Ayodhya Earthquake ಉತ್ತರ ಪ್ರದೇಶದ ಅಯೋಧ್ಯೆ ಬಳಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ

ಎನ್​​ಸಿಎಸ್ ಪ್ರಕಾರ, ಅಯೋಧ್ಯೆಯಿಂದ 176 ಕಿಮೀ ಉತ್ತರ ಈಶಾನ್ಯಭಾಗದಲ್ಲಿ ಭೂಮಿ ಕಂಪಿಸಿದೆ. 06-01-2022 ರಂದು 23:59:22 IST ವೇಳೆಗೆ 4.3 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು NCS ಟ್ವೀಟ್ ಮಾಡಿದೆ.

Ayodhya Earthquake ಉತ್ತರ ಪ್ರದೇಶದ ಅಯೋಧ್ಯೆ ಬಳಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ
ಅಯೋಧ್ಯೆಯಲ್ಲಿ ಭೂಕಂಪ
Edited By:

Updated on: Jan 07, 2022 | 10:36 AM

ಅಯೋಧ್ಯೆ: ಉತ್ತರ ಪ್ರದೇಶದ (Uttarpradesh) ಅಯೋಧ್ಯೆಯ (Ayodhya) ಬಳಿ ರಿಕ್ಟರ್ ಮಾಪಕದಲ್ಲಿ 4.3 ಅಳತೆಯ ಭೂಕಂಪ (Earthquake )ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಶುಕ್ರವಾರ ತಿಳಿಸಿದೆ. ಎನ್​​ಸಿಎಸ್ ಪ್ರಕಾರ, ಅಯೋಧ್ಯೆಯಿಂದ 176 ಕಿಮೀ ಉತ್ತರ ಈಶಾನ್ಯಭಾಗದಲ್ಲಿ ಭೂಮಿ ಕಂಪಿಸಿದೆ. 06-01-2022 ರಂದು 23:59:22 IST ವೇಳೆಗೆ 4.3 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು NCS ಟ್ವೀಟ್ ಮಾಡಿದೆ. ಈ ಸ್ಥಳವು ಭಾರತದಲ್ಲಿನ ಅಯೋಧ್ಯೆಯ (ಉತ್ತರ ಪ್ರದೇಶ) 176 ಕಿಮೀ ಉತ್ತರ ಈಶಾನ್ಯಭಾಗದಲ್ಲಿ ಮತ್ತು ನೇಪಾಳದ ರಾಜಧಾನಿಯಾದ ಕಠ್ಮಂಡುವಿನಿಂದ ಸುಮಾರು 300 ಕಿಮೀ ಪಶ್ಚಿಮ ವಾಯವ್ಯ ಭಾಗದಲ್ಲಿದೆ. ಪ್ರಬಲವಾದ ಹಿಮಾಲಯದಲ್ಲಿ ನೆಲೆಸಿರುವ ಇಡೀ ನೇಪಾಳವು ಭೂಕಂಪ ಪೀಡಿತ ಪ್ರದೇಶವಾಗಿದೆ.


ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ, ಭೂಕಂಪದ ಈ ಕಂಪನಗಳು ರಾತ್ರಿ 11.59 ಕ್ಕೆ ಅನುಭವವಾಯಿತು. ಭೂಕಂಪನದ ಅನುಭವವಾದ ನಂತರ ಜನರು ಮನೆಗಳಿಂದ ಹೊರಬಂದರು. ಈ ವೇಳೆ ಮಕ್ಕಳು, ಮಹಿಳೆಯರು ಹಾಗೂ ಹಿರಿಯರ ಮುಖದಲ್ಲಿ ಭಯ ಸ್ಪಷ್ಟವಾಗಿ ಕಾಣುತ್ತಿತ್ತು. ಈ ಜನರು ಸುಮಾರು ಒಂದೂವರೆ-ಎರಡು ಗಂಟೆಗಳ ನಂತರ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಏಪ್ರಿಲ್ 2015 ರಲ್ಲಿ ಇದಕ್ಕೂ ಮೊದಲು ಅಯೋಧ್ಯೆ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಭೂಕಂಪದ ಪ್ರಬಲ ಕಂಪನಗಳು ಸಂಭವಿಸಿವೆ. ಈ ವೇಳೆ ರಾಮನಗರಿಯ ಮಾ ಕಾಮಾಖ್ಯ ದೇವಸ್ಥಾನದ ಮೇಲ್ಛಾವಣಿ ಬಿದ್ದಿತ್ತು. ಇದರಿಂದ ಅಲ್ಲಿ ಕಾಲ್ತುಳಿತ ಉಂಟಾಯಿತು. ಜನರು ಪ್ರಾಣ ಉಳಿಸಿಕೊಳ್ಳಲು ದೇವಸ್ಥಾನದ ಆವರಣದಿಂದ ಹೊರಗೆ ಓಡಿ ಬಂದರು. ಇದಲ್ಲದೇ ಲಖನೌದ ನಾಗ್ರಾಮ್‌ನಲ್ಲಿ ಮಸೀದಿಯ ಗೋಡೆ ಕುಸಿದಿದ್ದರಿಂದ ಸುತ್ತಮುತ್ತಲಿನ ಪ್ರದೇಶದಿಂದ ಜನರು ಓಡಿಹೋಗಿದ್ದರು. ಆದರೆ, ಮರುದಿನ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು.

ಇದನ್ನೂ ಓದಿ:  PM Modi: ₹ 530 ಕೋಟಿ ವೆಚ್ಚದಲ್ಲಿ ನಿರ್ಮಿತವಾದ ಕೋಲ್ಕತ್ತಾದ ಸಿಎನ್​ಸಿಐ 2ನೇ ಕ್ಯಾಂಪಸ್ಅನ್ನು ಇಂದು​ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಇದನ್ನೂ ಓದಿ: ಮೇಕೆದಾಟು: ಸರ್ವಪಕ್ಷ ನಿಯೋಗ ಕರೆದೊಯ್ದರೆ ಮೋದಿ ಹತ್ರ ನಾನು ಮಾತಾಡ್ತೇನಿ- ಸಿದ್ದರಾಮಯ್ಯ ಘೋಷಣೆ

Published On - 10:13 am, Fri, 7 January 22