AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sheikh Shahjahan: ಶೇಖ್ ಷಹಜಹಾನ್​​ನ್ನು 6 ವರ್ಷ ಅಮಾನತುಗೊಳಿಸಿದ ಟಿಎಂಸಿ

ಶೇಖ್ ಷಹಜಹಾನ್​​ನ್ನು 6 ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ತೃಣಮೂಲ ನಾಯಕರಾದ ಡೆರೆಕ್ ಒಬ್ರೇನ್, ಪಶ್ಚಿಮ ಬಂಗಾಳದ ಸಚಿವ ಬ್ರತ್ಯಾ ಬಸು ಪತ್ರಿಕಾಗೋಷ್ಠಿಯಲ್ಲಿ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಬಿಜೆಪಿಯು ಸಂದೇಶಖಾಲಿ ವಿಷಯದ ಬಗ್ಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿರುವಾಗ ಪಶ್ಚಿಮ ಬಂಗಾಳ ಸರ್ಕಾರವು ಕಾನೂನಿನ ನಿಯಮವನ್ನು ಎತ್ತಿಹಿಡಿಯಲು ಬದ್ಧವಾಗಿದೆ ಎಂದು ಟಿಎಂಸಿ ನಾಯಕರು ಹೇಳಿದ್ದಾರೆ.

Sheikh Shahjahan: ಶೇಖ್ ಷಹಜಹಾನ್​​ನ್ನು 6 ವರ್ಷ ಅಮಾನತುಗೊಳಿಸಿದ ಟಿಎಂಸಿ
ಶೇಖ್ ಷಹಜಹಾನ್
Follow us
ರಶ್ಮಿ ಕಲ್ಲಕಟ್ಟ
|

Updated on:Feb 29, 2024 | 4:14 PM

ಕೊಲ್ಕತ್ತಾ ಫೆಬ್ರವರಿ 29: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅವರ ಭೂಮಿಯನ್ನು ಕಬಳಿಸಿದ ಸಂದೇಶ್​​ಖಾಲಿ ಪ್ರಕರಣದ ಪ್ರಮುಖ ಆರೋಪಿ ಶೇಖ್ ಷಹಜಹಾನ್ (Sheikh Shahjahan) ಅವರನ್ನು ತೃಣಮೂಲ ಕಾಂಗ್ರೆಸ್ (TMC) ಗುರುವಾರ ಅಮಾನತುಗೊಳಿಸಿದೆ. ಪಶ್ಚಿಮ ಬಂಗಾಳ  (West Bengal) ಪೊಲೀಸರು ಆತನನ್ನು ಬಂಧಿಸಿದ ಕೆಲವೇ ಗಂಟೆಗಳ ನಂತರ, ಪಕ್ಷವು ಷಹಜಹಾನ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸುವ ನಿರ್ಧಾರವನ್ನು ಪ್ರಕಟಿಸಿತು. ಶೇಖ್ ಷಹಜಹಾನ್ ಟಿಎಂಸಿಯಲ್ಲಿ ಹೊಂದಿದ್ದ ಎಲ್ಲಾ ಹುದ್ದೆಗಳನ್ನು ಕಳೆದುಕೊಳ್ಳುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರು ಪಶ್ಚಿಮ ಬಂಗಾಳಕ್ಕೆ ಭೇಟಿಗೆ ಮುನ್ನ ಈ ನಿರ್ಧಾರ ಕೈಗೊಳ್ಳಲಾಗಿದೆ.

ತೃಣಮೂಲ ನಾಯಕರಾದ ಡೆರೆಕ್ ಒಬ್ರೇನ್, ಪಶ್ಚಿಮ ಬಂಗಾಳದ ಸಚಿವ ಬ್ರತ್ಯಾ ಬಸು ಪತ್ರಿಕಾಗೋಷ್ಠಿಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಬಿಜೆಪಿಯು ಸಂದೇಶಖಾಲಿ ವಿಷಯದ ಬಗ್ಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿರುವಾಗ ಪಶ್ಚಿಮ ಬಂಗಾಳ ಸರ್ಕಾರವು ಕಾನೂನಿನ ನಿಯಮವನ್ನು ಎತ್ತಿಹಿಡಿಯಲು ಬದ್ಧವಾಗಿದೆ ಎಂದು ಟಿಎಂಸಿ ನಾಯಕರು ಹೇಳಿದ್ದಾರೆ. ಕಳಂಕಿತ ನಾಯಕ, ಭಾರತದ ಮಾಜಿ ವ್ರೆಸ್ಲಿಂಗ್ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಡೆರೆಕ್ ಬಿಜೆಪಿಗೆ ಸವಾಲು ಹಾಕಿದ್ದಾರೆ.

ಟಿಎಂಸಿ ಸುದ್ದಿಗೋಷ್ಠಿ

ಅಭಿಷೇಕ್ ಬಂಡೋಪಾಧ್ಯಾಯ ಅವರು ಈ ಹಿಂದೆ ಸೂಚಿಸಿದ ನ್ಯಾಯಾಲಯದ ಆದೇಶದಿಂದಾಗಿ ಶೇಖ್ ಷಹಜಹಾನ್ ಅವರನ್ನು ಬಂಧಿಸಲಾಗಲಿಲ್ಲ ಎಂದು ಬ್ರತ್ಯಾ ಬಸು ಹೇಳಿದರು. ನಿರ್ಬಂಧವನ್ನು ಹಿಂತೆಗೆದುಕೊಂಡ ಗಂಟೆಗಳ ನಂತರ, ಪಶ್ಚಿಮ ಬಂಗಾಳ ಪೊಲೀಸರು ಶೇಖ್ ಷಹಜಹಾನ್ ಅವರನ್ನು ಬಂಧಿಸಿದರು ಮತ್ತು ಯಾವುದೇ ಕೇಂದ್ರೀಯ ಸಂಸ್ಥೆ ಅಲ್ಲ ಎಂದು ಬ್ರತ್ಯಾ ಬಸು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಜನರ ಪರವಾಗಿ ನಿಂತಿದೆ ಮತ್ತು “ನೀವು ಯಾರೇ ಆಗಿದ್ದರೂ ಅವರು ಕ್ರಮ ತೆಗೆದುಕೊಳ್ಳದೇ ಬಿಡುವುದಿಲ್ಲ” ಎಂದು ಪಕ್ಷದ ಹಿರಿಯ ನಾಯಕ ಡೆರೆಕ್ ಒಬ್ರೇನ್ ಹೇಳಿದ್ದಾರೆ. “ನೀವು ಜನರನ್ನು ನೋಯಿಸಿದರೆ ಅಥವಾ ನೋಯಿಸಿದ್ದೀರಿ ಎಂದು ಆರೋಪಿಸಿದರೆ, ನಾವು ಮಾತನಾಡುತ್ತೇವೆ” ಎಂದು ಅವರು ಹೇಳಿದರು.

ಹಿಮಂತ ಬಿಸ್ವ ಶರ್ಮಾ ಅವರಂತಹ ನಾಯಕರ ವಿರುದ್ಧ ಹಲವು ಆರೋಪಗಳಿದ್ದರೂ ಬಿಜೆಪಿ ಅವರ ವಿರುದ್ಧ ಏಕೆ ಕ್ರಮಕೈಗೊಂಡಿಲ್ಲ? ಎಂದು ಬಂಗಾಳ ಸಚಿವ ಬ್ರತ್ಯ ಬಸು ಪ್ರಶ್ನಿಸಿದ್ದಾರೆ. ”ಅರೆಸ್ಟ್ ಆದ ತಕ್ಷಣ ನಾಯಕನನ್ನು ಅಮಾನತು ಮಾಡುವ ತೃಣಮೂಲ ಕಾಂಗ್ರೆಸ್​ನಂತೆ ಬಿಜೆಪಿ ಇಲ್ಲ. ಯಾಕೆಂದರೆ ಬಿಜೆಪಿಯ ಇನ್ನೊಂದು ಹೆಸರು ವಾಷಿಂಗ್ ಮೆಷಿನ್. ಹಾಗಾಗಿ ನಮ್ಮ ಪಕ್ಷದ ಯಾರನ್ನಾದರೂ ಅಮಾನತು ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ನೋಡಿದರೆ ನಮಗೆ ಅಚ್ಚರಿಯಾಗಲ್ಲ ಅವರು ಹೇಳಿದರು.

ಇದನ್ನೂ ಓದಿ: ಸಂದೇಶ್​​ಖಾಲಿಯಲ್ಲಿ ಶೇಖ್ ಷಹಜಹಾನ್ ಪ್ರಭಾವಿ ನಾಯಕನಾಗಿದ್ದು ಹೇಗೆ?

55 ದಿನಗಳಿಂದ ತಲೆಮರೆಸಿಕೊಂಡಿದ್ದ ಶೇಖ್ ಷಹಜಹಾನ್ ಅವರನ್ನು ಬಂಗಾಲ ಪೊಲೀಸರು ಬಂಧಿಸುವುದನ್ನು ತಡೆಯುವಂತೆ ಜಾರಿ ನಿರ್ದೇಶನಾಲಯ (ಇಡಿ) ಕಲ್ಕತ್ತಾ ಹೈಕೋರ್ಟ್‌ಗೆ ತಿಳಿಸಿದೆ ಎಂದು ತೃಣಮೂಲ ನಾಯಕ ಹೇಳಿದರು. “ಪ್ರಧಾನಿಯವರ ಬಂಗಾಳ ಪ್ರವಾಸದವರೆಗೆ ಸಂದೇಶ್​​ಖಾಲಿ ಸಮಸ್ಯೆಯನ್ನು ಜ್ವಲಂತವಾಗಿರಿಸಲು ಅವರು ಬಯಸಿದ್ದರು. ನಮ್ಮ ನಾಯಕ ಅಭಿಷೇಕ್ ಬ್ಯಾನರ್ಜಿ ಅವರು ಹೈಕೋರ್ಟ್ ತಡೆಯಾಜ್ಞೆ ಮತ್ತು ನ್ಯಾಯಾಲಯದ ಸ್ಪಷ್ಟೀಕರಣದ ನಂತರ ನಾವು ಮುಂದೆ ಹೋಗಿ ಶೇಖ್ ಷಹಜಹಾನ್ ಅವರನ್ನು ಬಂಧಿಸಿದ್ದೇವೆ” ಎಂದು ಸಚಿವರು ಹೇಳಿದರು. “ತೃಣಮೂಲ ಕಾಂಗ್ರೆಸ್ ಮಾತ್ರ ಇಂತಹ ಉದಾಹರಣೆಯನ್ನು ನೀಡಬಲ್ಲದು.” ಮಮತಾ ಬ್ಯಾನರ್ಜಿ ಅವರು ಸ್ಥಾಪಿಸಿದ “ರಾಜಧರ್ಮ”ದ ಉದಾಹರಣೆಯನ್ನು ಜನರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಸಚಿವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:02 pm, Thu, 29 February 24

ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ
ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ
ಸಂಡೂರು: ಭಾರೀ ಮಳೆಗೆ ಮುಳುಗಿದ ರೈಲ್ವೆ ಅಂಡರ್​ಪಾಸ್
ಸಂಡೂರು: ಭಾರೀ ಮಳೆಗೆ ಮುಳುಗಿದ ರೈಲ್ವೆ ಅಂಡರ್​ಪಾಸ್
ಹಣದ ವಂಚನೆ ಮಾಡಿ ಮನೆತನದ ಮಾನ ಹರಾಜು ಹಾಕಿದಳು: ಚೈತ್ರಾ ತಂದೆ
ಹಣದ ವಂಚನೆ ಮಾಡಿ ಮನೆತನದ ಮಾನ ಹರಾಜು ಹಾಕಿದಳು: ಚೈತ್ರಾ ತಂದೆ
ಅಪ್ಪನಿಗೆ ತುತ್ತು ಹಾಕದ ಅವಳದ್ದೆಂಥ ದೇಶಪ್ರೇಮ: ಚೈತ್ರಾ ತಂದೆ ಪ್ರಶ್ನೆ
ಅಪ್ಪನಿಗೆ ತುತ್ತು ಹಾಕದ ಅವಳದ್ದೆಂಥ ದೇಶಪ್ರೇಮ: ಚೈತ್ರಾ ತಂದೆ ಪ್ರಶ್ನೆ
ಪಾಕ್ ಎಸೆದಿದ್ದ ಶೆಲ್​ಗಳನ್ನು ವೀಕ್ಷಿಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್
ಪಾಕ್ ಎಸೆದಿದ್ದ ಶೆಲ್​ಗಳನ್ನು ವೀಕ್ಷಿಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್
ವಿಜಯ್ ಶಾ ವಿರುದ್ಧ ಎಫ್​ಐಅರ್ ದಾಖಲಿಸಲು ಸೂಚಿಸಲಾಗಿದೆ: ಪರಮೇಶ್ವರ್
ವಿಜಯ್ ಶಾ ವಿರುದ್ಧ ಎಫ್​ಐಅರ್ ದಾಖಲಿಸಲು ಸೂಚಿಸಲಾಗಿದೆ: ಪರಮೇಶ್ವರ್
ಒಂದು ಟಗರನ್ನಿಟ್ಟುಕೊಂಡಿರುವ ರೌಡಿಯೊಬ್ಬ ಹೊಟ್ಟೆಪಾಡಿಗೆ ಕುರಿ ಕಾಯ್ತೀನಿ ಅಂದ
ಒಂದು ಟಗರನ್ನಿಟ್ಟುಕೊಂಡಿರುವ ರೌಡಿಯೊಬ್ಬ ಹೊಟ್ಟೆಪಾಡಿಗೆ ಕುರಿ ಕಾಯ್ತೀನಿ ಅಂದ
ಹೇಗಿದ್ದಾರೆ ನೋಡಿ ಅರ್ಜುನ್ ಜನ್ಯ ಮಗಳು; ತಂದೆಯನ್ನು ಅಭಿನಂದಿಸಿದ ರಜಿತಾ
ಹೇಗಿದ್ದಾರೆ ನೋಡಿ ಅರ್ಜುನ್ ಜನ್ಯ ಮಗಳು; ತಂದೆಯನ್ನು ಅಭಿನಂದಿಸಿದ ರಜಿತಾ
ಬೆಂಗಳೂರಿನಲ್ಲಿ ಬೆತ್ತಲೆ ಕಳ್ಳನ ಕೈಚಳಕ: ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬೆತ್ತಲೆ ಕಳ್ಳನ ಕೈಚಳಕ: ವಿಡಿಯೋ ನೋಡಿ