Lalit Goyal ಅಕ್ರಮ ಹಣ ವರ್ಗಾವಣೆ: ಐಆರ್​​ಇಒ ವ್ಯವಸ್ಥಾಪಕ ನಿರ್ದೇಶಕ ಲಲಿತ್ ಗೋಯಲ್ ಬಂಧಿಸಿದ ಇಡಿ

TV9 Digital Desk

| Edited By: Rashmi Kallakatta

Updated on:Nov 16, 2021 | 1:13 PM

IREO 2010ರಿಂದ ಕಂಪನಿಯ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ಉಲ್ಲಂಘನೆ ಪ್ರಕರಣವನ್ನು ಇಡಿ ತನಿಖೆ ನಡೆಸುತ್ತಿರುವಾಗ, ಅದರ ಚಂಡೀಗಢ ಶಾಖೆಯಲ್ಲಿ ಏಜೆನ್ಸಿ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಲಿತ್ ಗೋಯಲ್ ಅವರನ್ನು ಪ್ರಶ್ನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Lalit Goyal ಅಕ್ರಮ ಹಣ ವರ್ಗಾವಣೆ: ಐಆರ್​​ಇಒ ವ್ಯವಸ್ಥಾಪಕ ನಿರ್ದೇಶಕ ಲಲಿತ್ ಗೋಯಲ್ ಬಂಧಿಸಿದ ಇಡಿ
ಲಲಿತ್ ಗೋಯಲ್

ಮುಂಬೈ: ಅಕ್ರಮ ಹಣ ವರ್ಗಾವಣೆ (money laundering) ಪ್ರಕರಣಕ್ಕೆ ಸಂಬಂಧಿಸಿದಂತೆ ಐಆರ್​​ಇಒ(Ireo) ಗ್ರೂಪ್‌ನ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಲಲಿತ್ ಗೋಯಲ್ (Lalit Goyal)ಅವರನ್ನು ಜಾರಿ ನಿರ್ದೇಶನಾಲಯ (Enforcement Directorate) ಮಂಗಳವಾರ ಬಂಧಿಸಿದೆ. ನಾಲ್ಕು ದಿನಗಳ ವಿಚಾರಣೆಯ ನಂತರ ಗೋಯಲ್ ಅವರನ್ನು ಬಂಧಿಸಲಾಯಿತು. 2010 ರಿಂದ ಕಂಪನಿಯ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ಉಲ್ಲಂಘನೆ ಪ್ರಕರಣವನ್ನು ಇಡಿ ತನಿಖೆ ನಡೆಸುತ್ತಿರುವಾಗ, ಅದರ ಚಂಡೀಗಢ ಶಾಖೆಯಲ್ಲಿ ಏಜೆನ್ಸಿ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಯಲ್ ಅವರನ್ನು ಪ್ರಶ್ನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಗುರುವಾರ ವಿದೇಶಕ್ಕೆ ತೆರಳಲು ವಿಮಾನ ಹತ್ತುವಾಗ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೋಯಲ್ ಅವರನ್ನು ವಲಸೆ ಅಧಿಕಾರಿಗಳು ಬಂಧಿಸಿದ್ದರು. ಅವರಿಗೆ ನೀಡಿದ್ದ ಲುಕ್‌ಔಟ್ ಸುತ್ತೋಲೆ ಆಧರಿಸಿ ಈ ಬಂಧನ ನಡೆದಿದೆ.

ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಿದಾಗಿನಿಂದ ನಾವು ವಿಚಾರಣೆ ನಡೆಸುತ್ತಿದ್ದೇವೆ. ಅವರು ಪ್ರತಿದಿನ ಇಡಿ ಮುಂದೆ ವಿಚಾರಣೆಗೆ ಹಾಜರಾಗುತ್ತಿದ್ದರು ಆದರೆ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಅವರು ಸಹಕರಿಸದ ಕಾರಣ  ಅವರನ್ನು ಬಂಧಿಸಬೇಕಾಯಿತು ಎಂದು ಹಿರಿಯ ಇಡಿ ಅಧಿಕಾರಿ ಹೇಳಿದರು.  ಅವರನ್ನು ಚಂಡೀಗಢಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿ ಅವರನ್ನು ಸಕ್ಷಮ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್ 12 ರಂದು ಪ್ರಕಟವಾದ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯಲ್ಲಿ ಕಂಪನಿಯು ಅಮೆರಿಕನ್ ಡಾಲರ್  77 ಮಿಲಿಯನ್ ಅನ್ನು ಆಫ್‌ಶೋರ್ ಟ್ರಸ್ಟ್‌ಗಳಿಗೆ ವರ್ಗಾಯಿಸಿದೆ ಎಂದು ಬಹಿರಂಗಪಡಿಸಿದೆ. ಆದರೆ ಮನೆ ಖರೀದಿದಾರರು ಮತ್ತು ಹೂಡಿಕೆದಾರರು ತಮ್ಮ ಹಣವನ್ನು ಹಿಂದಿರುಗಿಸುವಂತೆ ಕಂಪನಿಯ ವಿರುದ್ಧ ಅಧಿಕಾರಿಗಳು ಮತ್ತು ನ್ಯಾಯಾಲಯಗಳನ್ನು ಸಂಪರ್ಕಿಸಿದ್ದಾರೆ.

IREO ಗ್ರೂಪ್ ನ ಪ್ರಮುಖ ಸಂಸ್ಥೆಯಾದ ಐಆರ್​​ಇಒ ಪ್ರೈವೇಟ್ ಲಿಮಿಟೆಡ್ 2018-19 ರಲ್ಲಿ 500 ಕೋಟಿ ರೂ. ನಷ್ಟದಲ್ಲಿದೆ.

ಇಂಡಿಯನ್ ಎಕ್ಸ್‌ಪ್ರೆಸ್‌ನ ಪಂಡೋರಾ ಪೇಪರ್ಸ್ ಬಹಿರಂಗಪಡಿಸುವಿಕೆಯ ಪ್ರಕಾರ ಗ್ರೂಪ್ ಸಹ-ಸಂಸ್ಥಾಪಕ ಲಲಿತ್ ಗೋಯಲ್, ಅವರ ಸಹೋದರಿ ಬಿಜೆಪಿ ನಾಯಕ ಸುಧಾಂಶು ಮಿತ್ತಲ್ ಅವರನ್ನು ವಿವಾಹವಾಗಿದ್ದಾರೆ. ಅಂದಾಜು ಅಮೆರಿಕನ್ ಡಾಲರ್ 77 ಮಿಲಿಯನ್ ಮೌಲ್ಯದ ಆಸ್ತಿಗಳು, ಹೂಡಿಕೆಗಳು ಮತ್ತು ಷೇರುಗಳನ್ನು ಆಫ್‌ಶೋರ್ ಟ್ರಸ್ಟ್ ರಚನೆಗೆ ವರ್ಗಾಯಿಸಿದ್ದಾರೆ. ಗುಂಪು ತೊಂದರೆಗೆ ಸಿಲುಕುವ ಮುಂಚೆಯೇ ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ ನೋಂದಾಯಿಸಲಾದ ನಾಲ್ಕು ಘಟಕಗಳನ್ನು ಒಳಗೊಂಡಿತ್ತು. ಜಾಗತಿಕ ಕಾರ್ಪೊರೇಟ್ ಸೇವಾ ಕಂಪನಿಯಾದ ಟ್ರೈಡೆಂಟ್ ಟ್ರಸ್ಟ್‌ನ ಆಂತರಿಕ ದಾಖಲೆಗಳಲ್ಲಿ ಇದು ಬಹಿರಂಗವಾಗಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಈ ದಾಖಲೆಗಳ ಪ್ರಕಾರ ಗೋಯಲ್ ಅವರ ನಿವಾಸದ ವಿಳಾಸವನ್ನು ಮರೀನಾ ಬೇ ರೆಸಿಡೆನ್ಸ್, 18 ಮರೀನಾ ಬೌಲೆವಾರ್ಡ್, #45-08, ಸಿಂಗಾಪುರ ಎಂದು ಉಲ್ಲೇಖಿಸಲಾಗಿದೆ. ಇವರು ಸ್ಟ್ಯಾಂಡರ್ಡ್ ಚಾರ್ಟರ್ಡ್ ಟ್ರಸ್ಟ್ (ಗುರ್ನ್‌ಸಿ) ಲಿಮಿಟೆಡ್‌ನೊಂದಿಗೆ ಟ್ರಸ್ಟಿಯಾಗಿ ಟ್ಯಾಕ್ಸ್ ಹೆವೆನ್ ಗುರ್ನಸಿಯಲ್ಲಿ ಓಕ್ ವೆನೀರ್ ಟ್ರಸ್ಟ್ ಅನ್ನು ಸ್ಥಾಪಿಸಿದ್ದರು. ಗೋಯಲ್ ಅವರು ಓಕ್ ವೆನೀರ್ ಟ್ರಸ್ಟ್‌ನ ‘ಸೆಟ್ಲರ್’ ಆಗಿದ್ದರು. ಅವರು ಮತ್ತು ಸ್ಟ್ಯಾಂಡರ್ಡ್ ಚಾರ್ಟರ್ಡ್ ಟ್ರಸ್ಟ್ (Guernsey) ಲಿಮಿಟೆಡ್ – ಓಕ್ ವೆನೀರ್‌ನ ಟ್ರಸ್ಟಿಯಾಗಿರುವುದರಿಂದ ನಾಲ್ಕು ಸಾಗರೋತ್ತರ ಘಟಕಗಳ ‘ಪ್ರಯೋಜನಕಾರಿ ಮಾಲೀಕರು’, ಇವೆಲ್ಲವನ್ನೂ ಆಸ್ತಿ, ಷೇರುಗಳು ಮತ್ತು ಹೂಡಿಕೆಗಳನ್ನು ಹೊಂದಲು ಸ್ವಾಧೀನಪಡಿಸಿಕೊಳ್ಳಲಾಗಿದೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್ ಅಕ್ಟೋಬರ್ 12 ರ ವರದಿಗೆ ಪ್ರತಿಕ್ರಿಯಿಸಿದ ಗೋಯಲ್  ಪರವಾಗಿ ವಾದಿಸುವ ಕಾನೂನು ಸಂಸ್ಥೆ ಶಾಸ್ತ್ರ ಲೀಗಲ್,  ಭಾರತೀಯ ತೆರಿಗೆ ಅಧಿಕಾರಿಗಳಿಗೆ ಸಲ್ಲಿಸಿದ ಇತ್ತೀಚಿನ ಮೌಲ್ಯಮಾಪನದ ಪ್ರಕಾರ ಅವರು ಅನಿವಾಸಿ ಭಾರತೀಯರಾಗಿದ್ದಾರೆ. ” ಲಲಿತ್ ಗೋಯಲ್ ಅವರು ಮಾಡಿದ ಎಲ್ಲಾ ಹೂಡಿಕೆಗಳು ಕಾನೂನುಬದ್ಧವಾಗಿವೆ ಮತ್ತು ಮನೆ ಖರೀದಿದಾರರಿಂದ ಯಾವುದೇ ಹಣವನ್ನು ಹೂಡಿಕೆ ಮಾಡಲಾಗಿಲ್ಲ ಅಥವಾ “ಕಾನೂನುಬಾಹಿರವಾಗಿ” ಸೋರಿಕೆ ಮಾಡಲಾಗಿಲ್ಲ ಎಂದು ಪುನರುಚ್ಚರಿಸಲಾಗಿದೆ” ಎಂದು ಹೇಳಿದೆ.

ಇದನ್ನೂ ಓದಿ: Audit Diwas ಆಡಿಟ್ ದಿವಸ್‌ ಅಂಗವಾಗಿ ಸಿಎಜಿ ಕಚೇರಿಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada