ಎಂಪ್ಲಾಯೀಸ್ ಡೆಪಾಸಿಟ್ ಲಿಂಕ್ಡ್ ಇನ್ಷೂರೆನ್ಸ್ ಸ್ಕೀಮ್ (EDLI) ಅಡಿಯಲ್ಲಿ ಅನುಕೂಲಗಳ ವಿಸ್ತರಣೆ ಮಾಡಿ ಸರ್ಕಾರದಿಂದ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಏಪ್ರಿಲ್ 28, 2021ರಂದು ಈ ಅಧಿಸೂಚನೆ ಬಂದಿದೆ. EDLI ಯೋಜನೆಯಲ್ಲಿ ಈ ಹಿಂದೆ ದೊರೆಯುತ್ತಿದ್ದ ಗರಿಷ್ಠ ಅನುಕೂಲ ರೂ. 6 ಲಕ್ಷ ಆಗಿತ್ತು. ಅದನ್ನು 7 ಲಕ್ಷ ರೂಪಾಯಿಗೆ ವಿಸ್ತರಿಸಲಾಗಿದೆ. ಇದಕ್ಕೂ ಮುಂಚೆ 2015ರ ಸೆಪ್ಟೆಂಬರ್ನಲ್ಲಿ EDLI ಯೋಜನೆ ಅಡಿಯ ಅನುಕೂಲವನ್ನು 3.6 ಲಕ್ಷ ರೂಪಾಯಿಯಿಂದ 6 ಲಕ್ಷಕ್ಕೆ ಏರಿಸಲಾಗಿತ್ತು. ಅದರ ಬಗ್ಗೆ 2016ರ ಜೂನ್ನಲ್ಲಿ ಅಧಿಸೂಚನೆ ಬಂದಿತ್ತು.
ಅಂದಹಾಗೆ ಯಾರು ಈ EDLI ಸದಸ್ಯರಾಗಿರುತ್ತಾರೋ ಅಥವಾ ಇಪಿಎಫ್ ಮತ್ತು ಎಂಪಿ ಕಾಯ್ದೆ ಅನುದಾನದ ಸೆಕ್ಷನ್ 17ರಿಂದ ಹೊರಗೆ ಉಳಿದಿದ್ದು, ಅಂಥವರು ಮೃತ ಪಡುವ ತಿಂಗಳ ಮೊದಲಿಗೆ ಹನ್ನೆರಡು ತಿಂಗಳು ನಿರಂತರವಾಗಿ ಉದ್ಯೋಗದಲ್ಲಿ ಇರುತ್ತಾರೋ ಅವರಿಗೆ ಇದು ಅನ್ವಯ ಆಗುತ್ತದೆ. ಈ ಹನ್ನೆರಡು ತಿಂಗಳ ಅವಧಿಯಲ್ಲಿ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡಿರಬೇಕು ಎಂಬ ನಿಯಮ ಏನೂ ಇಲ್ಲ. 15.2.2020ರಿಂದ ಅನ್ವಯ ಆಗುವಂತೆ ಇಡಿಎಲ್ಐ ಯೋಜನೆ ಅಡಿಯಲ್ಲಿ ಕನಿಷ್ಠ ಖಾತ್ರಿ ಅನುಕೂಲ ರೂ. 2.50 ಲಕ್ಷ ನಿಗದಿ ಆಗಿದೆ.
ಇಪಿಎಫ್ ಅಡಿಯಲ್ಲಿ ಕವರ್ ಆಗುವವರಿಗೆ ಇಡಿಎಲ್ಐ ಸದಸ್ಯತ್ವ ತಾನಾಗಿಯೇ ದೊರೆಯುತ್ತದೆ. ಎಂಪ್ಲಾಯೀಸ್ ಡೆಪಾಸಿಟ್ ಲಿಂಕ್ಡ್ ಇನ್ಷೂರೆನ್ಸ್ ಯೋಜನೆ, 1976ರ ಅಡಿಯಲ್ಲಿ ಇನ್ಷೂರೆನ್ಸ್ ದೊರೆಯುತ್ತದೆ. ಒಂದು ವೇಳೆ ಸಿಬ್ಬಂದಿಯು ಉದ್ಯೋಗದ ವೇಳೆ ಮೃತಪಟ್ಟಲ್ಲಿ ನಾಮಿನಿಗೆ ಇನ್ಷೂರೆನ್ಸ್ ಮೊತ್ತ ಪಾವತಿಸಲಾಗುತ್ತದೆ. ಸಿಬ್ಬಂದಿಯ ಪ್ರಾವಿಡೆಂಟ್ ಮೊತ್ತದ ಸರಾಸರಿಯ ಆಧಾರದಲ್ಲಿ ಕ್ಲೇಮ್ ಮೊತ್ತ ಜೋಡಣೆ ಆಗಿರುತ್ತದೆ. ಆ ಮೊತ್ತವನ್ನು ನಾಮಿನಿಗೆ ಪಾವತಿಸಲಾಗುತ್ತದೆ. ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ಸ್ ಅಂಡ್ ಮಿಸಲೇನಿಯಸ್ ಪ್ರಾವಿಷನ್ಸ್ ಆ್ಯಕ್ಟ್ ಅಡಿಯಲ್ಲಿ ಎಲ್ಲ ಸಿಬ್ಬಂದಿಗೂ EDLI ಅನ್ವಯಿಸುತ್ತದೆ. ಪ್ರತ್ಯೇಕವಾಗಿ ನಾಮಿನಿಯನ್ನು ಸೇರ್ಪಡೆ ಮಾಡುವ ಅಗತ್ಯ ಇಲ್ಲ.
ಸಿಬ್ಬಂದಿಯಾಗಿ ಯಾವುದೇ ಮೊತ್ತ ಪಾವತಿಸುವ ಅಗತ್ಯ ಇಲ್ಲ. ಆದರೆ ಉದ್ಯೋಗದಾತರು ನೀಡಬೇಕು. 15,000 ರೂಪಾಯಿ ಗರಿಷ್ಠ ವೇತನದ ಮಿತಿ ಇದೆ. ಉದ್ಯೋಗದಾತರು ಸಿಬ್ಬಂದಿಯ ಶೇ 0.5ರ ಜತೆಗೆ ಆಡಳಿತಾತ್ಮಕ ವೆಚ್ಚಗಳನ್ನು ಪಾವತಿಸುತ್ತಾರೆ.
ಇದನ್ನೂ ಓದಿ: Pradhan Mantri Suraksha Bima Yojana: ವರ್ಷಕ್ಕೆ 12 ರೂ. ಪ್ರೀಮಿಯಂ ಪಾವತಿಸಿ 2 ಲಕ್ಷ ರೂ. ತನಕ ವಿಮೆ ಪಡೆಯಿರಿ
ಇದನ್ನೂ ಓದಿ: ESIC ಸದಸ್ಯರ ನಿರುದ್ಯೋಗ ಭತ್ಯೆ, ಮತ್ತಿತರ ಸವಲತ್ತಿನ ಬಗ್ಗೆ ನಿಮಗೆ ಮಾಹಿತಿ ಇದೆಯಾ?
(Employees Deposit Linked Insurance (EDLI) Scheme extended insurance amount to Rs 7 lakh to employees by government. Here is the details)
Published On - 1:40 pm, Wed, 5 May 21