Rajasthan Earthquake: ರಾಜಸ್ಥಾನದ ಜೈಪುರ​​ ಸುತ್ತಮುತ್ತ ಸರಣಿ ಭೂಕಂಪ, ಬೆಚ್ಚಿಬಿದ್ದ ಜನ

ರಾಜಸ್ಥಾನದ ಜೈಪುರ​​ ಸುತ್ತಮುತ್ತ ಇಂದು(ಜುಲೈ 21) ಸರಣಿ ಭೂಕಂಪ ಸಂಭವಿಸಿದ್ದು, ಸ್ಥಳೀಯ ಜನರು ಬೆಚ್ಚಿಬಿದ್ದಿದ್ದಾರೆ.

Rajasthan Earthquake: ರಾಜಸ್ಥಾನದ ಜೈಪುರ​​ ಸುತ್ತಮುತ್ತ ಸರಣಿ ಭೂಕಂಪ, ಬೆಚ್ಚಿಬಿದ್ದ ಜನ
ಸಾಂದರ್ಭಿಕ ಚಿತ್ರ
Edited By:

Updated on: Jul 21, 2023 | 9:26 AM

ಜೈಪುರ, (ಜುಲೈ 21): ರಾಜಸ್ಥಾನದ(Rajasthan) ಜೈಪುರ​​ ಸುತ್ತಮುತ್ತ ಇಂದು(ಜುಲೈ 21) ಸರಣಿ ಭೂಕಂಪ(earthquake)  ಸಂಭವಿಸಿದೆ. ರಿಕ್ಟರ್​​ ಮಾಪಕದಲ್ಲಿ ಕಂಪನದ ತೀವ್ರತೆ 4.4 ದಾಖಲಾಗಿದೆ. ಒಂದೇ ಗಂಟೆಯಲ್ಲಿ ಮೂರು ಬಾರಿ ಭೂಮಿ ಕಂಪಿಸಿದ್ದು,  ಈ ಸರಣಿ ಭೂಕಂಪದಿಂದ ನಿದ್ದೆಗಣ್ಣಲ್ಲಿದ್ದ ಸ್ಥಳೀಯ ಜನತೆ ಎದ್ದು ಕುಳಿತುಕೊಂಡಿದ್ದಾರೆ. ಅಲ್ಲದೇ ಮೇಲಿಂದ ಮೇಲೆ ಭೂಮಿ ಮೂರು ಬಾರಿ ಕಂಪಿಸಿದ್ದರಿಂದ ಜನ ಆತಂಕಗೊಂಡಿದ್ದಾರೆ.

ಭೂಮಿಯ ಪ್ರಬಲವಾಗಿ ಕಂಪಿಸಿದ್ದು, ನಿದ್ದೆಯಲ್ಲಿದ್ದ ಇಡೀ ಕುಟುಂಬವು ಎಚ್ಚರವಾಯಿತು. ಆದ್ರೆ, ಯಾವುದೇ ಹಾನಿಯಾಗಿ ಎಂದು ಸ್ಥಳೀಯ ನಿವಾಸಿ ವಿಕಾಸ್ ಎನ್ನುವವರು ಭೂಕಂಪ ಸಂಭವಿಸಿದ ಅನುಭವ ತಿಳಿಸಿದ್ದಾರೆ.


ಇನ್ನು ಮಣಿಪುರದ ಉಖ್ರುಲ್‌ ನಲ್ಲೂ ಸಹ ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:22 am, Fri, 21 July 23