ಉತ್ತರಕಾಶಿಯಲ್ಲಿ ತಡರಾತ್ರಿ ಭೂಕಂಪ; ರಿಕ್ಟರ್​ ಮಾಪಕದಲ್ಲಿ 3.3ರಷ್ಟು ತೀವ್ರತೆ ದಾಖಲು

| Updated By: Lakshmi Hegde

Updated on: Feb 05, 2022 | 8:00 AM

ಫೆ.1ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ 3.3 ಮ್ಯಾಗ್ನಿಟ್ಯೂಡ್​ಗಳಷ್ಟು ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಬೆಳಗ್ಗೆ 9.47ರ ಹೊತ್ತಿಗೆ ಭೂಮೇಲ್ಮೈನಿಂದ 5ಕಿಮೀ ಆಳದಲ್ಲಿ ಭೂಮಿ ನಡುಗಿತ್ತು ಎಂದು ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ.

ಉತ್ತರಕಾಶಿಯಲ್ಲಿ ತಡರಾತ್ರಿ ಭೂಕಂಪ; ರಿಕ್ಟರ್​ ಮಾಪಕದಲ್ಲಿ 3.3ರಷ್ಟು ತೀವ್ರತೆ ದಾಖಲು
ಪ್ರಾತಿನಿಧಿಕ ಚಿತ್ರ
Follow us on

ಉತ್ತರಾಖಂಡ್​​ನ ಉತ್ತರಕಾಶಿ( Uttarkashi)ಯಲ್ಲಿ ಭೂಕಂಪನವಾಗಿದ್ದು, ರಿಕ್ಟರ್ ಮಾಪಕ(Richter Scale)ದಲ್ಲಿ 3.6ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ. ತಡರಾತ್ರಿ 3.15ರ ಹತ್ತಿಗೆ ಭೂಮಿಯ 10 ಕಿಮೀ ಆಳದಲ್ಲಿ ಭೂಕಂಪನ ಉಂಟಾಗಿದ್ದು, ಇದರ ಕೇಂದ್ರಬಿಂದು ಉತ್ತರ ಕಾಶಿಯ ವಾಯುವ್ಯ ಭಾಗದಲ್ಲಿ 58 ಕಿಮೀ ದೂರದಲ್ಲಿದೆ ಎಂದೂ ಕೇಂದ್ರ ಮಾಹಿತಿ ನೀಡಿದೆ. ಯಾವುದೇ ಆಸ್ತಿ-ಪಾಸ್ತಿ ಹಾನಿ, ಪ್ರಾಣ ಹಾನಿಯ ವರದಿಯಾಗಿಲ್ಲ.

ಫೆ.1ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ 3.3 ಮ್ಯಾಗ್ನಿಟ್ಯೂಡ್​ಗಳಷ್ಟು ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಬೆಳಗ್ಗೆ 9.47ರ ಹೊತ್ತಿಗೆ ಭೂಮೇಲ್ಮೈನಿಂದ 5ಕಿಮೀ ಆಳದಲ್ಲಿ ಭೂಮಿ ನಡುಗಿತ್ತು ಎಂದು ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ. ಜಮ್ಮು-ಕಾಶ್ಮೀರದಲ್ಲೂ ಇತ್ತೀಚೆಗೆ ಪದೇಪದೆ ಭೂಕಂಪನ ಉಂಟಾಗುತ್ತಿದ್ದು, ಜನವರಿ 22ರಂದು ಇಲ್ಲಿನ ಡೋಡಾ ಜಿಲ್ಲೆಯಲ್ಲಿ 4.0 ತೀವ್ರತೆಯಲ್ಲಿ ಭೂಮಿ ನಡುಗಿದೆ. ತಡ ರಾತ್ರಿ 2.53ರ ಹೊತ್ತಿಗೆ ಭೂಮೇಲ್ಮೈಯಿಂದ 10 ಕಿಮೀ ಆಳದಲ್ಲಿ ಭೂಮಿ ನಡುಗಿತ್ತು ಎಂದು ಅಲ್ಲಿನ ವಿಪತ್ತು ನಿರ್ವಹಣಾ ಇಲಾಖೆ ನಿರ್ದೇಶಕ ಅಮೀರ್ ಅಲಿ ತಿಳಿಸಿದ್ದರು.

ಇದನ್ನೂ ಓದಿ: ಶ್ರೀನಗರದಲ್ಲಿ ಪೊಲೀಸರಿಂದ ಎನ್‌ಕೌಂಟರ್: ಕಾನ್ಸ್‌ಟೇಬಲ್‌ ಹತ್ಯೆ ಮಾಡಿದ್ದ ಉಗ್ರ ಸಾವು

Published On - 7:54 am, Sat, 5 February 22