Sheikh Shahjahan Arrest: ಸಂದೇಶಖಾಲಿ ಪ್ರಕರಣದ ಆರೋಪಿ ಶೇಖ್ ಷಹಜಹಾನ್ ಬಂಧಿಸಿದ ಇಡಿ

|

Updated on: Mar 30, 2024 | 9:34 PM

ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಭೂ ಕಬಳಿಸುತ್ತಿದ್ದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಟಿಎಂಸಿ ಮಾಜಿ ನಾಯಕ ಶೇಖ್ ಷಹಜಹಾನ್​ ಅವರನ್ನು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಸಿರ್ಹತ್ ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ಇಡಿ ಅಧಿಕಾರಿಗಳ ತಂಡವು ಜೈಲಿನೊಳಗೆ ವಿಚಾರಣೆ ನಡೆಸಿ ಬಂಧಿಸಿದೆ.

Sheikh Shahjahan Arrest: ಸಂದೇಶಖಾಲಿ ಪ್ರಕರಣದ ಆರೋಪಿ ಶೇಖ್ ಷಹಜಹಾನ್ ಬಂಧಿಸಿದ ಇಡಿ
ಟಿಎಂಸಿ ಮಾಜಿ ನಾಯಕ ಶೇಖ್ ಷಹಜಹಾನ್ ಬಂಧಿಸಿದ ಇಡಿ
Follow us on

ಕೋಲ್ಕತ್ತಾ, ಮಾ.30: ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಭೂ ಕಬಳಿಸುತ್ತಿದ್ದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಟಿಎಂಸಿ (TMC) ಮಾಜಿ ನಾಯಕ ಶೇಖ್ ಷಹಜಹಾನ್ (Sheikh Shahjahan)​ ಅವರನ್ನು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಸಿರ್ಹತ್ ನ್ಯಾಯಾಲಯದಿಂದ ಅನುಮತಿ ಪಡೆದು ಷಹಜಹಾನ್​ ಅವರನ್ನು ವಶಕ್ಕೆ ಪಡೆದು ನಾಲ್ಕು ಗಂಟೆ ತೀವ್ರ ವಿಚಾರಣೆ ನಡೆಸಲಾಗಿತ್ತು. ಇದೀಗ ಅವರನ್ನು ಬಂಧಿಸಲಾಗಿದ್ದು, ಸೋಮವಾರ ಇಡಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.

ಲೈಂಗಿಕ ಕಿರುಕುಳ ನೀಡಿ ಭೂಕಬಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶೇಖ್ ಷಹಜಹಾನ್ ವಿರುದ್ಧ ಸಂದೇಶಖಾಲಿಯಲ್ಲಿ ಮಹಿಳೆಯರು ಬೃಹತ್ ಪ್ರತಿಭಟನೆ ನಡೆಸಿದ್ದರು. ಹಿಂಸಾತ್ಮಕ ಪ್ರತಿಭಟನೆಯ ನಂತರ 55 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಷಹಜಹಾನ್​ ಅವರನ್ನು ಫೆಬ್ರವರಿ 29 ರಂದು ಬಂಧಿಸಲಾಗಿತ್ತು.

ಇದನ್ನೂ ಓದಿ: ಸಂದೇಶಖಾಲಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರ ನೋವನ್ನು ತಂದೆಯಂತೆ ತಾಳ್ಮೆಯಿಂದ ಆಲಿಸಿದ ಮೋದಿ

ಇದಕ್ಕೂ ಮೊದಲು ಜನವರಿ 5 ರಂದು, ಪಡಿತರ ಹಗರಣದಲ್ಲಿ ಷಹಜಹಾನ್​ ಅವರನ್ನು ಬಂಧಿಸಲು ಅವರ ನಿವಾಸಕ್ಕೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳ ತಂಡದ ಮೇಲೆ ಗುಂಪು ದಾಳಿ ನಡೆದಿತ್ತು. ನಂತರ ಷಹಜಹಾನ್ ಪರಾರಿಯಾಗಿದ್ದರು. ಕೇಂದ್ರೀಯ ಸಂಸ್ಥೆಯ ಅಧಿಕಾರಿಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ಶೇಖ್ ಷಹಜಹಾನ್ ಪ್ರಸ್ತುತ ಜೈಲಿನಲ್ಲಿದ್ದಾರೆ. ಮಾರ್ಚ್ 6 ರಂದು ದಾಳಿ ಪ್ರಕರಣವನ್ನು ಕೋಲ್ಕತ್ತಾ ಹೈಕೋರ್ಟ್ ಸಿಬಿಐಗೆ ವರ್ಗಾಯಿಸಿತ್ತು.

ಶೇಖ್ ಷಹಜಹಾನ್ 6 ವರ್ಷ ಅಮಾನತು

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅವರ ಭೂಮಿಯನ್ನು ಕಬಳಿಸಿದ ಸಂದೇಶ್​​ಖಾಲಿ ಪ್ರಕರಣದ ಪ್ರಮುಖ ಆರೋಪಿ ಶೇಖ್ ಷಹಜಹಾನ್ ಅವರನ್ನು 6 ವರ್ಷ ಪಕ್ಷದಿಂದ ಅಮಾನತುಗೊಳಿಸಿ ತೃಣಮೂಲ ಕಾಂಗ್ರೆಸ್ (TMC) ಆದೇಶಿಸಿದೆ. ಪಶ್ಚಿಮ ಬಂಗಾಳ ಪೊಲೀಸರು ಷಹಜಹಾನ್ ಅವರನ್ನು ಬಂಧಿಸಿದ ನಂತರ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.

ಇದನ್ನೂ ಓದಿ: ಹುಡುಗಿ ಸುಂದರಿಯಾಗಿದ್ದರೆ ರಾತ್ರೋರಾತ್ರಿ ಕಿಡ್ನಾಪ್ ಮಾಡುತ್ತಾರೆ; ಸಂದೇಶಖಾಲಿಯ ಭೀಕರ ಅನುಭವ ಬಿಚ್ಚಿಟ್ಟ ಮಹಿಳೆ

ಹುಡುಗಿ ಸುಂದರಿಯಾಗಿದ್ದರೆ ರಾತ್ರೋರಾತ್ರಿ ಕಿಡ್ನಾಪ್

ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಅಲ್ಲಿನ ಮಹಿಳೆಯರು ರೊಚ್ಚಿಗೆದ್ದಿದ್ದರು. ಮನೆಯಲ್ಲಿ ಹುಡುಗಿ ಚೆನ್ನಾಗಿದ್ದರೆ ಆಕೆಯನ್ನು ಎತ್ತಿಕೊಂಡು ಹೋಗುತ್ತಾರೆ ಮಹಿಳೆಯೊಬ್ಬರು ಮಾಧ್ಯಮವೊಂದರ ಮುಂದೆ ಅಳಲು ತೋಡಿಕೊಂಡಿದ್ದರು. ಅಲ್ಲದೆ, ಇಲ್ಲಿ ಬೆದರಿಕೆ ಹಾಕಿ ಮತದಾನ ಮಾಡಲಾಗುತ್ತದೆ. ನಾನು ಚುನಾವಣೆಯಲ್ಲಿ ನಿಲ್ಲಬೇಕಾದರೆ ಬೆದರಿಕೆಯೊಡ್ಡಿದರು. ಶಾಹಜಹಾನ್-ಶಿಬು ಹಾಜ್ರಾ-ಉತ್ತಮ್ ಸರ್ದಾರ್ ಇದರ ಹಿಂದೆ ಇರುವ ವ್ಯಕ್ತಿಗಳು. ನಾನು ಸುಮಾರು 13 ವರ್ಷಗಳಿಂದ ಮತದಾನ ಮಾಡಲು ಸಾಧ್ಯವಾಗಲಿಲ್ಲ. ಈಗ ಅವರನ್ನು ಬಂಧಿಸಿರುವುದರಿಂದ ಇಡೀ ಗ್ರಾಮ ಸ್ವಲ್ಪ ಮಟ್ಟಿಗೆ ಶಾಂತಿಯುತವಾಗಿದೆ ಎಂದು ಟಿವಿ 9 ಬೆಂಗಾಲ್​ಗೆ ಆರತಿ ಪಾತ್ರಾ ಹೇಳಿದ್ದರು.

ಮಹಿಳೆಯರ ನೋವು ಆಲಿಸಿದ್ದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಅವರು ಇಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಂದೇಶಖಾಲಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು ಭೇಟಿಯಾಗಿ ಸಮಸ್ಯೆ ಆಲಿಸಿದ್ದರು. ಬಳಿಕ ಬರಾಸತ್‌ನಲ್ಲಿ ರ್ಯಾಲಿಯಲ್ಲಿ ಸಂದೇಶಖಾಲಿ ಕುರಿತು ಮಮತಾ ಬ್ಯಾನರ್ಜಿ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದರು.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:32 pm, Sat, 30 March 24