ದೇಶದೊಳಗೆ ದೀಪಾವಳಿ ಸಂಭ್ರಮ, ಗಡಿಯಲ್ಲಿ ಗುಂಡಿನ ಚಕಮಕಿ.. ಪಾಪಿಗಳ ದಾಳಿಗೆ ಭಾರತದ ನಾಲ್ವರು ಯೋಧರು ಹುತಾತ್ಮ
ಜಮ್ಮು ಕಾಶ್ಮೀರದ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಸೇನೆಯ ನಡುವೆ ಮತ್ತೆ ಕಾಳಗ ನಡೆದಿದೆ. ಈ ಗುಂಡಿನ ಚಕಮಕಿಯಲ್ಲಿ ಭಾರತದ ನಾಲ್ವರು ಯೋಧರು ಹುತಾತ್ಮರಾಗಿದ್ರೆ, ಮೂವರು ನಾಗರಿಕರು ಪಾಕಿಸ್ತಾನದ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಭಾರತೀಯ ಸೇನೆಯೂ ತಕ್ಕ ಉತ್ತರ ನೀಡಿದೆ. ಪಾಪಿಗಳ ದಾಳಿಗೆ ಭಾರತದ ನಾಲ್ವರು ಯೋಧರು ಹುತಾತ್ಮ! ದೇಶದೊಳಗೆ ದೀಪಾವಳಿಯ ಪಟಾಕಿ ಹಾರಿಸಲು ಜನ ಸಜ್ಜಾಗುತ್ತಿದ್ದರೆ, ಭಾರತ-ಪಾಕಿಸ್ತಾನ ಗಡಿಯಲ್ಲಿ ಗುಂಡಿನ ಮೊರೆತ ಜೋರಾಗಿದೆ. ನಿನ್ನೆ ಭಾರತ-ಪಾಕಿಸ್ತಾನದ ಯೋಧರ ನಡುವೆ ವಿವಿಧೆಡೆ ಭಾರಿ ಗುಂಡಿನ ಚಕಮಕಿ, […]
ಜಮ್ಮು ಕಾಶ್ಮೀರದ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಸೇನೆಯ ನಡುವೆ ಮತ್ತೆ ಕಾಳಗ ನಡೆದಿದೆ. ಈ ಗುಂಡಿನ ಚಕಮಕಿಯಲ್ಲಿ ಭಾರತದ ನಾಲ್ವರು ಯೋಧರು ಹುತಾತ್ಮರಾಗಿದ್ರೆ, ಮೂವರು ನಾಗರಿಕರು ಪಾಕಿಸ್ತಾನದ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಭಾರತೀಯ ಸೇನೆಯೂ ತಕ್ಕ ಉತ್ತರ ನೀಡಿದೆ.
ಪಾಪಿಗಳ ದಾಳಿಗೆ ಭಾರತದ ನಾಲ್ವರು ಯೋಧರು ಹುತಾತ್ಮ! ದೇಶದೊಳಗೆ ದೀಪಾವಳಿಯ ಪಟಾಕಿ ಹಾರಿಸಲು ಜನ ಸಜ್ಜಾಗುತ್ತಿದ್ದರೆ, ಭಾರತ-ಪಾಕಿಸ್ತಾನ ಗಡಿಯಲ್ಲಿ ಗುಂಡಿನ ಮೊರೆತ ಜೋರಾಗಿದೆ. ನಿನ್ನೆ ಭಾರತ-ಪಾಕಿಸ್ತಾನದ ಯೋಧರ ನಡುವೆ ವಿವಿಧೆಡೆ ಭಾರಿ ಗುಂಡಿನ ಚಕಮಕಿ, ದಾಳಿ, ಪ್ರತಿದಾಳಿ ನಡೆದಿದೆ. ಪಾಕಿಸ್ತಾನದ ದಾಳಿಯಲ್ಲಿ ನಿನ್ನೆ ಒಂದೇ ದಿನ ನಾಲ್ವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಜೊತೆಗೆ 3 ಜನ ನಾಗರಿಕರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೈನಿಕರು, ನಾಗರಿಕರ ಮೇಲೆ ದಾಳಿ ನಡೆಸಿದೆ. ಮಾರ್ಟರ್ ಶೆಲ್, ಇತರ ಅಸ್ತ್ರಗಳನ್ನು ಉಪಯೋಗಿಸಿ ಪಾಕಿಸ್ತಾನ ದಾಳಿ ನಡೆಸಿದೆ. ದಾಳಿಯಲ್ಲಿ ಭಾರತದ ಅನೇಕ ನಾಗರಿಕರು ಗಾಯಗೊಂಡಿದ್ದಾರೆ.
ಭಾರತದ ಪ್ರತಿದಾಳಿಗೆ 11 ಪಾಕ್ ಯೋಧರು ಫಿನಿಷ್ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಭಾರತ ಪ್ರತಿ ದಾಳಿ ನಡೆಸಿದೆ. ಭಾರತೀಯ ಸೇನೆ ನಡೆಸಿರುವ ಪ್ರತಿದಾಳಿಯಲ್ಲಿ 11ಮಂದಿ ಪಾಕಿಸ್ತಾನ ಯೋಧರು ಹತರಾಗಿದ್ದಾರೆ. ಇದರಲ್ಲಿ ನಾಲ್ವರು ಪಾಕಿಸ್ತಾನ ಸೇನಾ ಯೋಧರು ಮತ್ತು ಮೂವರು ಪಾಕಿಸ್ತಾನ ವಿಶೇಷ ಸೇವಾ ಪಡೆ ಯೋಧರು ಸೇರಿದ್ದಾರೆ ಅಂತಾ ಭಾರತೀಯ ಸೇನಾ ಮೂಲಗಳು ತಿಳಿಸಿವೆ. ಭಾರತೀಯ ಸೇನೆ ನಡೆಸಿರುವ ಪ್ರತಿದಾಳಿಯಲ್ಲಿ ಪಾಕಿಸ್ತಾನದ 10 ರಿಂದ 12 ಮಂದಿ ಯೋಧರು ಗಾಯಗೊಂಡಿದ್ದಾರೆ. ಪಾಕಿಸ್ತಾನ ಸೇನೆಗೆ ಸೇರಿದ ಸೇನಾ ಬಂಕರ್ ಮತ್ತು ಲಾಂಚ್ ಪ್ಯಾಡ್ ನಾಶಪಡಿಸಲಾಗಿದೆ ಅಂತಾ ಗೊತ್ತಾಗಿದೆ.
ಕೆರಾನ್ ಸೆಕ್ಟರ್ನಲ್ಲಿ ಪಾಕಿಸ್ತಾನದ ಸೇನೆ ಭಾರತದ ಸೇನೆಯ ಮೇಲೆ ದಾಳಿ ನಡೆಸಿ, ಉಗ್ರರನ್ನು ಗಡಿಯಿಂದ ಭಾರತದೊಳಕ್ಕೆ ನುಸುಳುವಂತೆ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಕೆರಾನ್ ಸೆಕ್ಟರ್ನಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಕಂಡು ಬಂದಿತ್ತು. ತಕ್ಷಣವೇ ಎಚ್ಚೆತ್ತು ಉಗ್ರರು ಗಡಿ ನುಸುಳದಂತೆ ತಡೆಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಒಟ್ಟಿನಲ್ಲಿ ಪಾಕಿಸ್ತಾನ ಈ ಜನ್ಮದಲ್ಲಿ ಬುದ್ಧಿ ಕಲಿಯೋದಿಲ್ಲ ಅನ್ಸುತ್ತೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕದನ ವಿರಾಮ ಉಲಂಘಿಸಿ, ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಅಟ್ಟಹಾಸ ಮೆರೆದಿದೆ. ಈ ದಾಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ನಾವು ಇಲ್ಲಿ ಖುಷಿಯಿಂದ ಹಬ್ಬ ಮಾಡುತ್ತಿದ್ದರೆ, ಗಡಿಯಲ್ಲಿ ಯೋಧರು ಶತ್ರುಗಳ ಎದುರು ಹೋರಾಡುತ್ತಿದ್ದಾರೆ. ನಮ್ಮ ಯೋಧರಿಗೆ ಒಂದು ಸಲಾಂ ಹೇಳೋಣ.
ಇದನ್ನೂ ಓದಿ: ಜಮ್ಮು-ಕಾಶ್ಮೀರದ ಗಡಿಯಲ್ಲಿ ಫೈರಿಂಗ್: ಪಾಕ್ನ 11 ಯೋಧರ ಹತ್ಯೆ