ಸಂವಿಧಾನದ ಮೂಲ ಸ್ವರೂಪದ ಹಿತರಕ್ಷಣೆಗೆ ನಾಂದಿ ಹಾಡಿದ ಕೇಶವಾನಂದ ಭಾರತಿ ಶ್ರೀಗಳು ದೈವಾಧೀನ
ತಿರುವನಂತಪುರಂ: ಕೇರಳದ ಕಾಸರಗೋಡು ಜಿಲ್ಲೆಯ ಎಡನೀರು ಶ್ರೀಕೇಶವಾನಂದ ಭಾರತಿ ಸ್ವಾಮೀಜಿ ದೈವಾಧೀನರಾಗಿದ್ದಾರೆ. ಜಗದ್ಗುರು ಶಂಕರಾಚಾರ್ಯ ಸಂಸ್ಥಾನಂ ಮಠಾಧೀಶರಾಗಿದ್ದ ಸ್ವಾಮೀಜಿಗೆ 79 ವರ್ಷ ಪ್ರಾಯವಾಗಿತ್ತು. ಕಳೆದ ತಡರಾತ್ರಿ ದೈವಾಧೀನರಾದ ಶ್ರೀಗಳು ಸೆಪ್ಟಂಬರ್ 2ರಂದು ತಮ್ಮ 60ನೇ ಚಾತುರ್ಮಾಸ ವೃತಾಚರಣೆ ಸಮಾಪ್ತಿಗೊಳಿಸಿದ್ದರು. ಆದರೆ, ಕೆಲವು ದಿನಗಳಿಂದ ಅಸೌಖ್ಯದಲ್ಲಿದ್ದ ಸ್ವಾಮೀಜಿ ನಿನ್ನೆ ಫಲಹಾರ ಸ್ವೀಕರಿಸಿದ ಬಳಿಕ ತಡರಾತ್ರಿ ವಿಧಿವಶರಾಗಿದ್ದಾರೆ. 1960 ರಿಂದ ಮಠಾಧೀಶರಾಗಿ ಸೇವೆ ಸಲ್ಲಿಸಿದ್ದ ಸ್ವಾಮೀಜಿ ಧಾರ್ಮಿಕ, ಶಿಕ್ಷಣ ಮತ್ತು ಸಂಗೀತ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸ್ವತಃ […]
ತಿರುವನಂತಪುರಂ: ಕೇರಳದ ಕಾಸರಗೋಡು ಜಿಲ್ಲೆಯ ಎಡನೀರು ಶ್ರೀಕೇಶವಾನಂದ ಭಾರತಿ ಸ್ವಾಮೀಜಿ ದೈವಾಧೀನರಾಗಿದ್ದಾರೆ. ಜಗದ್ಗುರು ಶಂಕರಾಚಾರ್ಯ ಸಂಸ್ಥಾನಂ ಮಠಾಧೀಶರಾಗಿದ್ದ ಸ್ವಾಮೀಜಿಗೆ 79 ವರ್ಷ ಪ್ರಾಯವಾಗಿತ್ತು.
ಕಳೆದ ತಡರಾತ್ರಿ ದೈವಾಧೀನರಾದ ಶ್ರೀಗಳು ಸೆಪ್ಟಂಬರ್ 2ರಂದು ತಮ್ಮ 60ನೇ ಚಾತುರ್ಮಾಸ ವೃತಾಚರಣೆ ಸಮಾಪ್ತಿಗೊಳಿಸಿದ್ದರು. ಆದರೆ, ಕೆಲವು ದಿನಗಳಿಂದ ಅಸೌಖ್ಯದಲ್ಲಿದ್ದ ಸ್ವಾಮೀಜಿ ನಿನ್ನೆ ಫಲಹಾರ ಸ್ವೀಕರಿಸಿದ ಬಳಿಕ ತಡರಾತ್ರಿ ವಿಧಿವಶರಾಗಿದ್ದಾರೆ.
1960 ರಿಂದ ಮಠಾಧೀಶರಾಗಿ ಸೇವೆ ಸಲ್ಲಿಸಿದ್ದ ಸ್ವಾಮೀಜಿ ಧಾರ್ಮಿಕ, ಶಿಕ್ಷಣ ಮತ್ತು ಸಂಗೀತ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸ್ವತಃ ಯಕ್ಷಗಾನ ಭಾಗವತಿಕೆ ಮಾಡುತ್ತಿದ್ದ ಶ್ರೀಗಳು ಭೂಸುಧಾರಣಾ ಕಾಯ್ದೆ ವಿರುದ್ಧ ಸಹ ದನಿ ಎತ್ತಿದ್ದರು. ಆಸ್ತಿ ಹಕ್ಕಿನ ಬಗ್ಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಇವರು ನಡೆಸಿದ ಕಾನೂನು ಹೋರಾಟ ಭಾರತದ ಸಂವಿಧಾನದ ಮೂಲ ಸ್ವರೂಪದ ಹಿತರಕ್ಷಣೆಗೆ ನಾಂದಿ ಹಾಡಿತು. ಶ್ರೀಗಳು ಸುಪ್ರೀಂ ಕೋರ್ಟ್ನಲ್ಲಿ ದಾಖಲಿಸಿದ ಕೇಸ್ ಭಾರತದ ನ್ಯಾಯಾಂಗ ಚರಿತ್ರೆಯಲ್ಲಿ ಕೇಶವಾನಂದ ಭಾರತಿ ಕೇಸ್ ಎಂದೇ ಖ್ಯಾತಿ ಪಡೆದಿದೆ.
We will always remember Pujya Kesavananda Bharati Ji for his contributions towards community service and empowering the downtrodden. He was deeply attached to India’s rich culture and our great Constitution. He will continue to inspire generations. Om Shanti.
— Narendra Modi (@narendramodi) September 6, 2020
Published On - 2:57 pm, Sun, 6 September 20