Ladakh Earthquake: ಲಡಾಖ್​ನ ಲೇಹ್​ನಲ್ಲಿ 3.4 ತೀವ್ರತೆಯ ಭೂಕಂಪ

ಲಡಾಖ್​ನ ಲೇಹ್​ನಲ್ಲಿ 3.4 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ. ಭೂಕಂಪದ 5 ಕಿ.ಮೀ ಆಳದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

Ladakh Earthquake: ಲಡಾಖ್​ನ ಲೇಹ್​ನಲ್ಲಿ 3.4 ತೀವ್ರತೆಯ ಭೂಕಂಪ
ಭೂಕಂಪImage Credit source: Mint
Follow us
|

Updated on:Jan 30, 2024 | 8:24 AM

ಲಡಾಖ್​ನ ಲೇಹ್​ನಲ್ಲಿ 3.4 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ. ಭೂಕಂಪದ 5 ಕಿ.ಮೀ ಆಳದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಸುದ್ದಿ ಸಂಸ್ಥೆ ಎಎನ್‌ಐ ಈ ಮಾಹಿತಿ ನೀಡಿದೆ. ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿದೆಯೇ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಭೂಕಂಪವು ಲಡಾಖ್ ಪ್ರದೇಶದಲ್ಲಿ ಬೆಳಗ್ಗೆ 5.39 ಕ್ಕೆ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು 35.27 ರ ಅಕ್ಷಾಂಶ ಮತ್ತು 75.40 ರ ರೇಖಾಂಶದಲ್ಲಿದೆ. ಸದ್ಯ ಈ ಭೂಕಂಪದಿಂದ ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿಯಾಗಿಲ್ಲ.

ಬೆಳಗ್ಗೆ ಲಡಾಖ್‌ನಲ್ಲಿ ಭೂಕಂಪ ಸಂಭವಿಸಿದಾಗ, ಹೆಚ್ಚಿನ ಜನರು ತಮ್ಮ ಮನೆಗಳಲ್ಲಿ ಮಲಗಿದ್ದರು. ನಡುಕ ಅನುಭವಿಸಿದ ಕೆಲವರು ಮನೆಯಿಂದ ಹೊರಗೆ ಬಂದರು. ಯಾವುದೇ ಹಾನಿಯಾಗಿಲ್ಲ ಎಂದು ವಿಪತ್ತು ಇಲಾಖೆ ತಿಳಿಸಿದೆ. ಕಳೆದ ಕೆಲವು ದಿನಗಳಿಂದ ಕೆಲವೆಡೆ ನಿರಂತರವಾಗಿ ಭೂಕಂಪನದ ಅನುಭವವಾಗುತ್ತಿದೆ.

ಭೂಕಂಪದ ಅಪಾಯವನ್ನು ಗಮನದಲ್ಲಿಟ್ಟುಕೊಂಡು, ಪ್ರದೇಶಗಳನ್ನು ವಿವಿಧ ವಲಯಗಳಲ್ಲಿ ಇರಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಭೂಕಂಪನ ವಲಯಗಳು 4 ಮತ್ತು 5 ರಲ್ಲಿ ಬರುತ್ತವೆ. ಅಂದರೆ, ಈ ಪ್ರದೇಶಗಳಲ್ಲಿ ಭೂಕಂಪದ ಅಪಾಯವು ತುಂಬಾ ಹೆಚ್ಚಾಗಿದೆ.

ಮತ್ತಷ್ಟು ಓದಿ: Afghanistan Earthquake: ಅಫ್ಘಾನಿಸ್ತಾನದಲ್ಲಿ ಮತ್ತೆ ಪ್ರಬಲ ಭೂಕಂಪ, 6.3 ತೀವ್ರತೆ ದಾಖಲು

ಸೋಮವಾರವೂ ಸಹ, ಕರ್ನಾಟಕದ ವಿಜಯಪುರ ಜಿಲ್ಲೆಯ ವಿವಿಧೆಡೆ ಮುಂಜಾನೆ ಲಘು ಭೂಕಂಪನದ ಅನುಭವವಾಯಿತು. ವಿಜಯಪುರ ಪಟ್ಟಣ ಹಾಗೂ ಬಸವನಬಾಗೇವಾಡಿ ತಾಲೂಕಿನ ಮನಗೋಳಿ ಪಟ್ಟಣದ ಕೆಲವೆಡೆ ಭೂಮಿ ಕಂಪಿಸಿದೆ. ಭಾನುವಾರ ಮಧ್ಯಾಹ್ನ ಕೊಯ್ನಾ ಅಣೆಕಟ್ಟಿನಿಂದ ಸುಮಾರು 16 ಕಿ.ಮೀ ದೂರದಲ್ಲಿ 3.1 ತೀವ್ರತೆಯ ಲಘು ಕಂಪನದ ಅನುಭವವಾಗಿದೆ.

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೊಯ್ನಾ ಅಣೆಕಟ್ಟಿನಲ್ಲಿ ಅಳವಡಿಸಲಾಗಿರುವ ಭೂಕಂಪನವನ್ನು ಅಳೆಯುವ ಉಪಕರಣದಿಂದ ಕಂಪನಗಳು ದಾಖಲಾಗಿವೆ. ಭೂಕಂಪದ ಕೇಂದ್ರಬಿಂದು ಕೊಯ್ನಾ ನದಿಯ ಜಲಾನಯನ ಪ್ರದೇಶದ ಹೆಲ್ವಾಕ್ ಗ್ರಾಮದ ಬಳಿ ಇತ್ತು. ಭೂಕಂಪದ ಕೇಂದ್ರಬಿಂದುವು ಭೂಮಿಯ ಮೇಲ್ಮೈಯಿಂದ 9 ಕಿಲೋಮೀಟರ್ ಕೆಳಗೆ ದಾಖಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:20 am, Tue, 30 January 24