Ladakh Earthquake: ಲಡಾಖ್​ನಲ್ಲಿ 4.5 ತೀವ್ರತೆಯ ಭೂಕಂಪ

|

Updated on: Dec 26, 2023 | 8:09 AM

ಲಡಾಖ್​ನಲ್ಲಿ ಇಂದು ಭೂಕಂಪದ ಅನುಭವವಾಗಿದೆ, ಜನರು ಭಯಭೀತರಾಗಿದ್ದಾರೆ. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.5 ಎಂದು ಅಳೆಯಲಾಗಿದೆ. ಲಡಾಖ್ ಮತ್ತು ಲೇಹ್‌ನಲ್ಲಿ ಮುಂಜಾನೆ 4.33 ರ ಸುಮಾರಿಗೆ 4.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಎಕ್ಸ್​ನಲ್ಲಿ ಪೋಸ್ಟ್​ ಮಾಡಿದೆ.

Ladakh Earthquake: ಲಡಾಖ್​ನಲ್ಲಿ 4.5 ತೀವ್ರತೆಯ ಭೂಕಂಪ
ಭೂಕಂಪ
Follow us on

ಲಡಾಖ್​ನಲ್ಲಿ ಇಂದು ಭೂಕಂಪ(Earthquake)ದ ಅನುಭವವಾಗಿದೆ, ಜನರು ಭಯಭೀತರಾಗಿದ್ದಾರೆ. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.5 ಎಂದು ಅಳೆಯಲಾಗಿದೆ. ಲಡಾಖ್ ಮತ್ತು ಲೇಹ್‌ನಲ್ಲಿ ಮುಂಜಾನೆ 4.33 ರ ಸುಮಾರಿಗೆ 4.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಎಕ್ಸ್​ನಲ್ಲಿ ಪೋಸ್ಟ್​ ಮಾಡಿದೆ.

ಭೂಕಂಪದ ಕೇಂದ್ರಬಿಂದು ಐದು ಕಿಲೋಮೀಟರ್ ಆಳದಲ್ಲಿದೆ ಎಂದು ಹೇಳಲಾಗಿದೆ. ಹಿಮಾಲಯ ಶ್ರೇಣಿಯಲ್ಲಿನ ಟೆಕ್ಟೋನಿಕ್ ಪ್ಲೇಟ್ ಅಸ್ಥಿರವಾಗಿದೆ, ಈ ಕಾರಣದಿಂದಾಗಿ, ಅಂತಹ ಭೂಕಂಪಗಳು ದೀರ್ಘಕಾಲದವರೆಗೆ ಸಂಭವಿಸುತ್ತಲೇ ಇರುತ್ತವೆ ಎಂದು ನಾವು ಐಐಟಿ ಕಾನ್ಪುರದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಪ್ರೊಫೆಸರ್ ಜಾವೇದ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರ, ಲಡಾಖ್, ನೇಪಾಳ, ಉತ್ತರಾಖಂಡ, ಹಿಮಾಚಲ ಪ್ರದೇಶದಲ್ಲಿ ಸಂಭವಿಸುವ ಭೂಕಂಪಗಳ ಪರಿಣಾಮವು ಕೆಲವೊಮ್ಮೆ ದೆಹಲಿ NCR ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿಯೂ ಕಂಡುಬರುತ್ತದೆ.

ಮತ್ತಷ್ಟು ಓದಿ: Taiwan Earthquake: ತೈವಾನ್​ನಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ

ಭೂಕಂಪಗಳನ್ನು ರಿಕ್ಟರ್ ಮಾಪಕವನ್ನು ಬಳಸಿ ಅಳೆಯಲಾಗುತ್ತದೆ. ಇದನ್ನು ರಿಕ್ಟರ್ ಮ್ಯಾಗ್ನಿಟ್ಯೂಡ್ ಟೆಸ್ಟ್ ಸ್ಕೇಲ್ ಎಂದು ಕರೆಯಲಾಗುತ್ತದೆ. ಭೂಕಂಪಗಳನ್ನು ರಿಕ್ಟರ್ ಮಾಪಕದಲ್ಲಿ 1 ರಿಂದ 9 ರವರೆಗೆ ಅಳೆಯಲಾಗುತ್ತದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ