ. 

ಅಸ್ಸಾಂನಲ್ಲಿ ಕಳೆದ ತಿಂಗಳು ಕೂಡ ಭೂಕಂಪನ ಉಂಟಾಗಿತ್ತು. ಅಕ್ಟೋಬರ್​ 3ರಂದು ಕೂಡ ಭೂಮಿ ನಡುಗಿತ್ತು. ಆಗ ರಿಕ್ಟರ್​ ಮಾಪಕದಲ್ಲಿ 3.8ರಷ್ಟು ತೀವ್ರತೆ ದಾಖಲಾಗಿತ್ತು. ಆಗ ಮಧ್ಯಾಹ್ನ 2.40ರ ಹೊತ್ತಿಗೆ ಭೂಕಂಪನ ಉಂಟಾಗಿತ್ತು. ಆಗಲೂ ಕೂಡ ಯಾವುದೇ ಹಾನಿಯಾಗಿರಲಿಲ್ಲ. ಹಾಗೇ, ಕಳೆದ ಎರಡು ದಿನಗಳ ಹಿಂದೆ ಅಂದರೆ ನವೆಂಬರ್​ 2ರಂದು ಜಮ್ಮು-ಕಾಶ್ಮೀರದಲ್ಲೂ ಭೂಕಂಪ ಉಂಟಾಗಿದ್ದು, ರಿಕ್ಟರ್​ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲಾಗಿತ್ತು. ಇದನ್ನು ಹೊರತುಪಡಿಸಿದರೆ ಅಕ್ಟೋಬರ್​ 24ರಂದು ಲಡಾಖ್​​ನಲ್ಲಿ 4.2 ರಷ್ಟು ತೀವ್ರತೆಯ ಭೂಕಂಪನ ಉಂಟಾಗಿತ್ತು. ಕಾರ್ಗಿಲ್​​ ಪ್ರದೇಶದಲ್ಲಿ ಬೆಳಗ್ಗೆ ರಾತ್ರಿ 11.29ರ ಹೊತ್ತಿಗೆ ಭೂಮಿ ನಡುಗಿತ್ತು ಮತ್ತು ಭೂ ಮೇಲ್ಮೈನಿಂದ 140 ಕಿಮೀ ಆಳದಲ್ಲಿ ಭೂಕಂಪ ಉಂಟಾಗಿತ್ತು ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಮಾಹಿತಿ ನೀಡಿತ್ತು.  ಇತ್ತೀಚೆಗೆ ಹಲವು ಪ್ರದೇಶಗಳಲ್ಲಿ ಸಣ್ಣಮಟ್ಟದ ಭೂಕಂಪನ ಆಗುತ್ತಲೇ ಇದೆ. ಅದೃಷ್ಟವಶಾತ್​ ಯಾರಿಗೂ ಜೀವಕ್ಕೆ ಹಾನಿಯಾಗುತ್ತಿಲ್ಲ. ಆಸ್ತಿಪಾಸ್ತಿ ನಾಶ ಉಂಟಾಗಿಲ್ಲ.

ಇದನ್ನೂ ಓದಿ: ಪ್ರತಿಭಟನಾಕಾರರು ಉಂಟು ಮಾಡಿದ ನಾಶನಷ್ಟವನ್ನು ಅವರೇ ಭರಿಸುವಂತೆ ಮಾಡಲು ಮಧ್ಯಪ್ರದೇಶ ಸರ್ಕಾರ ಸಿದ್ಧತೆ

Hotels to hike food price: ದರ ದರನೇ ಏರುತ್ತಿರುವ ಗ್ಯಾಸ್​ ರೇಟ್, ಗ್ರಾಹಕನಿಗೆ ಬರೆ ಎಳೆಯಲು ಹೋಟೆಲ್ ಮಾಲೀಕರ​ ಸಿದ್ಧತೆ

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?