ತಿರುಪತಿ ಸಮೀಪ ಭೂಕಂಪ: 20 ಕಿಮೀ ಆಳದ ಭೂಗರ್ಭದಲ್ಲಿತ್ತು ಭೂಕಂಪದ ಕೇಂದ್ರ

ತಿರುಪತಿಯಿಂದ 85 ಕಿಮೀ ಈಶಾನ್ಯಕ್ಕೆ (North East) ಭೂಗರ್ಭದ 20 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರವಿತ್ತು ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್​ಮಾಲಜಿ ಭಾನುವಾರ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

ತಿರುಪತಿ ಸಮೀಪ ಭೂಕಂಪ: 20 ಕಿಮೀ ಆಳದ ಭೂಗರ್ಭದಲ್ಲಿತ್ತು ಭೂಕಂಪದ ಕೇಂದ್ರ
ಸಾಂಕೇತಿಕ ಚಿತ್ರ
Edited By:

Updated on: Apr 03, 2022 | 11:01 AM

ತಿರುಪತಿ: ಆಂಧ್ರ ಪ್ರದೇಶದಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳ ತಿರುಪತಿಯಲ್ಲಿ ಭಾನುವಾರ ಭೂಮಿ ಕಂಪಿಸಿದೆ. ತಿರುಪತಿಯಿಂದ 85 ಕಿಮೀ ಈಶಾನ್ಯಕ್ಕೆ (North East) ಭೂಗರ್ಭದ 20 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರವಿತ್ತು ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್​ಮಾಲಜಿ ಭಾನುವಾರ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ. 3.6ರ ತೀವ್ರತೆಯ ಭೂಕಂಪವು ಏಪ್ರಿಲ್ 4, 2022ರಂದು ಮಧ್ಯರಾತ್ರಿ 1.10ಕ್ಕೆ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್​ಮಾಲಜಿ ಟ್ವೀಟ್ ಮಾಡಿದೆ. ಭೂಕಂಪದಿಂದಾಗಿ ಜೀವ ಅಥವಾ ಆಸ್ತಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಿಲ್ಲ.

ಲಡಾಖ್​​ನ ಗ್ರಾಮವೊಂದರಲ್ಲಿ ಭೂಕಂಪ

ಜಮ್ಮು-ಕಾಶ್ಮೀರದ ಲಡಾಖ್​​ನಲ್ಲಿರುವ ಅಲ್ಚಿ ಪ್ರದೇಶದ ಉತ್ತರದಲ್ಲಿ ಇಂದು ಮುಂಜಾನೆ ಭೂಕಂಪ (Earthquake)ವಾಗಿದೆ. ರಿಕ್ಟರ್​ ಮಾಪಕದಲ್ಲಿ ಭೂಕಂಪದ ತೀವ್ರತೆ 4.3ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. ಇಂದು ಮುಂಜಾನೆ 7.29ರ ಹೊತ್ತಿಗೆ ಲಡಾಖ್​ನ ಲೇಹ್​​ ಜಿಲ್ಲೆಯ ಆಲ್ಚಿ ಗ್ರಾಮದ ಉತ್ತರಕ್ಕೆ 186 ಕಿಮೀ ದೂರದಲ್ಲಿ ಭೂ ಮೇಲ್ಮೈನಿಂದ 186 ಕಿಮೀ ಆಳದಲ್ಲಿ ಭೂಮಿ ನಡುಗಿದ್ದಾಗಿ ಟ್ವೀಟ್ ಮಾಡಿದೆ.

ಭೂಕಂಪದ ಕೇಂದ್ರ ಚೀನಾದಿಂದ ಉತ್ತರಕ್ಕೆ 18 ಕಿಮಿ ದೂರದಲ್ಲಿ ಇದೆ ಎಂದೂ ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ. ಭೂಮಿ ನಡುಗುತ್ತಿದ್ದಂತೆ ಸ್ಥಳದಲ್ಲಿದ್ದವರೆಲ್ಲ ಕಂಗಾಲಾಗಿದ್ದರು. ತಮ್ಮ ಮನೆಗಳಿಂದ ಹೊರಬಂದಿದ್ದರು. ಅದೃಷ್ಟವಶಾತ್​ ಏನೂ ಹಾನಿಯಾಗಲಿಲ್ಲ. ಯಾರ ಜೀವಕ್ಕೂ ಅಪಾಯವಾಗಿಲ್ಲ ಎಂದು ವರದಿಯಾಗಿದೆ.

ನಿನ್ನೆ ತಡರಾತ್ರಿ 2.52ರ ಹೊತ್ತಿಗೆ ಅಂಡಮಾನ್​-ನಿಕೋಬಾರ್​ನ ದಿಗ್ಲಿಪುರ್​ ಎಂಬಲ್ಲಿ ಭೂಕಂಪನವಾಗಿದೆ. ಇಲ್ಲಿನ ಭೂಕಂಪ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.4ರಷ್ಟು ದಾಖಲಾಗಿದ್ದು, ದಿಗ್ಲಿಪುರದಿಂದ ಉತ್ತರಕ್ಕೆ ಸುಮಾರು 147 ಕಿಮೀ ದೂರದಲ್ಲಿ ಭೂಕಂಪನ ಕೇಂದ್ರ ಬಿಂದು ಎಂದು ಹೇಳಲಾಗಿದೆ.

ಇದನ್ನೂ ಓದಿ: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ನಡುಗಿದ ಭೂಮಿ: 10 ಕಿಮೀ ಆಳದಲ್ಲಿ ಭೂಕಂಪನ

ಇದನ್ನೂ ಓದಿ: ವಿಜಯಪುರದಲ್ಲಿ ಭೂಕಂಪ; ಭಾರೀ ಶಬ್ದ ಕೇಳಿ, ಭೂಮಿ ನಡುಗಿದ ಅನುಭವ