ರಾಹುಲ್​ ಗಾಂಧಿ ಆರೋಪಕ್ಕೆ ಅಂಕಿ-ಸಂಖ್ಯೆ ಸಮೇತ ತಿರುಗೇಟು ಕೊಟ್ಟ ಧರ್ಮೇಂದ್ರ ಪ್ರಧಾನ್

ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ಸರಿಯಾದ ಆಧಾರದ ಮೇಲೆ ನೇಮಕಾತಿ ನಡೆಯುತ್ತಿಲ್ಲ ಎನ್ನುವ ರಾಹುಲ್ ಗಾಂಧಿಯವರ ಟೀಕೆಗೆ ಖುದ್ದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪ್ರತಿಕ್ರಿಯಿಸಿದ್ದು, ಅಂಕಿ-ಅಂಶಗಳ ಮೂಲಕ ತಿರುಗೇಟು ನೀಡಿದ್ದಾರೆ.

ರಾಹುಲ್​ ಗಾಂಧಿ ಆರೋಪಕ್ಕೆ ಅಂಕಿ-ಸಂಖ್ಯೆ ಸಮೇತ ತಿರುಗೇಟು ಕೊಟ್ಟ ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್, ರಾಹುಲ್ ಗಾಂಧಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Jan 29, 2024 | 10:37 PM

ನವದೆಹಲಿ, (ಜನವರಿ 29): ರಾಹುಲ್ ಗಾಂಧಿಯವರ(rahul gandhi) ರಾಜಕೀಯ ಸಂಪೂರ್ಣ ಸುಳ್ಳಿನ ಮೇಲೆ ನಿಂತಿದೆ. ಒಂದು ಸುಳ್ಳಿನ ಸತ್ಯ ಬಯಲಾದ ತಕ್ಷಣ ಮತ್ತೊಂದು ಸುಳ್ಳಿನ ಜೊತೆಗೆ ಎದ್ದು ನಿಲ್ಲುತ್ತಾರೆ. ಅವರು ನೀಡಿದ ಸುಳ್ಳು ಹೇಳಿಕೆಗಳ ಪಟ್ಟಿಗೆ ಕೊನೆಯಿಲ್ಲ. ಇದೀಗ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಉನ್ನತ ಶಿಕ್ಷಣದಲ್ಲಿ ಮೀಸಲು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಸುಳ್ಳನ್ನು ಹೇಳುತ್ತಿದೆ. ಆದರೆ ಅವರ ಈ ಸುಳ್ಳು ಸತ್ಯದ ಪರೀಕ್ಷೆಯಲ್ಲೂ ಬಯಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (dharmendra pradhan) ತಿರುಗೇಟು ನೀಡಿದ್ದಾರೆ.

ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿನ ಮೀಸಲು ಹುದ್ದೆಗಳ ನಿಯಮಿತ ಮೀಸಲಾತಿಗೆ ಅನುಗುಣವಾಗಿ ಮೋದಿ ಸರ್ಕಾರದಲ್ಲಿ ಗರಿಷ್ಠ ಸಂಖ್ಯೆಯ ನೇಮಕಾತಿಗಳನ್ನು ಮಾಡಲಾಗಿದೆ ಎಂಬುದು ಡೇಟಾದಿಂದ ಸ್ಪಷ್ಟವಾಗಿದೆ. 6080 ಹುದ್ದೆಗಳಲ್ಲಿ ನಡೆದ ಒಟ್ಟು ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿ (SC) 14.3%, ಪರಿಶಿಷ್ಟ ಪಂಗಡ (ST) 7% ಮತ್ತು OBC 23.42%. ಇದಲ್ಲದೇ ಈ ನಿಯಮಗಳ ಅಡಿಯಲ್ಲಿ ಉಳಿದ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಈ ನೇಮಕಾತಿಗಳಲ್ಲಿ ಎಸ್ ಸಿಗಳು ಕೇವಲ ಶೇ.7.1, ಎಸ್ ಟಿಗಳು ಶೇ.1.6 ಮತ್ತು ಒಬಿಸಿಗಳು ಶೇ.4.5 ಎಂದು ರಾಹುಲ್ ಗಾಂಧಿಯವರು ಮಾಡುತ್ತಿರುವ ಪ್ರಚಾರ ಸಂಪೂರ್ಣ ಸುಳ್ಳು. ಸುಳ್ಳನ್ನು ಹಬ್ಬಿಸಿ ಸಮಾಜವನ್ನು ವಿಭಜಿಸುವ ಮತ್ತು ಅಸ್ಥಿರತೆ ಸೃಷ್ಟಿಸುವ ಹಳೇ ಚಾಳಿ ಕಾಂಗ್ರೆಸ್‌ಗೆ ಇದೆ. ಕಾಂಗ್ರೆಸ್‌ಎಸ್‌ಸಿ-ಎಸ್‌ಟಿ-ಒಬಿಸಿ ವಿರೋಧಿ. ಅಧಿಕಾರದಲ್ಲಿದ್ದಾಗ, ಕಾಂಗ್ರೆಸ್ ಯಾವಾಗಲೂ ಸಮಾಜದ ಹಿತಾಸಕ್ತಿಗಳನ್ನು ಬಹಿರಂಗವಾಗಿ ವಿರೋಧಿಸುತ್ತದೆ ಎಂದು ವಾಗ್ದಾಳಿ ನಡೆಸಿದರು

ಈಗ ಮೋದಿ ಸರಕಾರ ಸಮಾಜದ ಸಹಭಾಗಿತ್ವವನ್ನು ಖಾತ್ರಿಪಡಿಸುತ್ತಿರುವಾಗ, ಕಾಂಗ್ರೆಸ್ ಮತ್ತು ಅದರ ನಾಯಕರ ಎಸ್‌ಸಿ-ಎಸ್‌ಟಿ-ಒಬಿಸಿ ವಿರೋಧಿ ಮುಖ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ರಾಹುಲ್ ಗಾಂಧಿ ಅವರು ನೀಡಿರುವ ಅಂಕಿಅಂಶಗಳಿಗೆ ಸಾಕ್ಷ್ಯವನ್ನು ಒದಗಿಸಬೇಕು. ಅಥವಾ ಅವರ ಸುಳ್ಳುಗಳಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಬಹಿರಂಗ ಸವಾಲು ಹಾಕಿದರು.

ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ಸರಿಯಾದ ಆಧಾರದ ಮೇಲೆ ನೇಮಕಾತಿ ನಡೆಯುತ್ತಿಲ್ಲ ಎಂದು ರಾಹುಲ್ ಗಾಂಧಿ ಎನ್​ಡಿಎ ಸರ್ಕಾರದ ವಿರುದ್ಧ ಆರೋಪಿಸಿದ್ದರು. ಇದಕ್ಕೆ ಇದೀಗ ಖುದ್ದು ಕೇಂದ್ರ ಶಿಕ್ಷಣ ಸಚಿವ ಅಂಕಿ-ಅಂಶಗಳ ಮೂಲಕ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ