ದೇಶವ್ಯಾಪಿ ಕೊರೊನಾ 2ನೇ ಅಲೆ, ಸತ್ತವರಲ್ಲಿ ವೃದ್ಧರೇ ಹೆಚ್ಚು: ಐಸಿಎಂಆರ್

ಕೊವ್ಯಾಕ್ಸಿನ್ ಪಡೆದವರ ಪೈಕಿ ಶೇ 0.04ರಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೊವಿಶೀಲ್ಡ್ 2ನೇ ಡೋಸ್ ಪಡೆದ ಕೆಲವರಲ್ಲಿಯೂ ಕೊರೊನಾ ದೃಢಪಟ್ಟಿದೆ. ಕೊವಿಶೀಲ್ಡ್ ಪಡೆದ ಶೇ 0.03ರಷ್ಟು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ದೇಶವ್ಯಾಪಿ ಕೊರೊನಾ 2ನೇ ಅಲೆ, ಸತ್ತವರಲ್ಲಿ ವೃದ್ಧರೇ ಹೆಚ್ಚು: ಐಸಿಎಂಆರ್
ಸಂಗ್ರಹ ಚಿತ್ರ
Follow us
|

Updated on: Apr 21, 2021 | 8:34 PM

ದೆಹಲಿ: ದೇಶದಾದ್ಯಂತ ಕಂಡುಬರುತ್ತಿರುವ ಕೊರೊನಾ 2ನೇ ಅಲೆಯಲ್ಲಿ ಈವರೆಗೆ ಸತ್ತವರ ಪೈಕಿ 70 ವರ್ಷ ದಾಟಿದವರೇ ಹೆಚ್ಚು ಎಂದು ಕೇಂದ್ರ ಅರೋಗ್ಯ ಇಲಾಖೆ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (Indian Council of Medical Research – ICMR) ಅಧಿಕಾರಿಗಳು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 2ನೇ ಅಲೆಯಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆಯಲ್ಲಿ 70 ವರ್ಷ ಮೇಲ್ಪಟ್ಟವರು ಶೇ.22.17ರಷ್ಟು ಇದ್ದಾರೆ. ಮೊದಲ ಅಲೆಯಲ್ಲಿ ಈ ವಯೋಮಾನದವರ ಸಾವಿನ ಸರಾಸರಿ ಶೇ 19.99ರಷ್ಟು ಇತ್ತು. 2ನೇ ಅಲೆಯಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆಯಲ್ಲಿ 80 ವರ್ಷ ಮೇಲ್ಪಟ್ಟವರು ಶೇ 9.81ರಷ್ಟು ಇದ್ದಾರೆ. ಮೊದಲ ಅಲೆಯಲ್ಲಿ ಈ ವಯೋಮಾನದವರ ಸಾವಿನ ಸರಾಸರಿ ಶೇ 7.82ರಷ್ಟು ಇತ್ತು ಎಂದು ಐಸಿಎಂಆರ್​ನ ಬಲರಾಮ್ ಭಾರ್ಗವ ಹೇಳಿದರು.

ದೇಶದಲ್ಲಿ ಈವರೆಗೆ ಶೇ 87ರಷ್ಟು ಆರೋಗ್ಯ ಕಾರ್ಯಕರ್ತರಿಗೆ ಕೊವಿಡ್ ಲಸಿಕೆ ನೀಡಲಾಗಿದೆ. ಈ ಪೈಕಿ ಶೇ 80ರಷ್ಟು ಆರೋಗ್ಯ ಕಾರ್ಯಕರ್ತರು 2ನೇ ಡೋಸ್ ಪಡೆದುಕೊಂಡಿದ್ದಾರೆ. ಕೊವ್ಯಾಕ್ಸಿನ್ ಪಡೆದವರ ಪೈಕಿ ಶೇ 0.04ರಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೊವಿಶೀಲ್ಡ್ 2ನೇ ಡೋಸ್ ಪಡೆದ ಕೆಲವರಲ್ಲಿಯೂ ಕೊರೊನಾ ದೃಢಪಟ್ಟಿದೆ. ಕೊವಿಶೀಲ್ಡ್ ಪಡೆದ ಶೇ 0.03ರಷ್ಟು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಲಸಿಕ ಪಡೆದ ಬಳಿಕ 5,709 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ಅವರು ತಿಳಿಸಿದರು.

Vaccination-Details

ವ್ಯಾಕ್ಸಿನ್ ಪಡೆದವರಲ್ಲಿ ಕೊರೊನಾ ದೃಢಪಟ್ಟ ವಿವರ

ಭಾರತದಲ್ಲಿ 3ನೇ ಅಲೆ ಭಾರತದಲ್ಲಿ ಕೊರೊನಾ 2ನೇ ಅಲೆ ವ್ಯಾಪಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿಯೇ ಕೆಲ ರಾಜ್ಯಗಳಲ್ಲಿ ಕೊರೊನಾ ಸೋಂಕಿನ 3ನೇ ಅಲೆ ಪತ್ತೆಯಾಗಿದೆ. ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳಗಳಲ್ಲಿ 3ನೇ ಅಲೆ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಸಕ್ರಿಯ ಪ್ರಕರಣ ದ್ವಿಗುಣ ಈ ವರ್ಷ ಕೊರೊನಾ ಸಕ್ರಿಯ ಪ್ರಕರಣಗಳು ದ್ವಿಗುಣಗೊಂಡಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ. ಪ್ರಸ್ತುತ ದೇಶದಲ್ಲಿ 21,57,000 (21 ಲಕ್ಷ) ಸಕ್ರಿಯ ಪ್ರಕರಣಗಳಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟು ಸಂಖ್ಯೆಯಾಗುತ್ತೆ. ಈವರೆಗೆ ದೇಶದಲ್ಲಿ 13 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 30 ಲಕ್ಷ ಡೋಸ್​ಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

(Elder people died in more number in 2nd wave of coronavirus says ICMR)

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ ಇಂದು 23,558 ಮಂದಿಗೆ ಸೋಂಕು, ಕೊರೊನಾದಿಂದ 116 ಜನರ ಸಾವು

ಇದನ್ನೂ ಓದಿ: Chiranjeevi Free Vaccine : ಸಿನಿರಂಗದಲ್ಲಿ ಕೆಲಸ ಮಾಡುವವರಿಗೆ, ಸಿನಿ ಪತ್ರಕರ್ತರಿಗೆ ಮೆಗಾಸ್ಟಾರ್‌ ಚಿರಂಜೀವಿಯಿಂದ ಉಚಿತ ಕೊರೊನಾ ಲಸಿಕೆ.!

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ