AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Telangana Earthquake: ತೆಲಂಗಾಣದಲ್ಲಿ 5.3 ತೀವ್ರತೆಯ ಭೂಕಂಪ

ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಬುಧವಾರ (ಡಿಸೆಂಬರ್ 4) ಬೆಳಗ್ಗೆ 5.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಹೈದರಾಬಾದ್‌ನಾದ್ಯಂತ ಕಂಪನಗಳ ಅನುಭವಗಳಾಗಿವೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪವು ಬೆಳಗ್ಗೆ 7:27ರ ವೇಳೆಗೆ ಸಂಭವಿಸಿದೆ, ಇದು ಅಲ್ಲಿನ ಪ್ರದೇಶಗಳಲ್ಲಿನ ನಿವಾಸಿಗಳಲ್ಲಿ ಭಯವನ್ನು ಉಂಟುಮಾಡಿತು. ಯಾವುದೇ ಪ್ರಾಣಹಾನಿ ಅಥವಾ ಗಮನಾರ್ಹ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ.

ತೆಲಂಗಾಣImage Credit source: Hindustan Times
Follow us
ನಯನಾ ರಾಜೀವ್
|

Updated on:Dec 04, 2024 | 9:06 AM

ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಬುಧವಾರ (ಡಿಸೆಂಬರ್ 4) ಬೆಳಗ್ಗೆ 5.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಹೈದರಾಬಾದ್‌ನಾದ್ಯಂತ ಕಂಪನಗಳ ಅನುಭವಗಳಾಗಿವೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪವು ಬೆಳಗ್ಗೆ 7:27ರ ವೇಳೆಗೆ ಸಂಭವಿಸಿದೆ, ಇದು ಅಲ್ಲಿನ ಪ್ರದೇಶಗಳಲ್ಲಿನ ನಿವಾಸಿಗಳಲ್ಲಿ ಭಯವನ್ನು ಉಂಟುಮಾಡಿತು. ಯಾವುದೇ ಪ್ರಾಣಹಾನಿ ಅಥವಾ ಗಮನಾರ್ಹ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ.

ಅಧಿಕಾರಿಗಳು ಪ್ರಸ್ತುತ ಪರಿಸ್ಥಿತಿಯನ್ನು ನಿರ್ಣಯಿಸುತ್ತಿದ್ದಾರೆ, ಆದರೆ ತಜ್ಞರು ಜಾಗರೂಕರಾಗಿರಲು ಮತ್ತು ಭೂಕಂಪಗಳ ಸಮಯದಲ್ಲಿ ಕಿಕ್ಕಿರಿದ ಅಥವಾ ಅಸುರಕ್ಷಿತ ಕಟ್ಟಡಗಳಿಂದ ದೂರವಿರುವಂತೆ ತಿಳಿಸಲಾಗಿದೆ. ತೆಲಂಗಾಣದಲ್ಲಿ ಭೂಕಂಪಗಳಂತಹ ಘಟನೆಗಳು ತೀರಾ ಅಪರೂಪ.

ಹೈದರಾಬಾದ್, ಹನ್ಮಕೊಂಡ, ವಾರಂಗಲ್, ಖಮ್ಮಂ, ರಂಗಾರೆಡ್ಡಿ, ಹೈದರಾಬಾದ್ ಮತ್ತು ಭದ್ರಾದ್ರಿ ಕೊಟ್ಟಗುಡೆಂನಲ್ಲಿ ಇದೇ ರೀತಿಯ ಕಂಪನದ ಅನುಭವವಾಗಿದೆ. 2024 ರ ಮಾರ್ಚ್ 14 ರಂದು ಆಂಧ್ರಪ್ರದೇಶದಲ್ಲಿ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 3.9ರಷ್ಟು ತೀವ್ರತೆ ದಾಖಲಾಗಿತ್ತು.

ಅಕ್ಟೋಬರ್ 12 ರಾತ್ರಿ ಭೂಕಂಪ 2022 ಸಂಭವಿಸಿತ್ತು.ಆದಿಲಾಬಾದ್ ಜಿಲ್ಲೆಯ ಉಟ್ನೂರಿನಲ್ಲಿ ಭೂಮಿ ಕಂಪಿಸಿದ ಹಿನ್ನೆಲೆಯಲ್ಲಿ ಜನರು ಆತಂಖಗೊಂಡಿದ್ದರು. 13 ಜುಲೈ 2022 ರಂದು ನೆಲ್ಲೂರು ಮತ್ತು ಕಡಪ ಜಿಲ್ಲೆಗಳಲ್ಲಿ ಭೂಕಂಪ ಸಂಭವಿಸಿತ್ತು. ಕಂಡ್ರಿಕ, ಪಡಮಟ ನಾಯ್ಡುಪಲ್ಲಿ, ಚಿಲಕಪಾಡು, ಕೃಷ್ಣಾಪುರ ಮತ್ತಿತರ ಗ್ರಾಮಗಳಲ್ಲಿ ಭೂಕಂಪ ಸಂಭವಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:36 am, Wed, 4 December 24

Daily horoscope: ಇಂದು ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲ

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು

ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ

ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ

ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ

ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ

ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ

ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ

ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?