ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿ ನಡೆದಿದ್ದು, ಪಾಕ್‌ಗೆ ಭಾರತೀಯ ಸೇನೆಯಿಂದಲೂ ತಕ್ಕ ಪ್ರತ್ಯುತ್ತರ ಸಿಕ್ಕಿದೆ. ಭಾರತದ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಪಾಕಿಸ್ತಾನ ಸೇನೆಯ 11 ಯೋಧರ ಹತ್ಯೆಯಾಗಿದೆ.
16 ಸೈನಿಕರು ಗಾಯಗೊಂಡಿದ್ದಾರೆ. ಈ ಹಿಂದೆ, ಕದನ ವಿರಾಮ ಉಲ್ಲಂಘನೆಗಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆಯ ಗುಂಡಿನ ದಾಳಿಯಲ್ಲಿ ಏಳು ರಿಂದ ಎಂಟು ಪಾಕಿಸ್ತಾನ ಸೇನಾ ಸೈನಿಕರು ಸಾವನ್ನಪ್ಪಿದ್ದರು. ಮೃತಪಟ್ಟ ಪಾಕಿಸ್ತಾನ ಸೇನಾ ಸೈನಿಕರ ಪಟ್ಟಿಯಲ್ಲಿ ಎರಡು-ಮೂರು ಪಾಕಿಸ್ತಾನ ಎಸ್‌ಎಸ್‌ಜಿ ಕಮಾಂಡೋಗಳು ಸೇರಿದ್ದಾರೆ.
ಭಾರತೀಯ ಸೇನೆಯ ಗುಂಡಿನ ದಾಳಿಯಲ್ಲಿ 10-12 ಪಾಕಿಸ್ತಾನ ಸೇನಾ ಸೈನಿಕರು ಗಾಯಗೊಂಡಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆಯ ಪಾಕಿಸ್ತಾನ ಸೇನೆಯ ಬಂಕರ್‌ಗಳು, ಇಂಧನ ಡಂಪ್‌ಗಳು ಮತ್ತು ಲಾಂಚ್ ಪ್ಯಾಡ್‌ಗಳು ಸಹ ನಾಶವಾಗಿವೆ. ಎಲ್‌ಒಸಿಯ ಉದ್ದಕ್ಕೂ ವಿವಿಧ ಕಡೆ ಪಾಕಿಸ್ತಾನ ಸೇನೆಯು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು ಅದಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ.
Published On - 6:37 am, Sat, 14 November 20