Bay of Bengal: ಬಂಗಾಳಕೊಲ್ಲಿಯಲ್ಲಿ ಕಂಪಿಸಿದ ಭೂಮಿ; 3.9 ತೀವ್ರತೆ ದಾಖಲು

|

Updated on: Jun 05, 2023 | 12:43 PM

Earthquake:ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಇದೇ ಪ್ರದೇಶದಲ್ಲಿ ಕಳೆದ 7 ತಿಂಗಳಲ್ಲಿ ಕನಿಷ್ಠ ಮೂರು ಭೂಕಂಪ ಸಂಭವಿಸಿದೆ. ಇದಕ್ಕೂ ಮೊದಲು ಜನವರಿ 1, 2023 ರಂದು ರಿಕ್ಟರ್ ಮಾಪಕದಲ್ಲಿ 4.5 ರ ತೀವ್ರತೆಯ ಭೂಕಂಪ ಇಲ್ಲಿ ಸಂಭವಿಸಿದ್ದು 36 ಕಿಲೋಮೀಟರ್ ಆಳದಲ್ಲಿ ಭೂಮಿ ಕಂಪಿಸಿತ್ತು

Bay of Bengal: ಬಂಗಾಳಕೊಲ್ಲಿಯಲ್ಲಿ ಕಂಪಿಸಿದ ಭೂಮಿ; 3.9 ತೀವ್ರತೆ ದಾಖಲು
ಭೂಕಂಪ
Follow us on

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (National Center for Seismology) ಪ್ರಕಾರ ಸೋಮವಾರ ಬೆಳಗ್ಗೆ ಬಂಗಾಳ ಕೊಲ್ಲಿಯಲ್ಲಿ (Bay of Bengal) 3.9 ತೀವ್ರತೆಯ ಭೂಕಂಪ (earthquake)ಸಂಭವಿಸಿದೆ. ಇದರ ಕೇಂದ್ರಬಿಂದು ಮ್ಯಾನ್ಮಾರ್ ಬಳಿ ಬಂಗಾಳ ಕೊಲ್ಲಿಯ ಕೆಳಗೆ ಇದೆ. ಭೂಕಂಪವು 15.32 ಅಕ್ಷಾಂಶ ಮತ್ತು 92.84 ರೇಖಾಂಶದಲ್ಲಿ ಕೇಂದ್ರೀಕೃತವಾಗಿತ್ತು. 10 ಕಿಲೋಮೀಟರ್ ಆಳವಿರುವ ಇದು ಭಾರತದ ಬಂಗಾಳ ಕೊಲ್ಲಿಯಲ್ಲಿ ಸಂಭವಿಸಿದೆ. 2023 ಜೂನ್ 05ರಂದು 07:40:23ಕ್ಕೆ 3.9 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು15.32 ಅಕ್ಷಾಂಶ ಮತ್ತು 92.84 ರೇಖಾಂಶದಲ್ಲಿದ್ದು 10 ಕಿಮೀ ಆಳಹೊಂದಿದೆ. ಇದು ಬಂಗಾಳಕೊಲ್ಲಿಯಲ್ಲಿ ಕೇಂದ್ರ ಬಿಂದು ಇದೆ ಎಂದು ಎನ್ ಸಿಎಸ್ ಟ್ವೀಟ್ ಮಾಡಿದೆ.

ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಇದೇ ಪ್ರದೇಶದಲ್ಲಿ ಕಳೆದ 7 ತಿಂಗಳಲ್ಲಿ ಕನಿಷ್ಠ ಮೂರು ಭೂಕಂಪ ಸಂಭವಿಸಿದೆ. ಇದಕ್ಕೂ ಮೊದಲು ಜನವರಿ 1, 2023 ರಂದು ರಿಕ್ಟರ್ ಮಾಪಕದಲ್ಲಿ 4.5 ರ ತೀವ್ರತೆಯ ಭೂಕಂಪ ಇಲ್ಲಿ ಸಂಭವಿಸಿದ್ದು 36 ಕಿಲೋಮೀಟರ್ ಆಳದಲ್ಲಿ ಭೂಮಿ ಕಂಪಿಸಿತ್ತು. ಬೆಳಿಗ್ಗೆ 10:57 ಭೂಮಿ ಕಂಪಿಸಿದ್ದು ಅದೇ ದಿನ, ರಿಕ್ಟರ್ ಮಾಪಕದಲ್ಲಿ 3.8 ರ ತೀವ್ರತೆಯ ಮತ್ತೊಂದು ಭೂಕಂಪವು ಹರಿಯಾಣದ ಜಜ್ಜರ್‌ನ ವಾಯುವ್ಯದಲ್ಲಿ 1:19ಕ್ಕೆ ಸಂಭವಿಸಿದೆ.

ಕಳೆದ ವರ್ಷ ಡಿಸೆಂಬರ್ 5ರಂದು ರಿಕ್ಟರ್ ಮಾಪಕದಲ್ಲಿ 5.1 ರ ತೀವ್ರತೆಯ ಭೂಕಂಪ ಸಂಭವಿಸಿದೆ.ಬಂಗಾಳಕೊಲ್ಲಿಯಲ್ಲಿ 10 ಕಿ.ಮೀ ಆಳದಲ್ಲಿ ಬೆಳಗ್ಗೆ 8:32ರ ಸುಮಾರಿಗೆ ಈ ಭೂಕಂಪ ಸಂಭವಿಸಿದೆ.

ಇದನ್ನೂ ಓದಿ: Odisha Train Accident: ಒಡಿಶಾದ ರೈಲ್ವೆ ಟ್ರ್ಯಾಕ್​ಗಳ​ ಮೇಲೆ ಜನರಂತೆಯೇ ಅನಾಥವಾಗಿ ಬಿದ್ದಿದ್ದವು, ಬೆಂಗಾಲಿ ಕವಿತೆಯ ಸಾಲುಗಳು

ಈ ಬಾರಿ, ಭೂಕಂಪದ ಸ್ಥಳವು ಒಡಿಶಾಕ್ಕೆ ಸಮೀಪದಲ್ಲಿದೆ, ಏಕೆಂದರೆ ಇದು ಪುರಿ (ಪೂರ್ವ) ಮತ್ತು ಭುವನೇಶ್ವರ (ಪೂರ್ವ-ಆಗ್ನೇಯ) ನಿಂದ 421 ಕಿಮೀ ಮತ್ತು 434 ಕಿಮೀ ದೂರದಲ್ಲಿದೆ. ಆ ಸಮಯದಲ್ಲಿ, ಢಾಕಾ ಮತ್ತು ಬಾಂಗ್ಲಾದೇಶದ ಇತರ ಭಾಗಗಳಲ್ಲಿ ಕಂಪನದ ಅನುಭವವಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:40 pm, Mon, 5 June 23