ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿ ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

|

Updated on: Feb 19, 2024 | 2:36 PM

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಇಂದು ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದರು, ಅಲ್ಲಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಅದಕ್ಕೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೇರಿ ಹಲವರು ಮೆಟ್ರೋದಲ್ಲಿ ಪ್ರಯಾಣಿಸಿದ್ದರು.

ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿ ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್
Follow us on

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್(Dharmendra Pradhan) ಸೋಮವಾರ ದೆಹಲಿ ಮೆಟ್ರೋ(Delhi Metro)ದಲ್ಲಿ ಸಂಚರಿಸಿ, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಜತೆ ಮಾತುಕತೆ ನಡೆಸಿದರು. ದೆಹಲಿ ಮೆಟ್ರೋದ ಪಿತಾಂಪುರದಲ್ಲಿರುವ ವಿವೇಕಾನಂದ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸ್ಟಡೀಸ್‌ಗೆ (ವಿವೇಕಾನಂದ ವೃತ್ತಿಪರ ಅಧ್ಯಯನ ಸಂಸ್ಥೆ) ತೆರಳಿದರು. ಈ ಸಂದರ್ಭದಲ್ಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅದೇ ರೀತಿ ಮೆಟ್ರೊ ಕಾಮಗಾರಿ ಹಾಗೂ ಇತರೆ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಬಳಿ ಮಾತನಾಡಿದ್ದಾರೆ.

ಕೇಂದ್ರ ಸಚಿವರ ದೆಹಲಿ ಮೆಟ್ರೋ ಪ್ರಯಾಣದ ವಿಡಿಯೋ ಸದ್ಯ ವೈರಲ್ ಆಗಿದೆ. ಸದಾ ಪ್ರಯಾಣಿಕರಿಂದ ತುಂಬಿ ತುಳುಕುವ ದೆಹಲಿ ಮೆಟ್ರೋ ರೈಲಿನಲ್ಲಿ ಅಧ್ಯಕ್ಷೆ ದ್ರೌಪದಿ ಮುರ್ಮು ಇತ್ತೀಚೆಗೆ ಪ್ರಯಾಣಿಸಿದ್ದರು. ದ್ರೌಪದಿ ಮುರ್ಮು ಅವರು ಸೆಂಟ್ರಲ್ ಸೆಕ್ರೆಟರಿಯೇಟ್​ ಮೆಟ್ರೋ ನಿಲ್ದಾಣದಿಂದ ಕಾಶ್ಮೀರ್ ಗೇಟ್​-ರಾಜ ನಹರ್​ಸಿಂಗ್ ವೈಲೆಟ್ ಲೈನ್ ಕಾರಿಡಾರ್​ನಲ್ಲಿ ಪ್ರಯಾಣಿಸಿದರು.

ದೆಹಲಿ ಮೆಟ್ರೋ ವಿಡಿಯೋ 

ಸೆಂಟ್ರಲ್ ಸೆಕ್ರೆಟರಿಯೇಟ್​ಗೆ ಹಿಂದಿರುಗುವ ಮೊದಲು ನೆಹರು ಪ್ಲೇಸ್​ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಿದ್ದರು. ಹಾಗೆಯೇ ಇದಕ್ಕೂ ಮುನ್ನ ಅಕ್ಟೋಬರ್​ನಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ದ್ವಾರಕಾದ ಯಶೋಭೂಮಿ ಕನ್ವೆನ್ಷನ್ ಸೆಂಟರ್​ನಲ್ಲಿ ಫೋರಂ ಆನ್ ಮಿಷನ್ ಲೈಫ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೆಟ್ರೋದಲ್ಲಿ ತೆರಳಿದ್ದರು.

ಮತ್ತಷ್ಟು ಓದಿ: ದೆಹಲಿ: ಸುಭಾಷ್​ನಗರ ಮೆಟ್ರೋ ನಿಲ್ದಾಣದಿಂದ ಕೆಳಗೆ ಬಿದ್ದ ಕಬ್ಬಿಣದ ರಾಡ್, ಮಹಿಳೆಗೆ ಗಾಯ

ಇದಲ್ಲದೆ, ಅಕ್ಟೋಬರ್ 18ರಂದು ಭಾರತದಲ್ಲಿನ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ದೆಹಲಿ ಮೆಟ್ರೋದ ಮೆಜೆಂಟಾ ಲೈನ್​ನಲ್ಲಿ ಸವಾರಿ ಮಾಡಿದರು. ಗಾರ್ಸೆಟ್ಟಿ ರಾಜಧಾನಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಜಾಗತಿಕವಾಗಿ ಅತ್ಯುತ್ತಮವಾದದ್ದು ಎಂದು ಶ್ಲಾಘಿಸಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ 

Published On - 2:36 pm, Mon, 19 February 24