ಮಧ್ಯರಾತ್ರಿ ಹಸುವನ್ನು ರಕ್ಷಿಸಿದ ಪಂಜಾಬ್ ಮುಖ್ಯಮಂತ್ರಿ; ಸಾಮಾಜಿಕ ಮಾಧ್ಯಮದಲ್ಲಿ ಚನ್ನಿ ಕಾರ್ಯಕ್ಕೆ ಶ್ಲಾಘನೆ
ನಾನು ಮನೆಗೆ ಹಿಂತಿರುಗುವಾಗ, ಹಸು ಒಂದು ಹೊಂಡದಲ್ಲಿ ಬಿದ್ದಿರುವುದು ಕಾಣಿಸಿದೆ ರಕ್ಷಣೆಗಾಗಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ" ಎಂದು ಚನ್ನಿ ಅದೇ ದಿನ ಮಧ್ಯರಾತ್ರಿಯ ಸುಮಾರಿಗೆ ಟ್ವೀಟ್ ಮಾಡಿ ವಿಡಿಯೊ ಹಂಚಿಕೊಂಡಿದ್ದಾರೆ.
ಚಂಡೀಗಢ: ಪಂಜಾಬ್ (Punjab )ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ(Charanjit Singh Channi) ಅವರು ಭಾನುವಾರ ರಾತ್ರಿ ತಮ್ಮ ಮನೆಗೆ ಹೋಗುವಾಗ ಮಾಡಿದ ಕಾರ್ಯ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವನ್ನುಂಟು ಮಾಡಿದೆ. ಟ್ವಿಟರ್‌ನಲ್ಲಿ ಶೇರ್ ಮಾಡಲಾದ ವಿಡಿಯೊದಲ್ಲಿ ಮುಖ್ಯಮಂತ್ರಿ ಚನ್ನಿ ಹಸುವನ್ನು ಕಂದಕದಿಂದ ರಕ್ಷಿಸುತ್ತಿರುವುದು ಕಾಣಿಸುತ್ತದೆ. “ನಾನು ಮನೆಗೆ ಹಿಂತಿರುಗುವಾಗ, ಹಸು ಒಂದು ಹೊಂಡದಲ್ಲಿ ಬಿದ್ದಿರುವುದು ಕಾಣಿಸಿದೆ ರಕ್ಷಣೆಗಾಗಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ” ಎಂದು ಚನ್ನಿ ಅದೇ ದಿನ ಮಧ್ಯರಾತ್ರಿಯ ಸುಮಾರಿಗೆ ಟ್ವೀಟ್ ಮಾಡಿ, 17 ನಿಮಿಷಗಳ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿಯವರು ಪಂಜಾಬಿಯಲ್ಲಿ ಹಸುವನ್ನು ಸುರಕ್ಷಿತವಾಗಿ ಹೊರಗೆ ತರಲು ಗುಂಪಿನ ಜತೆ ಚರ್ಚಿಸುತ್ತಿರುವುದು ವಿಡಿಯೊದಲ್ಲಿದೆ. ಹಸುವನ್ನು ಹೊರತೆಗೆಯಲು ಜನರ ಗುಂಪು ಹಗ್ಗಗಳನ್ನು ಬಳಸಿದಾಗ ಚನ್ನಿ ಅವರು ಟಾರ್ಚ್ ಹಿಡಿದಿರುವುದು ಕಾಣಿಸುತ್ತದೆ.
[Live] On my way back to the residence, a cow had fallen in a pit. Efforts are being made for the rescue https://t.co/PoHDK1S8Bu
— Charanjit S Channi (@CHARANJITCHANNI) November 14, 2021
ಪತ್ರಕರ್ತರಾದ ಮನ್ ಅಮನ್ ಸಿಂಗ್ ಛಿನಾ ಅವರ ಪೋಸ್ಟ್‌ನ ಪ್ರಕಾರ, ಚನ್ನಿ ಈ ಮಾತುಗಳನ್ನು ಹೇಳುತ್ತಾ ಹೊರಟರು: “ಚಾಂಗಾ ಮಾಸಿ, ಧ್ಯಾನ್ ರಖಿನ್, ಬಚ್ ಗಯಿ ತು (ಅದ್ಭುತ! ನೀವು ರಕ್ಷಿಸಲ್ಪಟ್ಟಿದ್ದೀರಿ. ಹುಷಾರು.)”
Chief Minister Charanjit Channi was on his way home last night when he saw a cow being rescued from a ditch. He stopped to help in efforts. After the animal was rescued Channi left saying “Changa Maasi, dhyaan rakhin, bach gayi tu”.
Sidhu has to match this. And more. pic.twitter.com/KJ6aX3xl1f
— Man Aman Singh Chhina (@manaman_chhina) November 15, 2021
ಚನ್ನಿ ಅವರ ವಿಡಿಯೊ 15,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 2,000 ಲೈಕ್‌ಗಳನ್ನು ಗಳಿಸಿದೆ. ಅನೇಕರು ಅವರ ಬಗ್ಗೆ ಪ್ರಶಂಸೆಯ ಸುರಿಮಳೆಗೈದರು. ಕೆಲವರು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರೊಂದಿಗೆ ಹೋಲಿಕೆಯನ್ನೂ ಮಾಡಿದರು.
ಮೂರು ಬಾರಿ ಶಾಸಕರಾಗಿದ್ದ 58 ವರ್ಷದ ಚನ್ನಿ ಅವರು ತಮ್ಮ ಪೂರ್ವವರ್ತಿ ಅಮರಿಂದರ್ ಸಿಂಗ್ ಅವರ ಹಠಾತ್ ನಿರ್ಗಮನವನ್ನು ಒಳಗೊಂಡ ಪ್ರಕ್ಷುಬ್ಧ ಘಟನೆಗಳ ನಂತರ ಸೆಪ್ಟೆಂಬರ್‌ನಲ್ಲಿ ಪಂಜಾಬ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ವಿಶೇಷವಾಗಿ ಅಮರಿಂದರ್ ಸಿಂಗ್ ಮತ್ತು ನವಜೋತ್ ಸಿಧು ನಡುವಿನ ದೀರ್ಘ ಕಾಲದ ಒಳಜಗಳದ ನಂತರ ಮುಂದಿನ ವರ್ಷದ ಆರಂಭದಲ್ಲಿ ಪಂಜಾಬ್ ಚುನಾವಣೆಗೆ ಪಕ್ಷದ ಪ್ರಚಾರವನ್ನು ಹೆಚ್ಚಿಸಬಹುದು ಎಂದು ಕಾಂಗ್ರೆಸ್ ಆಶಿಸುತ್ತದೆ.